ಮೀರಾಬಾಯಿ ಚಾನುಗೆ ಹ್ಯಾಟ್ರಿಕ್ ಚಿನ್ನ: 2026ರ ಕಾಮನ್‌ವೆಲ್ತ್ ಗೇಮ್ಸ್ನಲ್ಲಿ ಭಾರತಕ್ಕೆ ಮೊದಲ ಸ್ವರ್ಣ!

(ನ್ಯೂಸ್‌ ಕಡಬ) newskadaba.com,  ಜು.27 : ಭಾರತದ ಸ್ಟಾರ್ ವೇಟ್‌ಲಿಫ್ಟರ್ ಮೀರಾಬಾಯಿ ಚಾನು ಅವರು 2026ರ ಕಾಮನ್‌ವೆಲ್ತ್ ಗೇಮ್ಸ್‌ನ ಮಹಿಳೆಯರ 48 ಕೆಜಿ ತೂಕದ ವಿಭಾಗದಲ್ಲಿ ಚಿನ್ನದ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಇದು ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಅವರಿಗೆ ಸತತ 3ನೇ ಚಿನ್ನದ ಪದಕವಾಗಿದೆ.

ಮಣಿಪುರದ ಕ್ರೀಡಾಪಟು ಚಾನು ಅವರು ಸ್ನ್ಯಾಚ್ ಹಾಗೂ ಕ್ಲೀನ್ ಅಂಡ್ ಜರ್ಕ್ ಎರಡೂ ವಿಭಾಗಗಳಲ್ಲಿ ಹೊಸ ಕಾಮನ್‌ವೆಲ್ತ್ ಗೇಮ್ಸ್ ದಾಖಲೆ ನಿರ್ಮಿಸಿದ್ದಾರೆ. 85 ಕೆಜಿ (ಕಾಮನ್‌ವೆಲ್ತ್ ಮತ್ತು ಗೇಮ್ಸ್ ದಾಖಲೆ),  ಕ್ಲೀನ್ ಅಂಡ್ ಜರ್ಕ್ 105 ಕೆಜಿ (ಗೇಮ್ಸ್ ದಾಖಲೆ)…..ಒಟ್ಟು ತೂಕ: 190 ಕೆಜಿ..

ಬೆಳ್ಳಿ ಪದಕ ಗೆದ್ದ ನೈಜೀರಿಯಾದ ರೂತ್ ಅಸುಕ್ವೊ ನ್ಯಾಂಗ್ (ಒಟ್ಟು 168 ಕೆಜಿ) ಅವರಿಗಿಂತ 22 ಕೆಜಿ ಹೆಚ್ಚಿನ ತೂಕ ಎತ್ತುವ ಮೂಲಕ ಮೀರಾಬಾಯಿ ಚಾನು ಅಗ್ರಸ್ಥಾನ ಪಡೆದು, ಈ ಬಾರಿಯ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕವನ್ನು ತಂದುಕೊಟ್ಟಿದ್ದಾರೆ.

Scroll to Top