ಬ್ರೇಕಿಂಗ್ ನ್ಯೂಸ್

ಚಿನ್ನ-ಬೆಳ್ಳಿ ದರದಲ್ಲಿ ಏರಿಳಿತ ಇಂದಿನ ಲೇಟೆಸ್ಟ್ ಬೆಲೆ ವಿವರ ಇಲ್ಲಿದೆ

(ನ್ಯೂಸ್‌ ಕಡಬ) newskadaba.com,  ಆ.26: 22 ಕ್ಯಾರಟ್ ಚಿನ್ನ1 ಗ್ರಾಂಗೆ: ₹15,010…8 ಗ್ರಾಂಗೆ: ₹1,11,720, 10 ಗ್ರಾಂಗೆ: ₹1,39,650…. 100 ಗ್ರಾಂಗೆ: ₹13,96,500… 24ಕ್ಯಾರಟ್ ಚಿನ್ನ:1 ಗ್ರಾಂ ಗೆ: ₹16,375… 8 ಗ್ರಾಂಗೆ : ₹1,21,880 10 ಗ್ರಾಂ: ₹1,52,350..100 ಗ್ರಾಂ: ₹15,23,500   ಬೆಳ್ಳಿ ದರ 1 ಗ್ರಾಂ: ₹260, 10 ಗ್ರಾಂ: ₹2,600 , 1 ಕೆಜಿ: ₹2,60,000

ಚಿನ್ನ-ಬೆಳ್ಳಿ ದರದಲ್ಲಿ ಏರಿಳಿತ ಇಂದಿನ ಲೇಟೆಸ್ಟ್ ಬೆಲೆ ವಿವರ ಇಲ್ಲಿದೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಾರಿ ಮಳೆ: ದರ್ಪಣ ತೀರ್ಥ ಉಕ್ಕಿ ಹರಿದು ಆದಿ ಸುಬ್ರಹ್ಮಣ್ಯ ದೇವಾಲಯ ಜಲಾವೃತ

(ನ್ಯೂಸ್‌ ಕಡಬ) newskadaba.com,  ಆ.26: ಕುಕ್ಕೆ ಸುಬ್ರಹ್ಮಣ್ಯ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುರಿದ ಭಾರಿ ಮಳೆಯಿಂದಾಗಿ ಕುಮಾರಧಾರ ಹಾಗೂ ದರ್ಪಣ ತೀರ್ಥ ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು, ಹಲವೆಡೆ ಪ್ರವಾಹ ಮತ್ತು ಭೂಕುಸಿತ ಸಂಭವಿಸಿದೆ. ದರ್ಪಣ ತೀರ್ಥ ನದಿ ಉಕ್ಕಿ ಹರಿದಿದ್ದರಿಂದ ಆದಿ ಸುಬ್ರಹ್ಮಣ್ಯ ದೇವಾಲಯದ ಅಂಗಳಕ್ಕೆ ನೀರು ನುಗ್ಗಿದ್ದು, ಭಕ್ತರು ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆದರು..ಕುಮಾರಧಾರ ನದಿಯಲ್ಲಿ ನೀರಿನ ಮಟ್ಟ ಸ್ನಾನಘಟ್ಟ ಮುಳುಗುವಷ್ಟು ಏರದ ಕಾರಣ ಭಕ್ತರು ಪವಿತ್ರ ಸ್ನಾನ ಮಾಡಲು ಸಾಧ್ಯವಾಯಿತು.

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಾರಿ ಮಳೆ: ದರ್ಪಣ ತೀರ್ಥ ಉಕ್ಕಿ ಹರಿದು ಆದಿ ಸುಬ್ರಹ್ಮಣ್ಯ ದೇವಾಲಯ ಜಲಾವೃತ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ದೆಹಲಿಯಲ್ಲಿ ಹೆಚ್ಚಿದ ಹಂದಿ ಜ್ವರ ಪ್ರಕರಣಗಳು: ಆತಂಕ ಬೇಡ ಎಂದ ICMR ಮತ್ತು WHO

(ನ್ಯೂಸ್‌ ಕಡಬ) newskadaba.com,  ಆ.26: ದೇಶದ ರಾಜಧಾನಿ ನವದೆಹಲಿಯಲ್ಲಿ ಹಂದಿ ಜ್ವರ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದ್ದು, ಒಟ್ಟು ಪ್ರಕರಣಗಳು 2,308 ಕ್ಕೆ ತಲುಪಿವೆ.ದೇಶದಲ್ಲಿ ಯಾವುದೇ ಹೊಸ ಅಥವಾ ಮಾರಕ ವೈರಸ್ ರೂಪಾಂತರ ಪತ್ತೆಯಾಗಿಲ್ಲ. ಇದು ಮಳೆಗಾಲ ಹಾಗೂ ಚಳಿಗಾಲದಲ್ಲಿ ಸಾಮಾನ್ಯವಾಗಿ ಕಂಡುಬರುವ ಜ್ವರವಾಗಿದ್ದು, ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ICMR ಮತ್ತು WHO ತಜ್ಞರು ಸ್ಪಷ್ಟಪಡಿಸಿದ್ದಾರೆ. ದೆಹಲಿ ಆರೋಗ್ಯ ಸಚಿವ ಡಾ. ಪಂಕಜ್ ಸಿಂಗ್ ಅವರು NDMC, MCD ಹಾಗೂ ಸೇನಾ ಕಂಟೋನ್ಮೆಂಟ್ ಅಧಿಕಾರಿಗಳೊಂದಿಗೆ ಉನ್ನತ

ದೆಹಲಿಯಲ್ಲಿ ಹೆಚ್ಚಿದ ಹಂದಿ ಜ್ವರ ಪ್ರಕರಣಗಳು: ಆತಂಕ ಬೇಡ ಎಂದ ICMR ಮತ್ತು WHO Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಎಲೆಕ್ಟ್ರಾನಿಕ್ ಸಿಟಿ ನೈಸ್ ಟೋಲ್ ಬಳಿ ಭೀಕರ ಅಪಘಾತ: ಟ್ರಕ್ ಹರಿದು ಕಟ್ಟಡ ಕಾರ್ಮಿಕ ದುರ್ಮರಣ

(ನ್ಯೂಸ್‌ ಕಡಬ) newskadaba.com,  ಆ.26: ಎಲೆಕ್ಟ್ರಾನಿಕ್ ಸಿಟಿಯ ನೈಸ್ ಟೋಲ್ ಬಳಿ ಬೆಳ್ಳಂಬೆಳಗ್ಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕಟ್ಟಡ ಕಾರ್ಮಿಕನೊಬ್ಬ ದುರ್ಮರಣಕ್ಕೀಡಾಗಿದ್ದಾನೆ.ಬಿಹಾರ ಮೂಲದ ಗಾರೆ ಕಾರ್ಮಿಕ ಬಾಬುಜೀ ಮಿಯಾ (45).ಬಾಬುಜೀ ಅವರು ಕೆಲಸಕ್ಕಾಗಿ ಉತ್ತರಹಳ್ಳಿಯಿಂದ ಸರ್ಜಾಪುರದ ಕಡೆಗೆ ಪ್ರಯಾಣಿಸುತ್ತಿದ್ದಾಗ ವೇಗವಾಗಿ ಬಂದ ಟ್ರಕ್ ತಲೆಯ ಮೇಲೆ ಹರಿದಿದೆ. ಅಪಘಾತದ ರಭಸಕ್ಕೆ ಅವರು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಅಪಘಾತ ಎಸಗಿದ ಬಳಿಕ ಟ್ರಕ್ ಚಾಲಕ ವಾಹನ ಸಮೇತ ಸ್ಥಳದಿಂದ ಪರಾರಿಯಾಗಿದ್ದಾನೆ.ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ

ಎಲೆಕ್ಟ್ರಾನಿಕ್ ಸಿಟಿ ನೈಸ್ ಟೋಲ್ ಬಳಿ ಭೀಕರ ಅಪಘಾತ: ಟ್ರಕ್ ಹರಿದು ಕಟ್ಟಡ ಕಾರ್ಮಿಕ ದುರ್ಮರಣ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

AC ಕಂಪ್ರೆಸರ್ ಸ್ಫೋಟ: ಇಸ್ಲಾಮಾಬಾದ್‌ನ ಆಸ್ಪತ್ರೆಯಲ್ಲಿ ಭಾರೀ ಅಗ್ನಿ ಅವಘಡ, 15 ನವಜಾತ ಶಿಶುಗಳು ಸಜೀವ ದಹನ

(ನ್ಯೂಸ್‌ ಕಡಬ) newskadaba.com,  ಆ.26: ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನ ಪಾಕಿಸ್ತಾನ ವೈದ್ಯಕೀಯ ವಿಜ್ಞಾನ ಸಂಸ್ಥೆ (PIMS) ಆಸ್ಪತ್ರೆಯ ಸ್ತ್ರೀರೋಗ ಶಾಸ್ತ್ರ ವಾರ್ಡ್‌ನಲ್ಲಿ ಬೆಳ್ಳಂಬೆಳಗ್ಗೆ ಭಾರೀ ಅಗ್ನಿ ಅವಘಡ ಸಂಭವಿಸಿದೆ.ನರ್ಸರಿ ವಿಭಾಗದಲ್ಲಿದ್ದ ಹವಾನಿಯಂತ್ರಣ (AC) ಕಂಪ್ರೆಸರ್ ಸಡನ್ ಆಗಿ ಸ್ಫೋಟಗೊಂಡಿದ್ದೇ ಬೆಂಕಿ ವ್ಯಾಪಿಸಲು ಕಾರಣ ಎಂದು ತಿಳಿಯಲಾಗಿದೆ. ಬೆಂಕಿ ಕಾಣಿಸಿಕೊಂಡಾಗ ನರ್ಸರಿಯಲ್ಲಿ ಒಟ್ಟು 16 ನವಜಾತ ಶಿಶುಗಳಿದ್ದವು. ರಕ್ಷಣಾ ಸಿಬ್ಬಂದಿ ತಕ್ಷಣ ಕಾರ್ಯಾಚರಣೆ ನಡೆಸಿದರೂ ಸಹ 15 ಶಿಶುಗಳು ಬೆಂಕಿಗಾಹುತಿಯಾಗಿದ್ದು, ಕೇವಲ ಒಂದೇ ಒಂದು ಮಗುವನ್ನು ಬದುಕಿಸಲು ಸಾಧ್ಯವಾಗಿದೆ.ಅಗ್ನಿಶಾಮಕ

AC ಕಂಪ್ರೆಸರ್ ಸ್ಫೋಟ: ಇಸ್ಲಾಮಾಬಾದ್‌ನ ಆಸ್ಪತ್ರೆಯಲ್ಲಿ ಭಾರೀ ಅಗ್ನಿ ಅವಘಡ, 15 ನವಜಾತ ಶಿಶುಗಳು ಸಜೀವ ದಹನ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಪತ್ನಿಗೆ ಮನೆಗೆಲಸ, ವೃದ್ಧ ಪೋಷಕರ ಆರೈಕೆಗೆ ಬಲವಂತ ಮಾಡುವಂತಿಲ್ಲ: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು

(ನ್ಯೂಸ್‌ ಕಡಬ) newskadaba.com ಆ. 26: ಪತಿ ಸೇರಿದಂತೆ ಯಾರೂ ಸಹ ಪತ್ನಿಗೆ ಮನೆಗೆಲಸ ಮಾಡುವಂತೆ ಅಥವಾ ವೃದ್ಧ ಪೋಷಕರನ್ನು ನೋಡಿಕೊಳ್ಳುವಂತೆ ಬಲವಂತ ಮಾಡುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ. ಕೌಟುಂಬಿಕ ನ್ಯಾಯಾಲಯ ನೀಡಿದ್ದ ಮಾಸಿಕ 9,000 ಜೀವನಾಂಶ ಆದೇಶವನ್ನು ಪ್ರಶ್ನಿಸಿ ಪತಿ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ಚಿಲ್ಲಾಕೂರ್ ಸುಮಲತಾ ಅವರಿದ್ದ ಏಕಸದಸ್ಯ ಪೀಠ ವಜಾಗೊಳಿಸಿದೆ.   ವೃದ್ಧ ಪೋಷಕರನ್ನು ನೋಡಿಕೊಳ್ಳುವ ಪ್ರಾಥಮಿಕ ಕರ್ತವ್ಯ ಮಗ ಅಥವಾ ಮಗಳಿಗೆ ಸೇರಿದೆಯ ಹೊರತು ಸೊಸೆ ಅಥವಾ ಅಳಿಯಂದಿರದಲ್ಲ. ವಿವಾಹ

ಪತ್ನಿಗೆ ಮನೆಗೆಲಸ, ವೃದ್ಧ ಪೋಷಕರ ಆರೈಕೆಗೆ ಬಲವಂತ ಮಾಡುವಂತಿಲ್ಲ: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕೃತಕ ಪನ್ನೀರ್ ಸೇರಿ ಹಾನಿಕಾರಕ ಆಹಾರ ಉತ್ಪನ್ನಗಳ ಮಾರಾಟಕ್ಕೆ ಶೀಘ್ರವೇ ನಿಷೇಧ: ಯು.ಟಿ. ಖಾದರ್

(ನ್ಯೂಸ್‌ ಕಡಬ) newskadaba.com,  ಆ.24 ಬೆಂಗಳೂರು: ರಾಜ್ಯದಲ್ಲಿ ಕೃತಕ ಪನ್ನೀರ್ (ಅನಲಾಗ್ ಪನ್ನೀರ್) ನಿಷೇಧಿಸಿರುವುದಷ್ಟೇ ಅಲ್ಲದೆ, ಸಾರ್ವಜನಿಕರ ಆರೋಗ್ಯಕ್ಕೆ ಹಾನಿಕಾರಕವಾದ ಎಲ್ಲಾ ಕೃತಕ ಆಹಾರ ಉತ್ಪನ್ನಗಳ ಬಳಕೆಯನ್ನು ನಿಷೇಧಿಸಲಾಗುವುದು ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಸ್ಪಷ್ಟಪಡಿಸಿದ್ದಾರೆ. ಸದ್ಯ ಆಹಾರ ಸುರಕ್ಷತಾ ಆಯುಕ್ತರಿಗೆ ನಿಯಮದಂತೆ ಯಾವುದೇ ಉತ್ಪನ್ನವನ್ನು ಒಂದು ವರ್ಷದ ಅವಧಿಗೆ ಮಾತ್ರ ನಿಷೇಧಿಸುವ ಅಧಿಕಾರವಿದೆ.ಪ್ರತಿ ವರ್ಷ ಆದೇಶ ಹೊರಡಿಸುವ ಬದಲು ಬಲವಾದ ಮತ್ತು ಶಾಶ್ವತ ನಿಯಮಗಳನ್ನು ರೂಪಿಸಲು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ಬಾಳೆಹಣ್ಣು, ಸಪೋಟ

ಕೃತಕ ಪನ್ನೀರ್ ಸೇರಿ ಹಾನಿಕಾರಕ ಆಹಾರ ಉತ್ಪನ್ನಗಳ ಮಾರಾಟಕ್ಕೆ ಶೀಘ್ರವೇ ನಿಷೇಧ: ಯು.ಟಿ. ಖಾದರ್ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಉಡುಪಿಯಲ್ಲಿ ಸಂಗೀತ ಮ್ಯಾರಥಾನ್: ‘ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ಗೆ ಭಾಜನರಾದ ವಿದುಷಿ ಸಂಗೀತಾ

(ನ್ಯೂಸ್‌ ಕಡಬ) newskadaba.com,  ಆ.24 ಉಡುಪಿ: ಖ್ಯಾತ ಗಾಯಕಿ, ಆಕಾಶವಾಣಿಯ ಉನ್ನತ ದರ್ಜೆಯ ಕಲಾವಿದೆ ವಿದುಷಿ ಸಂಗೀತಾ ಬಾಲಚಂದ್ರ ಅವರು 25 ಗಂಟೆಗಳ ಕಾಲ ನಿರಂತರವಾಗಿ ಏಕವ್ಯಕ್ತಿ ದಾಸರಪದ ಗಾಯನ ‘ಪಂಚವಿಶಂತಿ’ ಮ್ಯಾರಥಾನ್ ಪೂರ್ಣಗೊಳಿಸಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ವಿಶ್ವದಾಖಲೆ ಬರೆದಿದ್ದಾರೆ. ಆಗಸ್ಟ್ 23ರ ಬೆಳಿಗ್ಗೆ 6.30ಕ್ಕೆ ಉಡುಪಿಯ ಗೀತಾ ಮಂದಿರದ ಶ್ರೀ ಪುತ್ತಿಗೆ ನರಸಿಂಹ ಸಭಾಂಗಣದಲ್ಲಿ ಪ್ರಾರಂಭವಾದ ಈ ಗಾಯನ ಯಜ್ಞವು ಆಗಸ್ಟ್ 24ರ ಬೆಳಿಗ್ಗೆ 7.40ಕ್ಕೆ ಮುಕ್ತಾಯಗೊಂಡಿತು.25 ಗಂಟೆಗಳ ಕಾಲ ನಿರಂತರವಾಗಿ

ಉಡುಪಿಯಲ್ಲಿ ಸಂಗೀತ ಮ್ಯಾರಥಾನ್: ‘ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ಗೆ ಭಾಜನರಾದ ವಿದುಷಿ ಸಂಗೀತಾ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಡೇವಿಡ್ ಡಿಸೋಜಾ ಕೊಲೆ ಪ್ರಕರಣ: ಪೊಲೀಸರ ವಶದಿಂದ ಪರಾರಿಯಾಗಲು ಯತ್ನಿಸಿದ ಆರೋಪಿ ಕಾಲಿಗೆ ಗುಂಡೇಟು!

(ನ್ಯೂಸ್ ಕಡಬ) newskadaba.com, ಆ. 24. ಡೇವಿಡ್ ಡಿಸೋಜಾ ಕೊಲೆ ಪ್ರಕರಣದ ಪ್ರಮುಖ ಆರೋಪಿ, ಕುಖ್ಯಾತ ಗ್ಯಾಂಗ್‌ಸ್ಟರ್ ಅನುಜ್ ಪಾಟೀಲ್ (35) ಪೊಲೀಸರ ವಶದಿಂದ ಪರಾರಿಯಾಗಲು ಯತ್ನಿಸಿ, ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ವೇಳೆ ಪೊಲೀಸರು ಆತ್ಮರಕ್ಷಣೆಗಾಗಿ ಆತನ ಕಾಲಿಗೆ ಗುಂಡು ಹಾರಿಸಿದ್ದಾರೆ. ಆರೋಪಿ ಅನುಜ್ ಪಾಟೀಲ್‌ನನ್ನು ಪೊಲೀಸರು ಹೆಬ್ರಿಗೆ ಕರೆದೊಯ್ಯುತ್ತಿದ್ದಾಗ ಆತ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ಕೊಲ್ಲೂರು ಪಿಎಸ್‌ಐ ಅವರ ಶಸ್ತ್ರಾಸ್ತ್ರ ಕಸಿದುಕೊಂಡು ಗುಂಡು ಹಾರಿಸಲು ಯತ್ನಿಸಿದಾಗ, ಕುಂದಾಪುರ

ಡೇವಿಡ್ ಡಿಸೋಜಾ ಕೊಲೆ ಪ್ರಕರಣ: ಪೊಲೀಸರ ವಶದಿಂದ ಪರಾರಿಯಾಗಲು ಯತ್ನಿಸಿದ ಆರೋಪಿ ಕಾಲಿಗೆ ಗುಂಡೇಟು! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಸಕಲೇಶಪುರ–ಸುಬ್ರಹ್ಮಣ್ಯ ಘಾಟ್‌ನಲ್ಲಿ ವಂದೇ ಭಾರತ್ ರೈಲು ಪ್ರಾಯೋಗಿಕ ಸಂಚಾರ ಯಶಸ್ವಿ!

(ನ್ಯೂಸ್‌ ಕಡಬ) newskadaba.com,  ಆ.24: ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರೋಡ್ ನಡುವಿನ ಸವಾಲಿನ ಘಾಟ್ ಪ್ರದೇಶದಲ್ಲಿ ವಂದೇ ಭಾರತ್ ರೈಲಿನ ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ರೈಲು ಪುತ್ತೂರು ಮಾರ್ಗವಾಗಿ ಮಂಗಳೂರು ತಲುಪಿದೆ. ಇಳಿಜಾರು ಹಾಗೂ ತಿರುವುಗಳಿಂದ ಕೂಡಿದ ಘಾಟ್‌ ಮಾರ್ಗದಲ್ಲಿ ರೈಲಿನ ಭದ್ರತೆ, ವೇಗ ಮತ್ತು ಹಳಿಯ ತಾಂತ್ರಿಕ ಅಂಶಗಳನ್ನು ರೈಲ್ವೆ ಅಧಿಕಾರಿಗಳು ಪರಿಶೀಲಿಸಿದ್ದಾರೆ.ಅಧಿಕಾರಿಗಳ ಅಂತಿಮ ಮೌಲ್ಯಮಾಪನ ಹಾಗೂ ವರದಿ ಬಳಿಕ ಮಂಗಳೂರು–ಸಕಲೇಶಪುರ ನಡುವೆ ನಿಯಮಿತ ಸಂಚಾರ ದಿನಾಂಕ ಅಧಿಕೃತವಾಗಿ ಪ್ರಕಟವಾಗಲಿದೆ. ಈ ಮಾರ್ಗದ ಪ್ರಮುಖ

ಸಕಲೇಶಪುರ–ಸುಬ್ರಹ್ಮಣ್ಯ ಘಾಟ್‌ನಲ್ಲಿ ವಂದೇ ಭಾರತ್ ರೈಲು ಪ್ರಾಯೋಗಿಕ ಸಂಚಾರ ಯಶಸ್ವಿ! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top