ರಾಮಲಿಂಗಾರೆಡ್ಡಿ ರೆಡ್ಡಿ, ಮುನಿಯಪ್ಪ ಬಳಿಕ ಈಗ ಸತೀಶ್‌ ಜಾರಕಿಹೊಳಿ ತಗಾದೆ



(ನ್ಯೂಸ್‌ ಕಡಬ) newskadaba.com ಜೂ. 06. ಖಾತೆಗಾಗಿ ರಾಮಲಿಂಗಾರೆಡ್ಡಿ, ಕೆ.ಎಚ್‌.ಮುನಿಯಪ್ಪ ಅವರ ತಗಾದೆ ಬಳಿಕ ಮತ್ತೊಬ್ಬ ಸಚಿವರು ಸಿಡಿಮಿಡಿಗೊಳ್ಳುತ್ತಿದ್ದು, ಸಮಾಜ ಕಲ್ಯಾಣ ಖಾತೆಗಾಗಿ ಪಟ್ಟುಹಿಡಿದಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರಮಾಪ್ತರಾಗಿರುವ ಸತೀಶ್‌ ಜಾರಕಿಹೊಳಿ ಲೋಕೋಪಯೋಗಿ ಖಾತೆ ಜೊತೆಗೆ ಅಥವಾ ಬದಲಾಗಿ ಸಮಾಜಕಲ್ಯಾಣ ಖಾತೆ ನೀಡುವಂತೆ ಒತ್ತಡ ಹೇರಿದ್ದು, ಕಾಂಗ್ರೆಸ್‌‍ಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.







ಸಮಾಜ ಕಲ್ಯಾಣ ಖಾತೆಯ ಮೇಲೆ ಸಚಿವ ಕೆ.ಎಚ್‌. ಮುನಿಯಪ್ಪ ಕೂಡ ಕಣ್ಣಿಟ್ಟಿದ್ದಾರೆ. ನಮಗೂ ಅದೇ ಖಾತೆ ಬೇಕೆಂದು ಸತೀಶ್‌ ಜಾರಕಿಹೊಳಿ, ಹೈಕಮಾಂಡ್‌ ಅವರ ಮುಂದೆ ವಕಾಲತ್ತು ಹಾಕಿರುವುದಾಗಿ ಮೂಲಗಳು ತಿಳಿಸಿವೆ.






ಸಮಾಜ ಕಲ್ಯಾಣ ಇಲಾಖೆ ಕರ್ನಾಟಕದಲ್ಲಿ ಅತ್ಯಂತ ಪ್ರಭಾವಿ ಖಾತೆಯಾಗಿದೆ. ಸುಮಾರು 42 ಸಾವಿರ ಕೋಟಿ ರೂ.ಗಳಷ್ಟು ಅನುದಾನ ಬೇರೆ ಬೇರೆ ಇಲಾಖೆಗಳ ಮೂಲಕ ಖರ್ಚಾಗುತ್ತಿದೆ. ಎಸ್‌‍ಇಪಿ-ಟಿಎಸ್‌‍ಪಿ ಹಿನ್ನೆಲೆಯಲ್ಲಿ ಶೋಷಿತ ಸಮುದಾಯಗಳ ಅಭಿವೃದ್ಧಿಗೆ ಹೆಚ್ಚಿನ ಹಣಕಾಸು ನೆರವು ದೊರೆಯುತ್ತಿದೆ. ಜೊತೆಗೆ ಅತ್ಯಂತ ಪ್ರಭಾವ ಶಾಲಿಯಾಗಿ ಕೆಲಸ ಮಾಡಲು ಅವಕಾಶಗಳಿವೆ. ಇದಕ್ಕಾಗಿಯೇ ಕೆ.ಎಚ್‌.ಮುನಿಯಪ್ಪ ಸೇರಿದಂತೆ ಹಲವಾರು ಮಂದಿ ಸಮಾಜ ಕಲ್ಯಾಣ ಇಲಾಖೆ ಮೇಲೆ ಕಣ್ಣಿಟ್ಟಿದ್ದಾರೆ. ಸಂಪುಟದಲ್ಲಿ ಇನ್ನೂ 20 ಸ್ಥಾನಗಳು ಖಾಲಿಯಿದ್ದು, ವಿಸ್ತರಣೆಯ ಬಳಿಕ ಸಂಪುಟ ಸೇರಲಿರುವ ಪ್ರಭಾವಿಯೊಬ್ಬರಿಗೆ ಸಮಾಜ ಕಲ್ಯಾಣ ಖಾತೆ ನೀಡಲು ಕಾಯ್ದಿರಿಸಲಾಗಿದೆ.

ಆದರೆ ಇದನ್ನು ಒಪ್ಪದ ಸತೀಶ್‌ ಜಾರಕಿಹೊಳಿ, ಕೆ.ಎಚ್‌.ಮುನಿಯಪ್ಪ ಮತ್ತಿತರರು ಶೋಷಿತ ಸಮುದಾಯದ ಹಿನ್ನೆಲೆಯಿಂದ ಬಂದವರಿಗೆ ಖಾತೆ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ. ಈವರೆಗೂ ಬಹಿರಂಗವಾಗಿ ಎಲ್ಲಿಯೂ ಹೇಳಿಕೆ ನೀಡದ ಸತೀಶ್‌ ಜಾರಕಿಹೊಳಿ, ಆಂತರಿಕವಾಗಿ ವರಿಷ್ಠರನ್ನು ಭೇಟಿ ಮಾಡಿ ತಮ ಒತ್ತಾಯ ಮಂಡಿಸಿರುವುದಾಗಿ ಮೂಲಗಳು ತಿಳಿಸಿವೆ.

error: Content is protected !!
Scroll to Top