ಕ್ರೈಮ್ ನ್ಯೂಸ್

ಗಾಂಜಾ ಸೇವಿಸಿ, ತಲವಾರ್ ತೋರಿಸಿ ಬೆದರಿಕೆ ➤ ಆರೋಪಿ ಅರೆಸ್ಟ್

(ನ್ಯೂಸ್ ಕಡಬ) newskadaba.com ವಿಟ್ಲ, ಡಿ. 08. ಹಾಡಹಗಲೇ ವ್ಯಕ್ತಿಯೋರ್ವರಿಗೆ ತಲವಾರು ತೋರಿಸಿ ಬೆದರಿಕೆ ಹಾಕಿದ ಆರೋಪಿಯನ್ನು ಬಂಧಿಸಿದ ಘಟನೆ ಉರಿಮಜಲು ಜಂಕ್ಷನ್ ನಲ್ಲಿ ನಡೆದಿದೆ. ಬಂಧಿತನನ್ನು ರವೂಫ್ ಉರಿಮಜಲು ಎಂಬವರ ಪುತ್ರ ಆಫೀಲ್ ಎಂದು ಗುರುತಿಸಲಾಗಿದೆ. ಗಾಂಜಾ ಸೇವಿಸಿದ್ದ ಈತ ಸಾರ್ವಜನಿಕ ಸ್ಥಳದಲ್ಲಿ ತಲವಾರು ಝಲಪಿಸಿ, ಸಾರ್ವಜನಿಕರಿಗೆ ಭಯ ಹುಟ್ಟಿಸುವ ವಾತಾವರಣ ನಿರ್ಮಾಣ ಮಾಡಿದ್ದು, ಈತನನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ. ಈತ ಈ ಹಿಂದೆ ಅಕ್ರಮ ಗೋ ಸಾಗಾಟದಲ್ಲಿ ಸಿಕ್ಕಿ ಬಿದ್ದಿದ್ದನು. ಇಂದು ಆಫೀಲ್ ತಲವಾರು […]

ಗಾಂಜಾ ಸೇವಿಸಿ, ತಲವಾರ್ ತೋರಿಸಿ ಬೆದರಿಕೆ ➤ ಆರೋಪಿ ಅರೆಸ್ಟ್ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

KGF- 2 ಖ್ಯಾತಿಯ ತಾತ ಕೃಷ್ಣ ಜಿ ರಾವ್ ನಿಧನ

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ. 07. ಕೆಜಿಎಫ್ ಸಿನಿಮಾದಲ್ಲಿ (KGF 2) ಕುರುಡ ಮುದುಕನ ಪಾತ್ರ ನಿಭಾಯಿಸಿದ್ದ ಹಿರಿಯ ನಟ ಕೃಷ್ಣ.ಜಿ.ರಾವ್ ನಿಧನರಾಗಿದ್ದಾರೆ.   ಡಿಸೆಂಬರ್ 1ರಂದು ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆ ಫಲಿಸದೇ ಬುಧವಾರದಂದು ಮೃತಪಟ್ಟಿದ್ದಾರೆ. ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದ ಕೃಷ್ಣ ಜಿ ರಾವ್ ಅವರ ಆರೋಗ್ಯ ಸ್ಥಿತಿಯು ತುಂಬ ಗಂಭೀರವಾಗಿದ್ದ ಹಿನ್ನೆಲೆ ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಿದರೂ ಚಿಂತಾಜನಕ ಸ್ಥಿತಿಗೆ ತಲುಪಿದ್ದ ಇವರು ನಿಧನರಾಗಿದ್ದಾರೆ.

KGF- 2 ಖ್ಯಾತಿಯ ತಾತ ಕೃಷ್ಣ ಜಿ ರಾವ್ ನಿಧನ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಸರ್ವೆ- ಕೆರೆಗೆ ಬಿದ್ದು ಯುವಕ ಮೃತ್ಯು

ಪುತ್ತೂರು: ಯುವಕನೋರ್ವ ಬಾವಿಗೆ ಬಿದ್ದು, ಮೃತಪಟ್ಟ ಘಟನೆ ಸರ್ವೆ ಗ್ರಾಮದ ಬೊಟ್ಯಾಡಿಯಲ್ಲಿ ಡಿ. 6 ರಂದು ನಡೆದಿದೆ. ಸರ್ವೆ ಗ್ರಾಮದ ಕಡ್ಯ ನಿವಾಸಿ ಕುಶಾಲಪ್ಪ ಗೌಡ(39) ಅವರು ಬೊಟ್ಯಾಡಿಯ ಅನಂತ ಭಂಡಾರಿಯವರ ಮನೆಯ ತೋಟದಲ್ಲಿ ತೆಂಗಿನಕಾಯಿ ತೆಗೆಯುವ ವೇಳೆ ಅಕಸ್ಮಿಕವಾಗಿ ತೋಟದ ಕೆರೆಗೆ ಬಿದ್ದು, ಮೃತಪಟ್ಟ ಘಟನೆ ನಡೆದಿದೆ.

ಸರ್ವೆ- ಕೆರೆಗೆ ಬಿದ್ದು ಯುವಕ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್

ಕಾಡು ಹಂದಿಗೆ ಹಾರಿಸಿದ ಗುಂಡು ತಗುಲಿ ವ್ಯಕ್ತಿ ಮೃತ್ಯು

(ನ್ಯೂಸ್ ಕಡಬ) newskadaba.com ಹಾಸನ, ಡಿ.07  ಕಾಡು ಹಂದಿಗೆ  ಹಾರಿಸಿದ ಗುಂಡು ವ್ಯಕ್ತಿಯೋರ್ವರಿಗೆ ತಗುಲಿ ಮೃತಪಟ್ಟ ಘಟನೆ ಅರಸೀಕೆರೆ ತಾಲೂಕಿನ ಬಸವರಾಜಪುರ ಗ್ರಾಮದಲ್ಲಿ ಸಂಭವಿಸಿದೆ.   ಮೃತಪಟ್ಟ ವ್ಯಕ್ತಿಯನ್ನು ಸುರೇಶ್ (44) ಎಂದು ಗುರುತಿಸಲಾಗಿದೆ. ಚಿಕ್ಕೂರು ತಾಂಡ್ಯದ ಗಂಗನಾಯ್ಕ ಹಾಗೂ ನಂದೀಶ್ ಎಂಬವರು ಕಾಡು ಹಂದಿಯ ಬೇಟೆಗೆ ತೆರಳಿದ್ದ ವೇಳೆ ಹೊಡೆದ ಗುಂಡು ಮಿಸ್ ಫೈರ್ ಆಗಿ ಸುರೇಶ್ ಎಂಬವರಿಗೆ ತಗುಲಿದ್ದರಿಂದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಕುರಿತು ಗಂಡನ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆಂದು

ಕಾಡು ಹಂದಿಗೆ ಹಾರಿಸಿದ ಗುಂಡು ತಗುಲಿ ವ್ಯಕ್ತಿ ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಭೀಕರ ರಸ್ತೆ ಅಪಘಾತ ➤ ದಂಪತಿಗಳು ಸ್ಥಳದಲ್ಲಿಯೇ ಮೃತ್ಯು

(ನ್ಯೂಸ್ ಕಡಬ ) newskadaba. com  ವಿಜಯಪುರ .ಡಿ.07. ನಿಂತಿದ್ದ ಕಂಟೈನರ್ ಗೆ ಹಿಂಬದಿಯಿಂದ ಬಂದ ಕಾರೊಂದು ಡಿಕ್ಕಿ   ಹೊಡೆದ ಪರಿಣಾಮ ದಂಪತಿಗಳಿಬ್ಬರು ಮೃತಪಟ್ಟ ಘಟನೆ ವಿಜಯಪುರದ ಸಿಂದಗಿ ಸರ್ಕಲ್ ಬಳಿ ಸಂಭವಿಸಿದೆ.   ಮೃತಪಟ್ಟವರನ್ನು ಕೊಪ್ಪಳ ಜಿಲ್ಲೆಯ ಸಿಪಿಐ ರವಿ ಉಕ್ಕುಂದ ಹಾಗೂ ಅವರ ಪತ್ನಿ ಮಧು ಎಂದು ಗುರುತಿಸಲಾಗಿದೆ. ಇವರು ಸಿಂದಗಿಯಿಂದ ಕಲಬುರ್ಗಿಗೆ ಸ್ವಿಫ್ಟ್ ಡಿಸೈರ್ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಘಟನೆಯಿಂದ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ದಂಪತಿಗಳು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ

ಭೀಕರ ರಸ್ತೆ ಅಪಘಾತ ➤ ದಂಪತಿಗಳು ಸ್ಥಳದಲ್ಲಿಯೇ ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

➤ *ಜೀಪು ನಿಲ್ಲಿಸುವ ವೇಳೆ ಹೃದಯಾಘಾತ- ಚಾಲಕ ಸಾವು*

(ನ್ಯೂಸ್ ಕಡಬ) news kadaba.com ಉಪ್ಪಿನಂಗಡಿ, ಡಿ.7. ಉಪ್ಪಿನಂಗಡಿ:  ಜೀಪು ಚಲಾಯಿಸಿಕೊಂಡು ಅಸ್ಪತ್ರೆಗೆಂದು ಬಂದ ವ್ಯಕ್ತಿಯೊರ್ವರು  ಜೀಪು ನಿಲ್ಲಿಸುವ ವೇಳೆ ಹೃದಯಸ್ತಂಭನಕ್ಕೆ ಒಳಗಾದ ಘಟನೆ ಡಿ.7 ರಂದು ಉಪ್ಪಿನಂಗಡಿಯಲ್ಲಿ ನಡೆದಿದೆ. ಕೊಯಿಲ ಗ್ರಾಮದ ವಿಶ್ವನಾಥ (50) ಎಂಬವರು ಹೃದಯಸ್ತಂಭನಕ್ಕೆ ಒಳಗಾಗಿ ಸಾವನಪ್ಪಿರುವ  ವ್ಯಕ್ತಿಯಾಗಿದ್ದಾರೆ.  ಇವರು ಪತ್ನಿ,  ಇಬ್ಬರು ಹೆಣ್ಣು ಮಕ್ಕಳನ್ನು ಅಗಳಿದ್ದಾರೆ.

➤ *ಜೀಪು ನಿಲ್ಲಿಸುವ ವೇಳೆ ಹೃದಯಾಘಾತ- ಚಾಲಕ ಸಾವು* Read More »

ಕರಾವಳಿ, ಕ್ರೈಮ್ ನ್ಯೂಸ್

ಮಕ್ಕಳಿಬ್ಬರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪಾಪಿ ತಾಯಿ ➤ ಓರ್ವ ಮಗು ಮೃತ್ಯು

(ನ್ಯೂಸ್ ಕಡಬ) newskadaba.com ಕೋಲಾರ, ಡಿ. 07. ಪೆಟ್ರೋಲ್ ಸುರಿದು ಇಬ್ಬರು ಮಕ್ಕಳಿಗೆ ಸ್ವತಃ ತಾಯಿಯೇ ಬೆಂಕಿ ಹಚ್ಚಿದ ಪರಿಣಾಮ ಒಂದು ಮಗು ಮೃತಪಟ್ಟು, ಇನ್ನೋರ್ವ ಮಗು ಗಂಭೀರ ಗಾಯಗೊಂಡ ಘಟನೆ ಬುಧವಾರದಂದು ಕೋಲಾರ ಜಿಲ್ಲೆಯ ಮುಳಬಾಗಿಲು ಎಂಬಲ್ಲಿ ಸಂಭವಿಸಿದೆ. ಕೃತ್ಯ ಎಸಗಿರುವ ಸ್ಥಳಕ್ಕೆ ಪೊಲೀಸರು ಬೇಟಿ ನೀಡಿ  ಗಾಯಾಳು ಮಗುವನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.  ಕೃತ್ಯಕ್ಕೆ ಕಾರಣ ತಿಳಿದುಬಂದಿಲ್ಲ.  

ಮಕ್ಕಳಿಬ್ಬರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪಾಪಿ ತಾಯಿ ➤ ಓರ್ವ ಮಗು ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಬಾಡಿಗೆ ಮನೆಯಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ದಂಧೆಗೆ- ಪೊಲೀಸ್ ದಾಳಿ ➤ ನಾಲ್ವರು ಅಂದರ್

(ನ್ಯೂಸ್ ಕಡಬ) newskadaba.com ಉಳ್ಳಾಲ, ಡಿ. 07. ಬಾಡಿಗೆ ಮನೆಯೊಂದರಲ್ಲಿ ಯುವತಿಯರನ್ನು ಇಟ್ಟುಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದುದಲ್ಲದೆ ಜೊತೆಗೆ ಮಾಂಸ ಧಂದೆ ನಡೆಸುತ್ತಿದ್ದ ಸ್ಥಳಕ್ಕೆ ಉಳ್ಳಾಲ ಪೊಲೀಸರು ದಾಳಿ ನಡೆಸಿ ದಂಪತಿ ಸಹಿತ ನಾಲ್ವರನ್ನ ವಶಕ್ಕೆ ಪಡೆದ ಘಟನೆ ಕೋಟೆಕಾರು ಬೀರಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ನಡೆದಿದೆ.     ಬಂಧಿತರನ್ನು ಬೀರಿ ಬಾಡಿಗೆ ಮನೆ ನಿವಾಸಿ ಮೊಹಮ್ಮದ್ ಇಕ್ಬಾಲ್, ಪತ್ನಿ ಅಲಿಮಮ್ಮ, ಉಳ್ಳಾಲ ನಿವಾಸಿ ಶರ್ಫುದ್ದೀನ್ ಹಾಗೂ ಇರ್ಶಾದ್ ಅಡ್ಯನಡ್ಕ ಎಂದು ಗುರಿತಿಸಲಾಗಿದೆ. ಮೊಹಮ್ಮದ್ ಇಕ್ಬಾಲ್

ಬಾಡಿಗೆ ಮನೆಯಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ದಂಧೆಗೆ- ಪೊಲೀಸ್ ದಾಳಿ ➤ ನಾಲ್ವರು ಅಂದರ್ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಕೊಳವೆ ಬಾವಿಗೆ ಬಿದ್ದ ಬಾಲಕ ➤ ಮುಂದುವರಿದ ರಕ್ಷಣಾ ಕಾರ್ಯಾಚರಣೆ

(ನ್ಯೂಸ್ ಕಡಬ) newskadaba.com ಮಧ್ಯಪ್ರದೇಶ, ಡಿ. 07. ಮೈದಾನದಲ್ಲಿ ಆಟವಾಡುತ್ತಿದ್ದ ಬಾಲಕನೋರ್ವನು ಆಕಸ್ಮಿಕವಾಗಿ ಕೊಳವೆಬಾವಿಗೆ ಬಿದ್ದ ಆತಂಕಕಾರಿ ಘಟನೆ ಬುಧವಾರದಂದು ಮಧ್ಯಪ್ರದೇಶದ ಬೆತುಲ್ ಜಿಲ್ಲೆಯ ಮಾಂಡವಿ ಗ್ರಾಮದಲ್ಲಿ ನಡೆದಿದೆ.   ಕೊಳವೆಬಾವಿಗೆ ಬಿದ್ದ ಬಾಲಕ ತನ್ಮಯ್ ಎಂದು ಗುರುತಿಸಲಾಗಿದೆ. ಈತ ಆಟವಾಡುತ್ತಿದ್ದ ವೇಳೆ ಕೊಳವೆಬಾವಿಗೆ ಬಿದ್ದಿದ್ದಾನೆ ಎನ್ನಲಾಗಿದೆ. ಬಾಲಕನ ರಕ್ಷಣಾ ಕಾರ್ಯಚರಣೆ ನಡೆಸಲಾಗುತ್ತಿದ್ದು, ಆಕ್ಸಿಜನ್ ಒದಗಿಸುವ ವ್ಯವಸ್ಥೆಯು ಸಹ ನಡೆಯುತ್ತಿದೆ ಎಂದು ವರದಿ ತಿಳಿಸಿದೆ..  

ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಕೊಳವೆ ಬಾವಿಗೆ ಬಿದ್ದ ಬಾಲಕ ➤ ಮುಂದುವರಿದ ರಕ್ಷಣಾ ಕಾರ್ಯಾಚರಣೆ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ತೆಂಗಿನ ಮರ ಬಿದ್ದು ಮಹಿಳೆ ಗಂಭೀರ

(ನ್ಯೂಸ್ ಕಡಬ) newskadaba.com  ಸುಳ್ಳ, ಡಿ. 07.  ಮಹಿಳೆಯ ಮೇಲೆ   ತೆಂಗಿನ ಮರ ಬಿದ್ದ   ಪರಿಣಾಮ ಮಹಿಳೆಯೋರ್ವರು  ಗಾಯಗೊಂಡ  ಘಟನೆ  ಬುಧವಾರದಂದು ಸುಳ್ಳದ  ಅರಂತೋಡಿನಲ್ಲಿ ಸಂಭವಿಸಿದೆ.   ಗಾಯಗೊಂಡವರನ್ನು  ಬಾಲಣ್ಣರವರ ಪತ್ನಿ ಕಮಲ  ಎಂದು ಗುರುತಿಸಲಾಗಿದೆ. ಇವರು  ಮೇದಪ್ಪಗೌಡ  ಎಂಬವರ  ತೋಟದಲ್ಲಿ  ಅಡಿಕೆ ಹೆಕ್ಕುತ್ತಿದ್ದ ವೇಳೆ  ಈ ದುರ್ಘಟನೆ  ನಡೆದಿದ್ದು. ತೀವ್ರ ಗಾಯಗೊಂಡ  ಇವರನ್ನು ಸುಳ್ಳದ  ಖಾಸಗಿ  ಅಸ್ಪತ್ರೆಗೆ  ದಾಖಲಿಸಲಾಗಿದೆ.    

ತೆಂಗಿನ ಮರ ಬಿದ್ದು ಮಹಿಳೆ ಗಂಭೀರ Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top