ಬ್ರೇಕಿಂಗ್ ನ್ಯೂಸ್

ಯುಎಸ್-ಇರಾನ್ ಶಾಂತಿ ಮಾತುಕತೆ ದಿಢೀರ್ ಮುಂದೂಡಿಕೆ: ಸ್ವಿಟ್ಜರ್ಲೆಂಡ್ ಪ್ರಕಟಣೆ

(ನ್ಯೂಸ್‌ ಕಡಬ) newskadaba.com,ಜೂ.20 : ಸ್ವಿಟ್ಜರ್ಲೆಂಡ್‌ನ ಬರ್ಗೆನ್‌ಸ್ಟಾಕ್‌ನಲ್ಲಿ ಜೂನ್ 19 ರಂದು ನಡೆಯಬೇಕಿದ್ದ ಅಮೆರಿಕ ಮತ್ತು ಇರಾನ್ ದೇಶಗಳ ನಡುವಿನ ಉನ್ನತ ಮಟ್ಟದ ರಾಜತಾಂತ್ರಿಕ ಶಾಂತಿ ಮಾತುಕತೆಗಳು ದಿಢೀರನೆ ಮುಂದೂಡಲ್ಪಟ್ಟಿವೆ ಎಂದು ಸ್ವಿಟ್ಜರ್ಲೆಂಡ್ ವಿದೇಶಾಂಗ ಸಚಿವಾಲಯ ಅಧಿಕೃತವಾಗಿ ಪ್ರಕಟಿಸಿದೆ. ಅಮೆರಿಕದ ಉಪರಾಷ್ಟ್ರಪತಿ ಜೆ.ಡಿ. ವ್ಯಾನ್ಸ್ ಅವರು ಸ್ವಿಟ್ಜರ್ಲೆಂಡ್‌ಗೆ ಕೈಗೊಳ್ಳಬೇಕಿದ್ದ ತಮ್ಮ ಅಧಿಕೃತ ಪ್ರವಾಸವನ್ನು ಹೊರಡುವ ಕೆಲವೇ ಗಂಟೆಗಳ ಮುನ್ನ ರದ್ದುಗೊಳಿಸಿದ್ದರಿಂದ, ಅವರ ಅನುಪಸ್ಥಿತಿಯಲ್ಲಿ ಇರಾನ್ ನಿಯೋಗದೊಂದಿಗಿನ ಈ ಪ್ರಮುಖ ಸಭೆಯನ್ನು ಅನಿವಾರ್ಯವಾಗಿ ಮುಂದೂಡಬೇಕಾಯಿತು. ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯನ್ನು […]

ಯುಎಸ್-ಇರಾನ್ ಶಾಂತಿ ಮಾತುಕತೆ ದಿಢೀರ್ ಮುಂದೂಡಿಕೆ: ಸ್ವಿಟ್ಜರ್ಲೆಂಡ್ ಪ್ರಕಟಣೆ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಪ್ರಶ್ನೆಪತ್ರಿಕೆ ಸೋರಿಕೆ ವಿವಾದದ ಬೆನ್ನಲ್ಲೇ ಎಚ್ಚೆತ್ತ ಎನ್‌ಟಿಎ: ನಾಳೆ ಕಟ್ಟುನಿಟ್ಟಿನ ನೀಟ್ ಮರುಪರೀಕ್ಷೆ.

(ನ್ಯೂಸ್‌ ಕಡಬ) newskadaba.com,ಜೂ.20 ನವದೆಹಲಿ: ಕಳೆದ ಬಾರಿ ನಡೆದ ನೀಟ್-ಯುಜಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ವಿವಾದವು ದೇಶಾದ್ಯಂತ ಭಾರಿ ಸಂಚಲನ ಮೂಡಿಸಿತ್ತು. ಈ ಹಿನ್ನೆಲೆಯಲ್ಲಿ ಯಾವುದೇ ಲೋಪದೋಷಗಳಿಲ್ಲದೆ ಅತ್ಯಂತ ಪಾರದರ್ಶಕವಾಗಿ ಪರೀಕ್ಷೆ ನಡೆಸಲು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ನಾಳೆ ದೇಶಾದ್ಯಂತ ಮರುಪರೀಕ್ಷೆ ನಡೆಯಲಿದೆ.. ಪರೀಕ್ಷಾ ಪ್ರಕ್ರಿಯೆಯಲ್ಲಿ ಯಾವುದೇ ತಾಂತ್ರಿಕ ಅಥವಾ ಭದ್ರತಾ ಲೋಪಗಳು ಉಂಟಾಗದಂತೆ ತಡೆಯಲು ಇಂದು ದೇಶದ 551 ನಗರಗಳಲ್ಲಿ ಅಣುಕು ಕಾರ್ಯಾಚರಣೆ ಆಯೋಜಿಸಲಾಗಿದೆ. ಪ್ರಶ್ನೆಪತ್ರಿಕೆಗಳ ಸುರಕ್ಷಿತ ವಿತರಣೆ,ಪರೀಕ್ಷೆಯ ನಂತರ ಉತ್ತರ

ಪ್ರಶ್ನೆಪತ್ರಿಕೆ ಸೋರಿಕೆ ವಿವಾದದ ಬೆನ್ನಲ್ಲೇ ಎಚ್ಚೆತ್ತ ಎನ್‌ಟಿಎ: ನಾಳೆ ಕಟ್ಟುನಿಟ್ಟಿನ ನೀಟ್ ಮರುಪರೀಕ್ಷೆ. Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬಾಯ್‌ಫ್ರೆಂಡ್ ವಿಚಾರಕ್ಕೆ ಜಗಳ: ಸ್ನೇಹಿತೆಯ ಸಂಸಾರಕ್ಕೆ ಬೆಂಕಿ ಇಟ್ಟು ಜೈಲು ಸೇರಿದ ಯುವತಿ

(ನ್ಯೂಸ್‌ ಕಡಬ) newskadaba.com  ಜೂ.19 ಆರೋಪಿ ಶ್ವೇತಾಳ ಬಾಯ್‌ಫ್ರೆಂಡ್ ಜೊತೆ ಆಕೆಯ ಸ್ನೇಹಿತೆ ಆಪ್ತವಾಗಿ ಬೆಳೆದಿದ್ದೇ ಈ ಜಗಳಕ್ಕೆ ಕಾರಣವಾಗಿದೆ. ಇದರಿಂದ ಕೋಪಗೊಂಡ ಶ್ವೇತಾ, ತನ್ನ ಬಾಯ್‌ಫ್ರೆಂಡ್ ಮೊಬೈಲ್‌ನಿಂದ ಸ್ನೇಹಿತೆಯ ಖಾಸಗಿ ಫೋಟೋಗಳನ್ನು ಕಳವು ಮಾಡಿದ್ದಾಳೆ. ತದನಂತರ ಆ ಫೋಟೋಗಳನ್ನು ಸ್ನೇಹಿತೆಯ ಪತಿಗೆ ಕಳುಹಿಸಿ ಅವರ ಸಂಸಾರದಲ್ಲಿ ಬಿರುಕು ಮೂಡಿಸಿದ್ದಾಳೆ. ಅಷ್ಟಕ್ಕೆ ನಿಲ್ಲಿಸದೇ ಉಳಿದ ಫೋಟೋಗಳನ್ನೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಶ್ವೇತಾ ಬೆದರಿಕೆ ಹಾಕಿದ್ದಾಳೆ. ಇದರಿಂದ ಬೇಸತ್ತ ಸಂತ್ರಸ್ತೆಯ ಪತಿ ಚಾಮರಾಜಪೇಟೆ ಪೊಲೀಸ್ ಠಾಣೆಗೆ ದೂರು

ಬಾಯ್‌ಫ್ರೆಂಡ್ ವಿಚಾರಕ್ಕೆ ಜಗಳ: ಸ್ನೇಹಿತೆಯ ಸಂಸಾರಕ್ಕೆ ಬೆಂಕಿ ಇಟ್ಟು ಜೈಲು ಸೇರಿದ ಯುವತಿ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕುಮಟಾ-ತಿರುಪತಿ ರೈಲು ಸೇವೆಗೆ ಜೂನ್ 20ರಂದು ಅದ್ಧೂರಿ ಚಾಲನೆ

(ನ್ಯೂಸ್‌ ಕಡಬ) newskadaba.com  ಜೂ.19 ಕುಮಟಾದಿಂದ ತಿರುಪತಿ-ಕಾಚಿಗುಡ ರೈಲು ಸೇವೆ, 2ನೇ ಪ್ಲಾಟ್‌ಫಾರ್ಮ್ ಹಾಗೂ ಗೋಕರ್ಣ, ಭಟ್ಕಳ, ಮುರ್ಡೇಶ್ವರ ನಿಲ್ದಾಣಗಳ ಪ್ರಯಾಣಿಕ ಸೌಲಭ್ಯಗಳ ಉದ್ಘಾಟನೆ ಜೂನ್ 20ರಂದು ಮಧ್ಯಾಹ್ನ 2.30ಕ್ಕೆ ಕುಮಟಾ ನಿಲ್ದಾಣದಲ್ಲಿ ನಡೆಯಲಿದೆ. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕ ದಿನಕರ ಶೆಟ್ಟಿ ಹಾಗೂ ಕೊಂಕಣ ರೈಲ್ವೆ ಸಿಎಂಡಿ ಸಂತೋಷಕುಮಾರ ಝಾ ಉಪಸ್ಥಿತರಿರಲಿದ್ದಾರೆ.ಈ ರೈಲು ಪ್ರತಿ ಬುಧವಾರ ಮತ್ತು ಶನಿವಾರ ಕುಮಟಾದಿಂದ ಸಂಚರಿಸಲಿದ್ದು, ಭಕ್ತರಿಗೆ ಹಾಗೂ ಪ್ರವಾಸಿಗರಿಗೆ ನೇರ ಸಂಪರ್ಕ ಕಲ್ಪಿಸಲಿದೆ. 2ನೇ ಪ್ಲಾಟ್‌ಫಾರ್ಮ್ ಉದ್ಘಾಟನೆಯಿಂದ

ಕುಮಟಾ-ತಿರುಪತಿ ರೈಲು ಸೇವೆಗೆ ಜೂನ್ 20ರಂದು ಅದ್ಧೂರಿ ಚಾಲನೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಶಿರಾಡಿ ಸುರಂಗ ಮಾರ್ಗ ಯೋಜನೆ: ರೈಲ್ವೆ ಹಾಗೂ ರಸ್ತೆ ಇಲಾಖೆಯಿಂದ ಪ್ರತ್ಯೇಕ ಸಮೀಕ್ಷೆ – ಸಂಸದ ಕ್ಯಾ. ಬ್ರಿಜೇಶ್ ಚೌಟ

(ನ್ಯೂಸ್‌ ಕಡಬ) newskadaba.com  ಜೂ.19 ಪ್ರಸ್ತಾವಿತ ಶಿರಾಡಿ ಸುರಂಗ ಮಾರ್ಗ ಯೋಜನೆಗೆ ಸಂಬಂಧಿಸಿದಂತೆ ರೈಲ್ವೆ ಮತ್ತು ರಸ್ತೆ ಸಾರಿಗೆ ಇಲಾಖೆಗಳು ಪ್ರತ್ಯೇಕವಾಗಿ ಸಮೀಕ್ಷೆ ನಡೆಸಲಿವೆ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ತಿಳಿಸಿದ್ದಾರೆ. ಈಗಾಗಲೇ ಜಂಟಿ ಸಮೀಕ್ಷೆ ನಡೆಸಲಾಗಿದ್ದರೂ,ರಸ್ತೆ ಇಲಾಖೆಗೆ 38 ಕಿ.ಮೀ ವ್ಯಾಪ್ತಿಯ ಇಳಿಜಾರು ತಿದ್ದುಪಡಿ ಸಾಕಾದರೆ, ರೈಲ್ವೆ ಇಲಾಖೆಗೆ 88 ಕಿ.ಮೀ ದೂರದ ಅವಶ್ಯಕತೆಯಿದೆ. ಪ್ರಸ್ತುತ ರಸ್ತೆ ಯೋಜನೆಯ ಡಿಪಿಆರ್ ಸಿದ್ಧಪಡಿಸಲಾಗುತ್ತಿದ್ದು, ಮುಂಗಾರು ಅಧಿವೇಶನದ ವೇಳೆ ಅಧಿಕಾರಿಗಳನ್ನು ಭೇಟಿಯಾಗಿ ಹೆಚ್ಚಿನ ಮಾಹಿತಿ ಪಡೆಯಲಾಗುವುದು.ಮಂಗಳೂರು-ಬೆಂಗಳೂರು ವಂದೇ

ಶಿರಾಡಿ ಸುರಂಗ ಮಾರ್ಗ ಯೋಜನೆ: ರೈಲ್ವೆ ಹಾಗೂ ರಸ್ತೆ ಇಲಾಖೆಯಿಂದ ಪ್ರತ್ಯೇಕ ಸಮೀಕ್ಷೆ – ಸಂಸದ ಕ್ಯಾ. ಬ್ರಿಜೇಶ್ ಚೌಟ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಸಿರಪ್‌ ಮುಕ್ತ ಮಾರಾಟಕ್ಕೆ ಬ್ರೇಕ್ ಇನ್ಮುಂದೆ ವೈದ್ಯರ ಚೀಟಿ ಕಡ್ಡಾಯಗೊಳಿಸಿದ ಕೇಂದ್ರ ಸರ್ಕಾರ

(ನ್ಯೂಸ್‌ ಕಡಬ) newskadaba.com  ಜೂ.19 ಕೇಂದ್ರ ಆರೋಗ್ಯ ಇಲಾಖೆಯು ಹಾಲಿ ಜಾರಿಯಲ್ಲಿದ್ದ ಔಷಧ ನಿಯಮಗಳಿಗೆ ಮಹತ್ವದ ತಿದ್ದುಪಡಿ ತಂದಿದ್ದು, ಸಿರಪ್‌ಗಳ ಮುಕ್ತ ಮಾರಾಟಕ್ಕೆ ನೀಡಲಾಗಿದ್ದ ವಿನಾಯಿತಿಯನ್ನು ಸಂಪೂರ್ಣವಾಗಿ ರದ್ದುಗೊಳಿಸಿದೆ. ಇನ್ಮುಂದೆ ಗ್ರಾಹಕರು ವೈದ್ಯರ ಚೀಟಿ ತೋರಿಸಿದರಷ್ಟೇ ಫಾರ್ಮಸಿಗಳಲ್ಲಿ ಸಿರಪ್ ನೀಡಲು ಸೂಚಿಸಲಾಗಿದೆ. ಕಳೆದ ವರ್ಷ ಸೆಪ್ಟೆಂಬರ್-ಅಕ್ಟೋಬರ್ ಅವಧಿಯಲ್ಲಿ ರಾಜಸ್ಥಾನ, ಮಧ್ಯಪ್ರದೇಶ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಕಫ ಮತ್ತು ಕೆಮ್ಮಿನ ಸಿರಪ್ ಸೇವಿಸಿ ಮಕ್ಕಳು ಸೇರಿದಂತೆ ಹಲವರು ಮೃತಪಟ್ಟಿದ್ದರು. ಲಾಭದ ಆಸೆಗೆ ಬಿದ್ದ ಕೆಲವು ತಯಾರಕರು ಸಿರಪ್‌ಗಳಲ್ಲಿ

ಸಿರಪ್‌ ಮುಕ್ತ ಮಾರಾಟಕ್ಕೆ ಬ್ರೇಕ್ ಇನ್ಮುಂದೆ ವೈದ್ಯರ ಚೀಟಿ ಕಡ್ಡಾಯಗೊಳಿಸಿದ ಕೇಂದ್ರ ಸರ್ಕಾರ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಸಾಗರಮಾಲ’ ಯೋಜನೆಯಡಿ ಮಂಗಳೂರಿನಲ್ಲಿ ₹65 ಕೋಟಿ ವೆಚ್ಚದ ಲಕ್ಷದ್ವೀಪ ಜೆಟ್ಟಿ ನಿರ್ಮಾಣಕ್ಕೆ ಮುಹೂರ್ತ ಫಿಕ್ಸ್!

(ನ್ಯೂಸ್‌ ಕಡಬ) newskadaba.com  ಜೂ.19 ಮಂಗಳೂರು: ಮಂಗಳೂರಿನ ಹಳೆ ಬಂದರಿನಲ್ಲಿ ಲಕ್ಷದ್ವೀಪದ ಹಡಗುಗಳ ನಿರ್ವಹಣೆಗಾಗಿ ಕಾರ್ಗೊ ಮತ್ತು ಕ್ರೂಸ್ ಟರ್ಮಿನಲ್ ಒಳಗೊಂಡ ಡೆಡಿಕೇಟೆಡ್ ಜೆಟ್ಟಿ ನಿರ್ಮಾಣಕ್ಕೆ ರಾಜ್ಯಮಟ್ಟದ ತಜ್ಞರ ಮೌಲ್ಯಮಾಪನ ಸಮಿತಿ ಗ್ರೀನ್ ಸಿಗ್ನಲ್ ನೀಡಿದೆ. ಇದರಿಂದಾಗಿ ಕಳೆದ 3 ವರ್ಷಗಳಿಂದ ಬಾಕಿ ಉಳಿದಿದ್ದ ತಾಂತ್ರಿಕ ಅಡೆತಡೆಗಳು ನಿವಾರಣೆಯಾಗಿದ್ದು, ಆಗಸ್ಟ್‌ನಲ್ಲಿ ಕಾಮಗಾರಿ ಆರಂಭವಾಗುವ ನಿರೀಕ್ಷೆಯಿದೆ. ಕೇಂದ್ರ ಸರ್ಕಾರದ ‘ಸಾಗರಮಾಲ’ ಯೋಜನೆಯಡಿ ಮೊದಲ ಹಂತದಲ್ಲಿ 65 ಕೋಟಿ ರೂ. ವೆಚ್ಚದಲ್ಲಿ ಜೆಟ್ಟಿ ನಿರ್ಮಾಣವಾಗಲಿದೆ.ಬೆಂಗಳೂರಿನ ರಾಮಲಿಂಗಂ ಕನ್ಸ್‌ಟ್ರಕ್ಷನ್ ಸಂಸ್ಥೆಯು 30 ತಿಂಗಳ

ಸಾಗರಮಾಲ’ ಯೋಜನೆಯಡಿ ಮಂಗಳೂರಿನಲ್ಲಿ ₹65 ಕೋಟಿ ವೆಚ್ಚದ ಲಕ್ಷದ್ವೀಪ ಜೆಟ್ಟಿ ನಿರ್ಮಾಣಕ್ಕೆ ಮುಹೂರ್ತ ಫಿಕ್ಸ್! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಸತತ ಇಳಿಕೆ ಹಾದಿಯಲ್ಲಿ ಚಿನ್ನದ ದರ: ಇಂದು ಮತ್ತೆ ಬಂಪರ್ ಕಡಿತ; ಗ್ರಾಹಕರಿಗೆ ಸುವರ್ಣಾವಕಾಶ

(ನ್ಯೂಸ್‌ ಕಡಬ) newskadaba.com  ಜೂ.19: ಸತತವಾಗಿ ಚಿನ್ನದ ಬೆಲೆ ಇಳಿಕೆಯಾಗುತ್ತಿದೆ. ಜೂನ್‌ 16 ರಿಂದ ಆರಂಭವಾದ ಚಿನ್ನದ ಬೆಲೆಯ ಕುಸಿತ ಇಂದು ಮತ್ತೆ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿದೆ. ಒಂದೇ ದಿನಕ್ಕೆ 10 ಗ್ರಾಂ ಬೆಲೆಯಲ್ಲಿ ಬರೋಬ್ಬರಿ 3650 ರೂ ಇಳಿಕೆಯಾಗಿದ್ದು, ಬೆಳ್ಳಿ ಬೆಲೆಯಲ್ಲಿ 10 ಸಾವಿರ ರೂ ಕಡಿತಗೊಂಡಿದೆ. . ಶುದ್ಧ ಚಿನ್ನದ ಇಂದಿನ ದರ ಎಷ್ಟಿದೆ? ಜೂನ್ 19 2026 ಶುಕ್ರವಾರದಂದು , 24 ಕ್ಯಾರೆಟ್ 1 ಗ್ರಾಂ ಬೆಲೆಯಲ್ಲಿ 365 ರೂ ಇಳಿಕೆ ಆಗಿದ್ದು,

ಸತತ ಇಳಿಕೆ ಹಾದಿಯಲ್ಲಿ ಚಿನ್ನದ ದರ: ಇಂದು ಮತ್ತೆ ಬಂಪರ್ ಕಡಿತ; ಗ್ರಾಹಕರಿಗೆ ಸುವರ್ಣಾವಕಾಶ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಚಿಕ್ಕೋಡಿಯಲ್ಲಿ ಮಧ್ಯರಾತ್ರಿ ಭೀಕರ ಅಗ್ನಿ ಅವಘಡ ಸುಟ್ಟು ಭಸ್ಮವಾಯ್ತು ಪ್ರಸಿದ್ಧ ಬಟ್ಟೆ ಅಂಗಡಿ!

(ನ್ಯೂಸ್‌ ಕಡಬ) newskadaba.com  ಜೂ.19: ಚಿಕ್ಕೋಡಿ ಪಟ್ಟಣದಲ್ಲಿ ಭೀಕರ ಅಗ್ನಿ (Fire) ಅವಘಡವೊಂದು ಸಂಭವಿಸಿದ್ದು, ಶಾರ್ಟ್ ಸರ್ಕ್ಯೂಟ್ ಪರಿಣಾಮವಾಗಿ ಬಟ್ಟೆ ಅಂಗಡಿಯೊಂದು ಸಂಪೂರ್ಣವಾಗಿ ಹೊತ್ತಿ ಉರಿದಿರುವ ಘಟನೆ ನಡೆದಿದೆ. ಪೇಟೆಯಲ್ಲಿರುವ ಪ್ರಸಿದ್ಧ ಜಯಶ್ರೀ ಗಾರ್ಮೆಂಟ್ಸ್ ಬಟ್ಟೆ ಅಂಗಡಿಯಲ್ಲಿ ಗುರುವಾರ ರಾತ್ರಿ ಈ ದುರ್ಘಟನೆ ಸಂಭವಿಸಿದೆ. ಅಂಗಡಿಯಲ್ಲಿ ಹಠಾತ್ ಕಾಣಿಸಿಕೊಂಡ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಉಂಟಾಗಿದ್ದು, ನೋಡನೋಡುತ್ತಿದ್ದಂತೆಯೇ ಇಡೀ ಅಂಗಡಿಗೆ ವ್ಯಾಪಿಸಿದೆ. ಜವಳಿ ಅಂಗಡಿಯಾಗಿದ್ದರಿಂದ ಬೆಂಕಿ ಅತ್ಯಂತ ವೇಗವಾಗಿ ಹರಡಿದ್ದು, ಇಡೀ ಕಟ್ಟಡವನ್ನು ದಟ್ಟವಾದ ಹೊಗೆ ಆವರಿಸಿಕೊಂಡಿತ್ತು.

ಚಿಕ್ಕೋಡಿಯಲ್ಲಿ ಮಧ್ಯರಾತ್ರಿ ಭೀಕರ ಅಗ್ನಿ ಅವಘಡ ಸುಟ್ಟು ಭಸ್ಮವಾಯ್ತು ಪ್ರಸಿದ್ಧ ಬಟ್ಟೆ ಅಂಗಡಿ! Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ನೀಟ್ ಪರೀಕ್ಷೆ ಹಿನ್ನೆಲೆ ಟೆಲಿಗ್ರಾಂ ತಾತ್ಕಾಲಿಕ ನಿಷೇಧ: ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ಹೈಕೋರ್ಟ್‌ನಲ್ಲಿ ಅರ್ಜಿ

(ನ್ಯೂಸ್‌ ಕಡಬ) newskadaba.com  ಜೂ.19: ಜೂನ್ 21 ರಂದು ನಡೆಯಲಿರುವ ನೀಟ್ ಮರುಪರೀಕ್ಷೆಯ ಹಿನ್ನೆಲೆಯಲ್ಲಿ, ಪ್ರಶ್ನೆಪತ್ರಿಕೆ ಸೋರಿಕೆ ತಡೆಗಟ್ಟುವ ಉದ್ದೇಶದಿಂದ ಟೆಲಿಗ್ರಾಂ ಆ್ಯಪ್ ಅನ್ನು ತಾತ್ಕಾಲಿಕವಾಗಿ ನಿಷೇಧಿಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ತೀರ್ಪನ್ನು ದೆಹಲಿ ಹೈಕೋರ್ಟ್ ಕಾಯ್ದಿರಿಸಿದೆ. “ಕೇವಲ ಒಂದು ಪರೀಕ್ಷೆಯ ಕಾರಣಕ್ಕಾಗಿ ದೇಶದ ಸುಮಾರು 15 ಕೋಟಿ (150 ಮಿಲಿಯನ್) ಸಾಮಾನ್ಯ ಬಳಕೆದಾರರ ಡಿಜಿಟಲ್ ಹಕ್ಕುಗಳನ್ನು ನಿರ್ಬಂಧಿಸುವುದು ಎಷ್ಟು ಸರಿ?” ಎಂದು ನ್ಯಾಯಮೂರ್ತಿ ತೇಜಸ್ ಕರಿಯಾ ಅವರು ಕೇಂದ್ರ ಸರ್ಕಾರವನ್ನು ನೇರವಾಗಿ

ನೀಟ್ ಪರೀಕ್ಷೆ ಹಿನ್ನೆಲೆ ಟೆಲಿಗ್ರಾಂ ತಾತ್ಕಾಲಿಕ ನಿಷೇಧ: ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ಹೈಕೋರ್ಟ್‌ನಲ್ಲಿ ಅರ್ಜಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top