ಮಂಗಳೂರು: ಪತ್ನಿಯನ್ನೇ ಕೊಲೆಗೈದ ಪತಿ..! ➤‌ ಆರೋಪಿ ವಶಕ್ಕೆ



(ನ್ಯೂಸ್ ಕಡಬ) newskadaba.com ಮಂಗಳೂರು, ನ. 28. ಪತಿಯೇ ಪತ್ನಿಯನ್ನು ಕೊಲೆಗೈದ ಹೃದಯ ವಿದ್ರಾವಕ ಘಟನೆ ಬಜ್ಪೆ ಪೋಲಿಸ್‌ ಠಾಣಾ ವ್ಯಾಪ್ತಿಯ ತೆಂಕಯೆಕ್ಕಾರು ದುರ್ಗಾನಗರ ಬಳಿ ಭಾನುವಾರದಂದು ನಡೆದಿದೆ.







ಕೊಲೆಯಾದ ಮಹಿಳೆಯನ್ನು ಸರಿತಾ (35) ಎಂದು ಗುರುತಿಸಲಾಗಿದೆ. ಕೊಲೆ ಆರೋಪಿ ಪತಿ ದುರ್ಗೇಶ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಭಾನುವಾರದಂದು ರಾತ್ರಿ ಪತಿ -ಪತ್ನಿ ನಡುವೆ ಜಗಳವುಂಟಾಗಿದ್ದು, ಈ ಸಂದರ್ಭ ಪತ್ನಿ ಸರಿತಾಳ ಮೇಲೆ ದುರ್ಗೇಶ್ ಕಟ್ಟಿಗೆಯಿಂದ ಹಲ್ಲೆ ಮಾಡಿದ್ದು, ಇದೆಲ್ಲವನ್ನು ಕಂಡ ದಂಪತಿಯ ಹನ್ನೊಂದು ವರ್ಷದ ಮಗನೋರ್ವ ಹೆದರಿ ಓಡಿಹೋಗಿದ್ದಾನೆ ಎನ್ನಲಾಗಿದೆ. ಇತ್ತ ತೀವ್ರ ರಕ್ತಸ್ರಾವದಿಂದಾಗಿ ಸರಿತಾ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಕುರಿತು ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






error: Content is protected !!
Scroll to Top