ಚಿಕ್ಕೋಡಿಯಲ್ಲಿ ಮಧ್ಯರಾತ್ರಿ ಭೀಕರ ಅಗ್ನಿ ಅವಘಡ ಸುಟ್ಟು ಭಸ್ಮವಾಯ್ತು ಪ್ರಸಿದ್ಧ ಬಟ್ಟೆ ಅಂಗಡಿ!

(ನ್ಯೂಸ್‌ ಕಡಬ) newskadaba.com  ಜೂ.19: ಚಿಕ್ಕೋಡಿ ಪಟ್ಟಣದಲ್ಲಿ ಭೀಕರ ಅಗ್ನಿ (Fire) ಅವಘಡವೊಂದು ಸಂಭವಿಸಿದ್ದು, ಶಾರ್ಟ್ ಸರ್ಕ್ಯೂಟ್ ಪರಿಣಾಮವಾಗಿ ಬಟ್ಟೆ ಅಂಗಡಿಯೊಂದು ಸಂಪೂರ್ಣವಾಗಿ ಹೊತ್ತಿ ಉರಿದಿರುವ ಘಟನೆ ನಡೆದಿದೆ.

ಪೇಟೆಯಲ್ಲಿರುವ ಪ್ರಸಿದ್ಧ ಜಯಶ್ರೀ ಗಾರ್ಮೆಂಟ್ಸ್ ಬಟ್ಟೆ ಅಂಗಡಿಯಲ್ಲಿ ಗುರುವಾರ ರಾತ್ರಿ ಈ ದುರ್ಘಟನೆ ಸಂಭವಿಸಿದೆ. ಅಂಗಡಿಯಲ್ಲಿ ಹಠಾತ್ ಕಾಣಿಸಿಕೊಂಡ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಉಂಟಾಗಿದ್ದು, ನೋಡನೋಡುತ್ತಿದ್ದಂತೆಯೇ ಇಡೀ ಅಂಗಡಿಗೆ ವ್ಯಾಪಿಸಿದೆ. ಜವಳಿ ಅಂಗಡಿಯಾಗಿದ್ದರಿಂದ ಬೆಂಕಿ ಅತ್ಯಂತ ವೇಗವಾಗಿ ಹರಡಿದ್ದು, ಇಡೀ ಕಟ್ಟಡವನ್ನು ದಟ್ಟವಾದ ಹೊಗೆ ಆವರಿಸಿಕೊಂಡಿತ್ತು.

ಅಗ್ನಿ ಅವಘಡದಲ್ಲಿ ಜಯಶ್ರೀ ಗಾರ್ಮೆಂಟ್ಸ್‌ನಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಸಿದ್ಧ ಉಡುಪುಗಳು ಮತ್ತು ಬೆಲೆಬಾಳುವ ಬಟ್ಟೆಗಳು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿವೆ. ಅಂಗಡಿಯ ಮಾಲೀಕರಿಗೆ ಭಾರಿ ಪ್ರಮಾಣದ ಆರ್ಥಿಕ ನಷ್ಟ ಸಂಭವಿಸಿದೆ ಎಂದು ಪ್ರಾಥಮಿಕ ಅಂದಾಜಿನಿಂದ ತಿಳಿದುಬಂದಿದೆ.

Scroll to Top