ಬಿ.ಸಿ. ರೋಡ್ ಜಂಕ್ಷನ್‌ ಬಳಿ ಲಾರಿಯ ಚಕ್ರ ಕಳಚಿಬಿದ್ದು ಮಹಿಳೆಗೆ ಗಾಯ: ಮಂಗಳೂರಿನ ಆಸ್ಪತ್ರೆಗೆ ದಾಖಲು

(ನ್ಯೂಸ್‌ ಕಡಬ) newskadaba.com,  ಜು.26 :ಬಿ.ಸಿ. ರೋಡ್ ಜಂಕ್ಷನ್‌ ಬಳಿ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಹೊರರಾಜ್ಯ ನೋಂದಣಿಯ ಕಂಟೇನರ್ ಲಾರಿಯೊಂದರ ಹಿಂಬದಿಯ ಚಕ್ರ ಏಕಾಏಕಿ ಕಳಚಿ ಬಿದ್ದಿದೆ.ರಸ್ತೆಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪ್ರೆಸಿಲ್ಲ ಎಂಬ ಮಹಿಳೆಗೆ ಕಳಚಿದ ಚಕ್ರ ಡಿಕ್ಕಿ ಹೊಡೆದಿದ್ದು, ಅವರಿಗೆ ಗಾಯಗಳಾಗಿವೆ.

ಗಾಯಾಳು ಮಹಿಳೆಯನ್ನು ತಕ್ಷಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಚಾಲಕನ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ಆರೋಪಿಸಲಾಗಿದ್ದು, ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Scroll to Top