ಬ್ರೇಕಿಂಗ್ ನ್ಯೂಸ್

ದೆಹಲಿಯ ಜಂತರ್‌ ಮಂತರ್‌ನಲ್ಲಿ ʻಕಾಕ್ರೋಚ್‌ʼ ಜನತಾ ಪಾರ್ಟಿಯ ಪ್ರತಿಭಟನೆ ಕಿಚ್ಚು

(ನ್ಯೂಸ್‌ ಕಡಬ) newskadaba.com,  ಜೂ.06 ದೆಹಲಿ: ನೀಟ್ ಪರೀಕ್ಷೆ ಅಕ್ರಮ ಹಾಗೂ ಪ್ರಶ್ನೆಪತ್ರಿಕೆ ಸೋರಿಕೆ ಹಗರಣವನ್ನು ಖಂಡಿಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ‘ಕಾಕ್ರೋಚ್ ಜನತಾ ಪಾರ್ಟಿ’ ವತಿಯಿಂದ ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ಆರಂಭವಾಗಿದೆ. ಅಮೆರಿಕದ ಬೋಸ್ಟನ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಹಾಗೂ ಪಕ್ಷದ ಮುಖ್ಯಸ್ಥ ಅಭಿಜಿತ್ ದೀಪ್ಕೆ ಅವರು ಪ್ರತಿಭಟನೆಯ ಮುಂದಾಳತ್ವ ವಹಿಸಲು ದೆಹಲಿಗೆ ಆಗಮಿಸಿದ್ದಾರೆ.ಪ್ರಸಿದ್ಧ ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು, ಚಳವಳಿಗೆ ಮತ್ತಷ್ಟು ತೀವ್ರತೆ […]

ದೆಹಲಿಯ ಜಂತರ್‌ ಮಂತರ್‌ನಲ್ಲಿ ʻಕಾಕ್ರೋಚ್‌ʼ ಜನತಾ ಪಾರ್ಟಿಯ ಪ್ರತಿಭಟನೆ ಕಿಚ್ಚು Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಮಂಗಳೂರು : ಕೇರಳದ ಲಾಟರಿ ಖರೀದಿಸಿದ ವ್ಯಕ್ತಿಗೆ ವಂಚನೆ – ಪ್ರಕರಣ ದಾಖಲು

(ನ್ಯೂಸ್‌ ಕಡಬ) newskadaba.com,  ಜೂ.06 ಮಂಗಳೂರು: ಫೇಸ್‌ಬುಕ್‌ನಲ್ಲಿ ಬಂದ ಕೇರಳ ಲಾಟರಿಯ ನಕಲಿ ಜಾಹೀರಾತು ನಂಬಿ ಸುರತ್ಕಲ್ ನಿವಾಸಿಯೊಬ್ಬರು ₹1.85 ಲಕ್ಷ ಕಳೆದುಕೊಂಡು ವಂಚನೆಗೊಳಗಾಗಿದ್ದಾರೆ. ಈ ಸಂಬಂಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೇ 29ರಂದು ಫೇಸ್‌ಬುಕ್‌ನಲ್ಲಿ ₹50 ರ ಲಾಟರಿ ಜಾಹೀರಾತು ನೋಡಿ ಸಂತ್ರಸ್ತರು ₹100 ಪಾವತಿಸಿ ಆನ್‌ಲೈನ್‌ನಲ್ಲಿ 2 ಟಿಕೆಟ್ ಖರೀದಿಸಿದ್ದರು. ಅಂದೇ ಸಂಜೆ ಕರೆ ಮಾಡಿದ ಅಪರಿಚಿತರು, “ನಿಮಗೆ ₹12 ಲಕ್ಷ ಬಹುಮಾನ ಬಂದಿದೆ” ಎಂದು ನಂಬಿಸಿದ್ದರು. ಬಳಿಕ ಬಹುಮಾನದ ಹಣ

ಮಂಗಳೂರು : ಕೇರಳದ ಲಾಟರಿ ಖರೀದಿಸಿದ ವ್ಯಕ್ತಿಗೆ ವಂಚನೆ – ಪ್ರಕರಣ ದಾಖಲು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕಾಂಗ್ರೆಸ್‌ಗೆ ರಾಮಲಿಂಗಾರೆಡ್ಡಿ ಶಾಕ್: ಹೈಕಮಾಂಡ್‌ನ ‘ಡಬಲ್ ಆಫರ್’ ತಿರಸ್ಕರಿಸಿದ ಹಿರಿಯ ನಾಯಕ!

(ನ್ಯೂಸ್‌ ಕಡಬ) newskadaba.com,  ಜೂ.06 : ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹಿರಿಯ ನಾಯಕ ರಾಮಲಿಂಗಾರೆಡ್ಡಿ ಅವರ ನಡೆ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ರೆಡ್ಡಿ ಅವರನ್ನು ಭೇಟಿ ಮಾಡಿ, ಸಹಕಾರ ಮತ್ತು ಮುಜರಾಯಿ ಎರಡೂ ಪ್ರಮುಖ ಖಾತೆಗಳನ್ನು ಒಟ್ಟಿಗೆ ವಹಿಸಿಕೊಳ್ಳುವ ಆಫರ್ ನೀಡಿದ್ದಾರೆ.ಸ್ವಾಭಿಮಾನ ಹಾಗೂ ತಮ್ಮ ರಾಜಕೀಯ ನಿಲುವುಗಳಿಗೆ ಬದ್ಧರಾಗಿರುವ ರಾಮಲಿಂಗಾರೆಡ್ಡಿ, ಹೈಕಮಾಂಡ್‌ನ ಈ ರಾಜಿ ಸೂತ್ರವನ್ನು ತಿರಸ್ಕರಿಸಿದ್ದಾರೆ ಎನ್ನಲಾಗಿದೆ. ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಕಾಂಗ್ರೆಸ್‌ಗೆ ರಾಮಲಿಂಗಾರೆಡ್ಡಿ ಶಾಕ್: ಹೈಕಮಾಂಡ್‌ನ ‘ಡಬಲ್ ಆಫರ್’ ತಿರಸ್ಕರಿಸಿದ ಹಿರಿಯ ನಾಯಕ! Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಹಿರಿಯ ಪತ್ರಕರ್ತ ಜನಾರ್ದನ ಮರವಂತೆ ಇನ್ನಿಲ್ಲ

(ನ್ಯೂಸ್‌ ಕಡಬ) newskadaba.com,  ಜೂ.06 ಕುಂದಾಪುರ: ರಾಷ್ಟ್ರೀಯ ಮಟ್ಟದ ಪಂಚಾಯತ್ ರಾಜ್ ತಜ್ಞ, ಹಿರಿಯ ಪತ್ರಕರ್ತ ಹಾಗೂ ನಿವೃತ್ತ ಪ್ರಾಂಶುಪಾಲರಾದ ಜನಾರ್ದನ ಮರವಂತೆ (88) ಅವರು ಶನಿವಾರ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಇಂಗ್ಲೀಷ್ ಉಪನ್ಯಾಸಕರಾಗಿದ್ದ ಅವರು, ‘ಪ್ರಜಾವಾಣಿ’ ಹಾಗೂ ‘ಉದಯವಾಣಿ’ ಪತ್ರಿಕೆಗಳ ವರದಿಗಾರರಾಗಿ, ಬೈಂದೂರು ಪತ್ರಕರ್ತರ ಸಂಘದ ಸ್ಥಾಪಕ ಅಧ್ಯಕ್ಷರಾಗಿ ಮತ್ತು ಮರವಂತೆ ಗ್ರಾ.ಪಂ. ಅಧ್ಯಕ್ಷರಾಗಿ ರಾಷ್ಟ್ರ ಮಟ್ಟದ ಮನ್ನಣೆ ತಂದುಕೊಟ್ಟಿದ್ದರು. ಜೂನ್ 7ರ ಭಾನುವಾರ ಬೆಳಿಗ್ಗೆ 8 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಮರವಂತೆಯ ‘ಸಾಧನಾ

ಹಿರಿಯ ಪತ್ರಕರ್ತ ಜನಾರ್ದನ ಮರವಂತೆ ಇನ್ನಿಲ್ಲ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬೆಂಗಳೂರು-ಮುಂಬೈ ಇಂಡಿಗೋ ವಿಮಾನಕ್ಕೆ ಹಕ್ಕಿ ಡಿಕ್ಕಿ ಟೇಕಾಫ್ ಆದ ಬೆನ್ನಲ್ಲೇ ತುರ್ತು ಭೂಸ್ಪರ್ಶ

(ನ್ಯೂಸ್‌ ಕಡಬ) newskadaba.com,  ಜೂ.06 ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟೇಕಾಫ್ ಆಗುತ್ತಿದ್ದ ಬೆಂಗಳೂರು-ಮುಂಬೈ ಇಂಡಿಗೋ ವಿಮಾನಕ್ಕೆ (6E-6283) ಹಕ್ಕಿ ಡಿಕ್ಕಿ ಹೊಡೆದ ಘಟನೆ ನಡೆದಿದೆ. ವೇಗವಾಗಿ ಚಲಿಸುತ್ತಿದ್ದಾಗ ಹಕ್ಕಿ ಡಿಕ್ಕಿ ಹೊಡೆದ ಕಾರಣ ಮುನ್ನೆಚ್ಚರಿಕಾ ಕ್ರಮವಾಗಿ ಪೈಲಟ್ ವಿಮಾನವನ್ನು ಮತ್ತೆ ನಿಲ್ದಾಣಕ್ಕೆ ಮರಳಿಸಿದರು. ಬಳಿಕ ತಾಂತ್ರಿಕ ಸಿಬ್ಬಂದಿ ಏರ್‌ಬಸ್ ಎ321 ನಿಯೋ ವಿಮಾನದ ಎರಡೂ ಎಂಜಿನ್‌ಗಳು ಸೇರಿದಂತೆ ಅಗತ್ಯ ತಪಾಸಣೆ ನಡೆಸಿ, ಸುರಕ್ಷಿತವೆಂದು ಘೋಷಿಸಿದರು. ಸಂಜೆ 7:04ಕ್ಕೆ ಹೊರಡಬೇಕಿದ್ದ ವಿಮಾನವು ಈ ತಪಾಸಣೆಯಿಂದಾಗಿ ಒಂದು

ಬೆಂಗಳೂರು-ಮುಂಬೈ ಇಂಡಿಗೋ ವಿಮಾನಕ್ಕೆ ಹಕ್ಕಿ ಡಿಕ್ಕಿ ಟೇಕಾಫ್ ಆದ ಬೆನ್ನಲ್ಲೇ ತುರ್ತು ಭೂಸ್ಪರ್ಶ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಗೆ ಬ್ರೇಕ್: ದೇಶದಲ್ಲೇ ಮೊದಲ ಬಾರಿಗೆ ‘ಎಥನಾಲ್ ಅಡುಗೆ ಸ್ಟವ್’ ಬಿಡುಗಡೆ!

(ನ್ಯೂಸ್‌ ಕಡಬ) newskadaba.com,  ಜೂ.06 ನವದೆಹಲಿ: ದೇಶದಲ್ಲಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಿಂದ ತತ್ತರಿಸಿರುವ ಗ್ರಾಹಕರಿಗೆ ಕೇಂದ್ರ ಸರ್ಕಾರ ಪರ್ಯಾಯ ಮತ್ತು ಪರಿಸರಸ್ನೇಹಿ ಉಪಾಯವೊಂದನ್ನು ಪರಿಚಯಿಸಿದೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಎಲ್‌ಪಿಜಿಗಿಂತ ಕಡಿಮೆ ವೆಚ್ಚದ ‘ಎಥನಾಲ್ ಆಧಾರಿತ ಅಡುಗೆ ಸ್ಟವ್’ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಿದ್ದಾರೆ. ಕಬ್ಬು, ಮೆಕ್ಕೆಜೋಳ ಮತ್ತು ಕೃಷಿ ಜೈವಿಕ ರಾಶಿಯಿಂದ ದೇಶೀಯವಾಗಿಯೇ ಎಥನಾಲ್ ಉತ್ಪಾದಿಸುವುದರಿಂದ, ವಿದೇಶಿ ಕಚ್ಚಾ ತೈಲ ಹಾಗೂ ಗ್ಯಾಸ್ ಆಮದಿನ ಮೇಲಿನ ಅವಲಂಬನೆ ತಪ್ಪಲಿದೆ. ಇದು

ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಗೆ ಬ್ರೇಕ್: ದೇಶದಲ್ಲೇ ಮೊದಲ ಬಾರಿಗೆ ‘ಎಥನಾಲ್ ಅಡುಗೆ ಸ್ಟವ್’ ಬಿಡುಗಡೆ! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಭಾರತದ ಇಂಧನ ಭದ್ರತೆಗೆ ದಾರಿದೀಪ: ‘ಆಯಿಲ್ ಇಂಡಿಯಾ’ ಸಾಧನೆ

  (ನ್ಯೂಸ್‌ ಕಡಬ) newskadaba.com,  ಜೂ.06 ನವದೆಹಲಿ: ಭಾರತದ ಇಂಧನ ಸ್ವಾವಲಂಬನೆ ಮತ್ತು ಭದ್ರತೆಯ ಕನಸಿಗೆ ದಾರಿದೀಪವೆಂಬಂತೆ ಅಂಡಮಾನ್ ಸಮುದ್ರ ಪ್ರದೇಶದಲ್ಲಿ ಬೃಹತ್ ಪ್ರಮಾಣದ ನೈಸರ್ಗಿಕ ಅನಿಲ ನಿಕ್ಷೇಪ ಪತ್ತೆಯಾಗಿದೆ. ಈ ಐತಿಹಾಸಿಕ ಮೈಲಿಗಲ್ಲು ಭವಿಷ್ಯದಲ್ಲಿ ವಿದೇಶಿ ಇಂಧನ ಆಮದಿನ ಮೇಲಿನ ಭಾರತದ ಅವಲಂಬನೆಯನ್ನು ಗಣನೀಯವಾಗಿ ಕಡಿಮೆ ಮಾಡುವ ನಿರೀಕ್ಷೆ ಮೂಡಿಸಿದೆ. ಸರ್ಕಾರಿ ಸ್ವಾಮ್ಯದ ಪ್ರಮುಖ ಇಂಧನ ಸಂಸ್ಥೆಯಾದ ಆಯಿಲ್ ಇಂಡಿಯಾ ಲಿಮಿಟೆಡ್ ಈ ಮಹತ್ತರ ಪರಿಶೋಧನೆಯನ್ನು ಕೈಗೊಂಡಿದೆ. ಅಂಡಮಾನ್ ದ್ವೀಪಗಳ ಪೂರ್ವ ಕರಾವಳಿಯಿಂದ ಸುಮಾರು 15

ಭಾರತದ ಇಂಧನ ಭದ್ರತೆಗೆ ದಾರಿದೀಪ: ‘ಆಯಿಲ್ ಇಂಡಿಯಾ’ ಸಾಧನೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಭಾರತಕ್ಕೆ ಐತಿಹಾಸಿಕ ಗೌರವ – ನಾರ್ವೆ ಚೆಸ್ ಚಾಂಪಿಯನ್ ಆದ ಪ್ರಜ್ಞಾನಂದ!

(ನ್ಯೂಸ್‌ ಕಡಬ) newskadaba.com,  ಜೂ.06 ನವದೆಹಲಿ:ಭಾರತದ 20 ವರ್ಷದ ಯುವ ಗ್ರಾಂಡ್‌ಮಾಸ್ಟರ್ ಆರ್. ಪ್ರಜ್ಞಾನಂದ ಅವರು ಪ್ರತಿಷ್ಠಿತ ನಾರ್ವೆ ಚೆಸ್ 2026 ಟೂರ್ನಿಯಲ್ಲಿ ಚಾಂಪಿಯನ್ ಆಗುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಟೂರ್ನಿಯ ಮಧ್ಯಭಾಗದಲ್ಲಿ ಸತತ ಸೋಲು ಕಂಡು ಕೊನೆಯ ಸ್ಥಾನಕ್ಕೆ ಕುಸಿದಿದ್ದ ಪ್ರಜ್ಞಾನಂದ, ನಂತರ ಅದ್ಭುತವಾಗಿ ಪುಟಿದೆದ್ದು ಸತತ 4 ಪಂದ್ಯಗಳನ್ನು ಗೆದ್ದರು.ಕೊನೆಯ ಪಂದ್ಯದಲ್ಲಿ ಜರ್ಮನಿಯ ವಿನ್ಸೆಂಟ್ ಕೀಮರ್ ವಿರುದ್ಧ ಕಡ್ಡಾಯವಾಗಿ ಗೆಲ್ಲಬೇಕಾದ ಒತ್ತಡದಲ್ಲೂ ಭರ್ಜರಿ ಜಯ ಸಾಧಿಸಿ, ಒಟ್ಟು 18 ಅಂಕಗಳೊಂದಿಗೆ ಅಗ್ರಸ್ಥಾನಕ್ಕೇರಿದರು. ಕಾರ್ಲ್‌ಸನ್‌ಗೆ ‘ಡಬಲ್

ಭಾರತಕ್ಕೆ ಐತಿಹಾಸಿಕ ಗೌರವ – ನಾರ್ವೆ ಚೆಸ್ ಚಾಂಪಿಯನ್ ಆದ ಪ್ರಜ್ಞಾನಂದ! Read More »

ಕರಾವಳಿ, ಕರ್ನಾಟಕ, ಕ್ರೀಡಾ ನ್ಯೂಸ್, ಬ್ರೇಕಿಂಗ್ ನ್ಯೂಸ್

ರಾಮಲಿಂಗಾರೆಡ್ಡಿ ರೆಡ್ಡಿ, ಮುನಿಯಪ್ಪ ಬಳಿಕ ಈಗ ಸತೀಶ್‌ ಜಾರಕಿಹೊಳಿ ತಗಾದೆ

(ನ್ಯೂಸ್‌ ಕಡಬ) newskadaba.com ಜೂ. 06. ಖಾತೆಗಾಗಿ ರಾಮಲಿಂಗಾರೆಡ್ಡಿ, ಕೆ.ಎಚ್‌.ಮುನಿಯಪ್ಪ ಅವರ ತಗಾದೆ ಬಳಿಕ ಮತ್ತೊಬ್ಬ ಸಚಿವರು ಸಿಡಿಮಿಡಿಗೊಳ್ಳುತ್ತಿದ್ದು, ಸಮಾಜ ಕಲ್ಯಾಣ ಖಾತೆಗಾಗಿ ಪಟ್ಟುಹಿಡಿದಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರಮಾಪ್ತರಾಗಿರುವ ಸತೀಶ್‌ ಜಾರಕಿಹೊಳಿ ಲೋಕೋಪಯೋಗಿ ಖಾತೆ ಜೊತೆಗೆ ಅಥವಾ ಬದಲಾಗಿ ಸಮಾಜಕಲ್ಯಾಣ ಖಾತೆ ನೀಡುವಂತೆ ಒತ್ತಡ ಹೇರಿದ್ದು, ಕಾಂಗ್ರೆಸ್‌‍ಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಸಮಾಜ ಕಲ್ಯಾಣ ಖಾತೆಯ ಮೇಲೆ ಸಚಿವ ಕೆ.ಎಚ್‌. ಮುನಿಯಪ್ಪ ಕೂಡ ಕಣ್ಣಿಟ್ಟಿದ್ದಾರೆ. ನಮಗೂ ಅದೇ ಖಾತೆ ಬೇಕೆಂದು ಸತೀಶ್‌ ಜಾರಕಿಹೊಳಿ, ಹೈಕಮಾಂಡ್‌

ರಾಮಲಿಂಗಾರೆಡ್ಡಿ ರೆಡ್ಡಿ, ಮುನಿಯಪ್ಪ ಬಳಿಕ ಈಗ ಸತೀಶ್‌ ಜಾರಕಿಹೊಳಿ ತಗಾದೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಸರ್ಕಾರಿ ಸಿಬ್ಬಂದಿಗೆ ಸಿಎಂ ಖಡಕ್ ಸೂಚನೆ: ಬೆಳಗ್ಗೆ 10ರೊಳಗೆ ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯ

(ನ್ಯೂಸ್‌ ಕಡಬ) newskadaba.com ಜೂ. 06. ಡಿಕೆ ಶಿವಕುಮಾರ್‌ ಮುಖ್ಯಮಂತ್ರಿ ಆಗುತ್ತಿದ್ದಂತೆ ಸರ್ಕಾರಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ರಾಜ್ಯದ ಸರ್ಕಾರಿ ಅಧಿಕಾರಿಗಳು ಇನ್ಮುಂದೆ ಸರಿಯಾದ ಸಮಯಕ್ಕೆ ಆಫೀಸ್‌ಗಳಿಗೆ ಬರುವುದು ಕಡ್ಡಾಯ ಮಾಡಿ ಆದೇಶ ಹೊರಡಿಸಿದ್ದು, ಬೆಳಗ್ಗೆ 10 ಗಂಟೆಯೊಳಗೆ ಹಾಜರಾಗಬೇಕು ಎಂದು ಸಿಎಂ ಸೂಚಿಸಿದ್ದಾರೆ.   ರಾಜ್ಯದ ಸರ್ಕಾರಿ ಕಚೇರಿಗಳಲ್ಲಿ ಪಾರದರ್ಶಕ ಆಡಳಿತ ತರುವ ಉದ್ದೇಶದಿಂದ ಬಯೋಮೆಟ್ರಿಕ್‌ ವ್ಯವಸ್ಥೆ ಬದಲಾಗಿ ಕೃತಕ ಬುದ್ಧಿಮತ್ತೆ (AI) ಮತ್ತು ಜಿಪಿಎಸ್‌ ಆಧರಿತ ಹಾಜರಾತಿಯನ್ನ ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗಿದೆ. ರಾಜ್ಯ ಸರ್ಕಾರದ

ಸರ್ಕಾರಿ ಸಿಬ್ಬಂದಿಗೆ ಸಿಎಂ ಖಡಕ್ ಸೂಚನೆ: ಬೆಳಗ್ಗೆ 10ರೊಳಗೆ ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top