ಬ್ರೇಕಿಂಗ್ ನ್ಯೂಸ್

ಭಾರತದಲ್ಲಿ ಯೂಟ್ಯೂಬ್ ನ ಟಾಪ್ 5 ಸ್ಥಾನ ಗಿಟ್ಟಿಸಿದ ‘KL Bro Biju’

(ನ್ಯೂಸ್ ಕಡಬ) newskadaba.com ಡಿ. 11. ಇಂದಿನ ಯುಗದಲ್ಲಿ ಬೆಳೆಯುತ್ತಿರುವ YouTube  ಜಗತ್ತಿನಲ್ಲಿ, ಲಕ್ಷಾಂತರ ರಚನೆಕಾರರು ತಮ್ಮ ಗಮನಕ್ಕಾಗಿ ಹೋರಾಡುತ್ತಿದ್ದಾರೆ,  ಅದರಲ್ಲಿ ಕೇರಳದ ಒಂದು ಹೆಸರು ಸದ್ದು ಮಾಡುತ್ತಿದ್ದು, ಸದ್ಯ KL Bro Biju Rithvik ಹೆಸರಿನ ಮಲಯಾಳಿ ಕಂಟೆಂಟ್ ಕ್ರಿಯೇಟರ್ ಭಾರತದ ಟಾಪ್ ಯೂಟ್ಯೂಬರ್‌ಗಳಲ್ಲಿ ಒಬ್ಬರಾಗಿದ್ದಾರೆ. ಇದೇನು ಸಣ್ಣ ಸಾಧನೆಯಲ್ಲ.     2024 ರ ಯೂಟ್ಯೂಬ್ ವರದಿಯ ಪ್ರಕಾರ, KL Bro Biju ಭಾರತದ ಉನ್ನತ 5 ಯೂಟ್ಯೂಬರ್‌ಗಳ ಪೈಕಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಚಂದಾದಾರರ […]

ಭಾರತದಲ್ಲಿ ಯೂಟ್ಯೂಬ್ ನ ಟಾಪ್ 5 ಸ್ಥಾನ ಗಿಟ್ಟಿಸಿದ ‘KL Bro Biju’ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಬರ ಪರಿಹಾರ ನಿಧಿ ಸಮಸ್ಯೆ: ಕೇಂದ್ರ, ಕರ್ನಾಟಕ ಸರ್ಕಾರವೇ ಬಗೆಹರಿಸಿಕೊಳ್ಳಬೇಕು- ಸುಪ್ರೀಂ ಕೋರ್ಟ್

(ನ್ಯೂಸ್ ಕಡಬ) newskadaba.com . 10. ನವದೆಹಲಿ: ಬರ ನಿರ್ವಹಣೆಗಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಿಂದ (NDRF) ಆರ್ಥಿಕ ನೆರವು ಬಿಡುಗಡೆ ವಿವಾದವನ್ನು ಕೇಂದ್ರ ಹಾಗೂ ಕರ್ನಾಟಕ ಸರ್ಕಾರ ಬಗೆಹರಿಸಿಕೊಳ್ಳಬೇಕು ಎಂದು ಸುಪ್ರೀಂಕೋರ್ಟ್ ಮಂಗಳವಾರ ಹೇಳಿದೆ. ಎನ್ ಡಿಆರ್ ಎಫ್ ನಿಂದ ಅನುದಾನ ಬಿಡುಗಡೆ ಮಾಡುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಕರ್ನಾಟಕ ಸರ್ಕಾರ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಬಿ.ಆರ್. ಗವಾಯಿ ಮತ್ತು ಕೆ.ವಿ. ವಿಶ್ವನಾಥನ್ ಅವರನ್ನೊಳಗೊಂಡ ನ್ಯಾಯಪೀಠ, ಇಲ್ಲಿಯವರೆಗೂ ಎಷ್ಟು ಹಣವನ್ನು ಬಿಡುಗಡೆ

ಬರ ಪರಿಹಾರ ನಿಧಿ ಸಮಸ್ಯೆ: ಕೇಂದ್ರ, ಕರ್ನಾಟಕ ಸರ್ಕಾರವೇ ಬಗೆಹರಿಸಿಕೊಳ್ಳಬೇಕು- ಸುಪ್ರೀಂ ಕೋರ್ಟ್ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಆಂಧ್ರ ಡಿಸಿಎಂ ಪವನ್ ಕಲ್ಯಾಣ್ಗೆ ಕೊಲೆ ಬೆದರಿಕೆ..!

(ನ್ಯೂಸ್ ಕಡಬ) newskadaba.com . 10. ಹೈದರಾಬಾದ್‌ :ಆಂದ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ಕಚೇರಿ ಸಿಬ್ಬಂದಿಗೆ ಕಿಡಿಗೇಡಿಗಳಿಂದ ಬೆದರಿಕೆ ಕರೆಗಳು ಬಂದಿವೆ ಎಂದು ಹೇಳಲಾಗುತ್ತಿದ್ದು, ಅವರನ್ನು ಕೊಲ್ಲುವುದಾಗಿ ಬೆದರಿಕೆ ಸಂದೇಶ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ. ಉಪಮುಖ್ಯಮಂತ್ರಿ ಅವರನ್ನು ಗುರಿಯಾಗಿಸಿಕೊಂಡು ಅಪರಿಚಿತ ವ್ಯಕ್ತಿ ಬೆದರಿಕೆ ಸಂದೇಶಗಳನ್ನು ಕಳುಹಿಸಿದ್ದಾನೆ ಎಂದು ಹೇಳಲಾಗಿದೆ. ಪವನ್ ಕಲ್ಯಾಣ್ ಅವರ ಕಚೇರಿ ಸಿಬ್ಬಂದಿಗೆ , ಪವನ್‌ ಕಲ್ಯಾಣ್‌ ಅವರನ್ನು ಕೊಲ್ಲುವುದಾಗಿ ಆಕ್ಷೇಪಾರ್ಹ ಭಾಷೆಯಲ್ಲಿ ಆರೋಪಿ ಬೆದರಿಕೆ ಸಂದೇಶಗಳನ್ನು ಕಳುಹಿಸಿದ್ದಾನೆ. ಉಪ ಮುಖ್ಯಮಂತ್ರಿ ಪವನ್

ಆಂಧ್ರ ಡಿಸಿಎಂ ಪವನ್ ಕಲ್ಯಾಣ್ಗೆ ಕೊಲೆ ಬೆದರಿಕೆ..! Read More »

ಬ್ರೇಕಿಂಗ್ ನ್ಯೂಸ್

ಮಾಜಿ ಸಿ.ಎಂ ಎಸ್.ಎಂ ಕೃಷ್ಣ ವಿಧಿವಶ, ನಾಳೆ ರಾಜ್ಯಾದ್ಯಂತ ರಜೆ ಘೋಷಣೆ

(ನ್ಯೂಸ್ ಕಡಬ) newskadaba.com ಡಿ. 10. ಮಾಜಿ ಸಿಎಂ ಎಸ್.ಎಂ ಕೃಷ್ಣರವರು ಬೆಳಗಿನ ಜಾವ ಸುಮಾರು 2.45ರ ವೇಳೆಗೆ ಕೊನೆಯುಸಿರೆಳೆದಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಚಿಕಿತ್ಸೆ ಪಡೆದು  ಗುಣಮುಖರಾಗಿ ಹಿಂದಿರುಗಿದ್ದರು. ಇಂದು ಸದಾಶಿವನಗರದ ನಿವಾಸದಲ್ಲಿ  ಎಸ್ಎಂ ಕೃಷ್ಣ ನಿಧನರಾಗಿದ್ದಾರೆ. ದೀರ್ಘ ಕಾಲದವರೆಗೆ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದ ಎಸ್‌ಎಂ ಕೃಷ್ಣ  ಅವರು ರಾಜಕೀಯ ಅಂತ್ಯದ ಸಂದರ್ಭದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದರು. ಶ್ವಾಸಕೋಶದ ಸೋಂಕು ಕಾಣಿಸಿಕೊಂಡಿದ್ದರಿಂದ ಮಣಿಪಾಲದ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಬಳಿಕವೂ ಎಸ್ ಎಂ ಕೃಷ್ಣ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು

ಮಾಜಿ ಸಿ.ಎಂ ಎಸ್.ಎಂ ಕೃಷ್ಣ ವಿಧಿವಶ, ನಾಳೆ ರಾಜ್ಯಾದ್ಯಂತ ರಜೆ ಘೋಷಣೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಸಿರಿಯಾ ಅಧ್ಯಕ್ಷ ಪಲಾಯನ

(ನ್ಯೂಸ್ ಕಡಬ) newskadaba.com , ಡಿ. 09. ಡೆಮಾಸ್ಕಸ್‌: ಸಿರಿಯಾದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆ ನಡೆದಿದ್ದು, ಕಳೆದ 24 ವರ್ಷಗಳಿಂದ ಅಧಿಕಾರದಲ್ಲಿದ್ದ ಅಧ್ಯಕ್ಷ ಬಷರ್ ಅಲ್-ಅಸ್ಸಾದ್ ಆಡಳಿತ ಅಂತ್ಯಗೊಂಡಿದ್ದು, ಅವರು ದೇಶ ಬಿಟ್ಟು ಪಲಾಯನ ಮಾಡಿದ್ದಾರೆ. 42 ವರ್ಷದ ಅಬು ಮೊಹಮ್ಮದ್ ಅಲ್-ಗೊಲಾನಿ ನೇತೃತ್ವದ ಹಯಾತ್ ತಹ್ರಿರ್ ಅಲ್-ಶಾಮ್ (HTS) ಬಂಡುಕೋರ ಪಡೆಗಳು ನಡೆಸಿದ ದಂಗೆಯಿಂದ ಬಷರ್ ಅವರ ಈ ಕಾಲು ಶತಮಾನಗಳ ಸಮೀಪದ ಆಡಳಿತ ಬಿದ್ದು ಹೋಗಿದೆ. ಸಿರಿಯಾದ ನಾಗರಿಕ ದಂಗೆಯ ಮುಖ್ಯ ಸೂತ್ರಧಾರ ಅಬು ಮೊಹಮ್ಮದ್

ಸಿರಿಯಾ ಅಧ್ಯಕ್ಷ ಪಲಾಯನ Read More »

ಬ್ರೇಕಿಂಗ್ ನ್ಯೂಸ್

ಶಬರಿಮಲೆಯಲ್ಲಿ ಭಾರೀ ಮಳೆ – ಅರಣ್ಯ ಮಾರ್ಗ ತಾತ್ಕಾಲಿಕ ಬಂದ್

(ನ್ಯೂಸ್ ಕಡಬ) newskadaba.com ಡಿ. 03 ಶಬರಿಮಲೆ: ಫೆಂಗಲ್ ಚಂಡಮಾರುತದಿಂದಾಗಿ ತಮಿಳುನಾಡ, ಕರ್ನಾಟಕ ಮತ್ತು ಕೇರಳದಲ್ಲಿ ಭಾರೀ ಮಳೆಯಾಗುತ್ತಿದೆ. ಕೇರಳದಲ್ಲಿ ಹವಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸ ಲಾಗಿದೆ. ಈ ಹಿನ್ನಲೆ ಇದೀಗ ಶಬರಿಮಲೆಗೆ ತೆರಳವು ಭಕ್ತರ ಮೇಲೂ ಮಳೆ ಸಂಕಷ್ಟ ತಂದಿದೆ. ಶಬರಿಮಲೆ ಪರಿಸರದಲ್ಲೂ ಶನಿವಾರ ಆರಂಭವಾದ ಮಳೆ ಸುರಿಯುತ್ತಲೇ ಇದೆ. ಕರ್ನಾಟಕ ಸೇರಿ ವಿವಿಧ ಜಿಲ್ಲೆಗಳಿಂದ ಶಬರಿಮಲೆಗೆ ತೆರಳಿದ್ದ ನೂರಾರು ಯಾತ್ರಿಕರು ಭಾರೀ ಮಳೆಗೆ ಸಿಲುಕಿಹಾಕಿಕೊಂಡಿದ್ದಾರೆ. ಭೂಕುಸಿತ ಉಂಟಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಅರಣ್ಯ ಮಾರ್ಗವನ್ನು ತಾತ್ಕಾಲಿಕವಾಗಿ

ಶಬರಿಮಲೆಯಲ್ಲಿ ಭಾರೀ ಮಳೆ – ಅರಣ್ಯ ಮಾರ್ಗ ತಾತ್ಕಾಲಿಕ ಬಂದ್ Read More »

ಬ್ರೇಕಿಂಗ್ ನ್ಯೂಸ್

ಕೇಂದ್ರದಿಂದ ರಾಜ್ಯಗಳಿಗೆ ವಿಶೇಷ ಅನುದಾನ: ರೂ. 50,571 ಕೋಟಿ ಬಿಡುಗಡೆ

(ನ್ಯೂಸ್ ಕಡಬ) newskadaba.com ಡಿ. 03 ನವದೆಹಲಿ: ಕೇಂದ್ರ ಸರ್ಕಾರ ರೂ. 50, 571 ಕೋಟಿ ಅನುದಾನವನ್ನು ರಾಜ್ಯಗಳಿಗೆ ಬಿಡುಗಡೆ ಮಾಡಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲ ಎಂಟು ತಿಂಗಳ ಅವಧಿಯಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ವೆಚ್ಚವನ್ನು ಹೆಚ್ಚಿಸಲು ಬಂಡವಾಳ ಹೂಡಿಕೆ ಯೋಜನೆ ಭಾಗವಾಗಿ ವಿಶೇಷ ನೆರವನ್ನು ಬಿಡುಗಡೆ ಮಾಡಲಾಗಿದೆ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಲೋಕಸಭೆಯಲ್ಲಿ ತಿಳಿಸಿದ್ದಾರೆ. ಅರುಣಾಚಲ ಪ್ರದೇಶ, ಹರಿಯಾಣ, ಕೇರಳ, ಪಂಜಾಬ್ ಮತ್ತು ತೆಲಂಗಾಣ ಹೊರತುಪಡಿಸಿ 28 ರಾಜ್ಯಗಳ ಪೈಕಿ

ಕೇಂದ್ರದಿಂದ ರಾಜ್ಯಗಳಿಗೆ ವಿಶೇಷ ಅನುದಾನ: ರೂ. 50,571 ಕೋಟಿ ಬಿಡುಗಡೆ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ತಿರುವಣ್ಣಾಮಲೈನಲ್ಲಿ ಭೂಕುಸಿತಕ್ಕೆ 7 ಮಂದಿ ಮೃತ್ಯು; ಕುಟುಂಬಸ್ಥರಿಗೆ 5 ಲ.ರೂ ಪರಿಹಾರ ಘೋಷಣೆ

(ನ್ಯೂಸ್ ಕಡಬ) newskadaba.com ಡಿ. 03.ಉಳ್ಳಾಲ: ತಮಿಳುನಾಡಿನ ತಿರುವಣ್ಣಾಮಲೈನಲ್ಲಿ 2ನೇ ಭೂಕುಸಿತ ಸಂಭವಿಸಿದೆ. ಮೊದಲನೇ ಭೂಕುಸಿತದಲ್ಲಿ ವಸತಿ ಕಟ್ಟಡದ ಮೇಲೆ ಬಂಡೆಯೊಂದು ಕುಸಿದು ಬಿದ್ದ ಪರಿಣಾಮ ಒಂದೇ ಕುಟುಂಬದ 7 ಮಂದಿ ಸಾವನ್ನಪ್ಪಿದ್ದರು. ಭಾರೀ ಮಳೆಯಿಂದಾಗಿ ಪ್ರಸಿದ್ಧ ಅಣ್ಣಾಮಲೈಯಾರ್ ಬೆಟ್ಟದ ಕೆಳಗಿನ ಇಳಿಜಾರುಗಳಲ್ಲಿ ಭಾನುವಾರ ಸಂಜೆ 4:30ಕ್ಕೆ ಈ ಅವಘಡ ಸಂಭವಿಸಿತ್ತು. ಚೆನ್ನೈನಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ತಜ್ಞರ ತಂಡವು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ಆದರೆ, ಭಾರೀ ಮಳೆಯಿಂದಾಗಿ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯುಂಟಾಗಿದೆ. 2ನೇ ಭೂಕುಸಿತ

ತಿರುವಣ್ಣಾಮಲೈನಲ್ಲಿ ಭೂಕುಸಿತಕ್ಕೆ 7 ಮಂದಿ ಮೃತ್ಯು; ಕುಟುಂಬಸ್ಥರಿಗೆ 5 ಲ.ರೂ ಪರಿಹಾರ ಘೋಷಣೆ Read More »

ಬ್ರೇಕಿಂಗ್ ನ್ಯೂಸ್

ಚಂಡಮಾರುತ- ನಾಳೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

(ನ್ಯೂಸ್ ಕಡಬ) newskadaba.com ಡಿ. 02. ಫಂಗಲ್ ಚಂಡಮಾರುತದ ಹಿನ್ನೆಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಹೀಗಾಗಿ ಹವಾಮಾನ ಇಲಾಖೆಯಿಂದ ಆರೆಂಜ್ ಅಲರ್ಟ್ ಘೋಷಿಸಲಾಗಿರುವ ಹಿನ್ನಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಅಂಗನವಾಡಿ ಮತ್ತು ಶಾಲಾ ಕಾಲೇಜುಗಳಿಗೆ ಡಿಸೆಂಬರ್ 03ರ ಮಂಗಳವಾರದಂದು ರಜೆ ಘೋಷಿಸಲಾಗಿದೆ.

ಚಂಡಮಾರುತ- ನಾಳೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಫೆಂಗಲ್ ಚಂಡಮಾರುತದ ಅಬ್ಬರ: ಪುದುಚೇರಿ, ವಿಲ್ಲುಪುರಂನಲ್ಲಿ ಭಾರಿ ಮಳೆ, ಒಂಬತ್ತು ಮಂದಿ ಸಾವು

(ನ್ಯೂಸ್ ಕಡಬ) newskadaba.com ಡಿ. 02. ಚೆನ್ನೈ:  ನಿಧಾನವಾಗಿ ಚಲಿಸುತ್ತಿರುವ ‘ಫೆಂಗಲ್’ ಚಂಡಮಾರುತ ವಿಲ್ಲುಪುರಂ ಮತ್ತು ಪುದುಚೇರಿಯಲ್ಲಿ ಭಾರೀ ಮಳೆಯನ್ನುಂಟು ಮಾಡಿದೆ. ಶನಿವಾರ ರಾತ್ರಿಯಿಂದ ವಿಲ್ಲುಪುರಂ, ಪುದುಚೇರಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಧಾರಾಕಾರ ಮಳೆಯಾಗಿದೆ. ಇದರ ಪರಿಣಾಮವಾಗಿ ಕೇಂದ್ರಾಡಳಿತ ಪ್ರದೇಶದಲ್ಲಿ ದಾಖಲೆಯ 49 ಸೆಂ.ಮೀ ಮಳೆಯಾಗಿದೆ. ಇದು ಪುದುಚೇರಿ ಇತಿಹಾಸದಲ್ಲಿಯೇ ಅತ್ಯಧಿಕವಾಗಿದೆ ಮತ್ತು ವಿಲ್ಲುಪುರಂನಲ್ಲಿ ದಾಖಲೆ ಪ್ರಮಾಣದ ಮಳೆಯಾಗಿದ್ದು,ಮೈಲಂನಲ್ಲಿನ ಸ್ವಯಂಚಾಲಿತ ಹವಾಮಾನ ಕೇಂದ್ರದಲ್ಲಿ 51 ಸೆಂ.ಮೀ.ನಷ್ಟು ಮಳೆ ಬಿದ್ದಿದೆ. ಅಧಿಕೃತ ಮೂಲಗಳ ಪ್ರಕಾರ, ಪುದುಚೇರಿಯಲ್ಲಿ ಮಳೆ ಸಂಬಂಧಿತ

ಫೆಂಗಲ್ ಚಂಡಮಾರುತದ ಅಬ್ಬರ: ಪುದುಚೇರಿ, ವಿಲ್ಲುಪುರಂನಲ್ಲಿ ಭಾರಿ ಮಳೆ, ಒಂಬತ್ತು ಮಂದಿ ಸಾವು Read More »

ಬ್ರೇಕಿಂಗ್ ನ್ಯೂಸ್
Scroll to Top