(ನ್ಯೂಸ್ ಕಡಬ) newskadaba.com, ಜು.26 : ಅಪ್ರಾಪ್ತ ಬಾಲಕನಿಗೆ ಬೈಕ್ ಚಲಾಯಿಸಲು ನೀಡಿದ್ದಕ್ಕಾಗಿ, ಬೈಕ್ ಮಾಲೀಕ ತಣ್ಣೀರುಪಂಥ ನಿವಾಸಿ ಅಬ್ದುಲ್ ಹಕೀಮ್‌ಗೆ ಬೆಳ್ತಂಗಡಿ ನ್ಯಾಯಾಲಯವು 1 ದಿನದ ಜೈಲು ಶಿಕ್ಷೆ ಮತ್ತು ₹35,000 ದಂಡ ವಿಧಿಸಿದೆ.
ಅಪಘಾತ ಎಸಗಿದ ಅಪ್ರಾಪ್ತನಿಗೆ 25 ವರ್ಷ ವಯಸ್ಸಿನವರೆಗೆ ಚಾಲನಾ ಪರವಾನಗಿ ನೀಡಬಾರದು ಎಂದು ಪ್ರಾದೇಶಿಕ ಸಾರಿಗೆ ಕಚೇರಿಗೆ ನ್ಯಾಯಾಧೀಶರು ಸೂಚಿಸಿದ್ದಾರೆ.ಅಪಘಾತಕ್ಕೀಡಾದ ಬೈಕ್‌ನ ನೋಂದಣಿ ಪ್ರಮಾಣಪತ್ರವನ್ನು (RC) 1 ವರ್ಷದ ಅವಧಿಗೆ ಅಮಾನತುಗೊಳಿಸಲಾಗಿದೆ.
ಜುಲೈ 20, 2024 ರ ರಾತ್ರಿ ಕರಾಯದ ತುರ್ಕಳಿಕೆಯಲ್ಲಿ ಅಪ್ರಾಪ್ತ ಚಲಾಯಿಸುತ್ತಿದ್ದ ಬೈಕ್ ಡಿಕ್ಕಿ ಹೊಡೆದು, ಸ್ಕೂಟರ್ ಸವಾರ ಶಿವಾನಂದ ಎಂಬುವರು ತಲೆಗೆ ತೀವ್ರ ಗಾಯವಾಗಿ ಮೃತಪಟ್ಟಿದ್ದರು.









