ಬ್ರೇಕಿಂಗ್ ನ್ಯೂಸ್

ಉಜ್ವಲ ಯೋಜನೆಯಡಿಯಲ್ಲಿ ಉಚಿತ ಗ್ಯಾಸ್ ಪಡೆಯಲು ಮತ್ತೊಮ್ಮೆ ಅವಕಾಶ

(ನ್ಯೂಸ್ ಕಡಬ) newskadaba.com ಡಿ. 19 ಬೆಂಗಳೂರು: ಭಾರತದ ಕೇಂದ್ರ ಸರ್ಕಾರ ಆರಂಭಿಸಿರುವ ಉಜ್ವಲ ಯೋಜನೆಗೆ  ಮತ್ತೊಮ್ಮೆ ಅರ್ಜಿಗಳನ್ನು ಸಲ್ಲಿಸಲು ಅವಕಾಶ ಒದಗಿಸಲಾಗಿದೆ. ಇದನ್ನು ‘ಉಜ್ವಲ ಯೋಜನೆ 2ʼ ಎಂದು ಕರೆಯಲಾಗಿದೆ. ಅರ್ಹ ಕುಟುಂಬಗಳಿಗೆ ಉಚಿತ ದೇಶೀಯ ಅನಿಲ ಸಿಲಿಂಡರ್‌ಗಳು ಮತ್ತು ಒಲೆಗಳನ್ನು ಈ ಯೋಜನೆಯಲ್ಲಿ ನೀಡಲಾಗುತ್ತಿದೆ. ಆರ್ಥಿಕವಾಗಿ ದುರ್ಬಲ ಜನರಿಗಾಗಿ ಕೇಂದ್ರ ಸರ್ಕಾರ ವಿವಿಧ ರೀತಿಯ ಯೋಜನೆಗಳನ್ನು ಆರಂಭಿಸಿದ್ದು, ಉಜ್ವಲ ಯೋಜನೆ ಅವುಗಳಲ್ಲಿ ಒಂದಾಗಿದೆ. ಇದರ ಅಡಿಯಲ್ಲಿ ನರೇಂದ್ರ ಮೋದಿ ಸರ್ಕಾರ ದೇಶದ ಮಹಿಳೆಯರಿಗೆ ಉಚಿತ […]

ಉಜ್ವಲ ಯೋಜನೆಯಡಿಯಲ್ಲಿ ಉಚಿತ ಗ್ಯಾಸ್ ಪಡೆಯಲು ಮತ್ತೊಮ್ಮೆ ಅವಕಾಶ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಜಾಮೀನು ಸಿಗುತ್ತಿದ್ದಂತೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಟ ದರ್ಶನ್

(ನ್ಯೂಸ್ ಕಡಬ) newskadaba.com ಡಿ. 16 ಬೆಂಗಳೂರು: ನಟ ದರ್ಶನ್ ಜಾಮೀನು ಸಿಗುತ್ತಿದ್ದಂತೆ ಸಂಪೂರ್ಣವಾಗಿ ಗುಣಮುಖರಾದಂತೆ ಕಾಣಿಸುತ್ತಿದೆ. ಅವರು ವೈದ್ಯರ ಸಲಹೆ ಪಡೆದು ಆಸ್ಪತ್ರೆಯಿಂದ ಹೊರ ಬಂದಿದ್ದಾರೆ. ಬೆನ್ನು ನೋವಿನ ಕಾರಣ ನಿಡಿ ಮಧ್ಯಂತರ ಜಾಮೀನು ಪಡೆದಿದ್ದರು. ಕಳೆದ ಒಂದೂವರೆ ತಿಂಗಳಿಂದ ಅವರು ಆಸ್ಪತ್ರೆಯಲ್ಲಿಯೇ ಇದ್ದರು. ದರ್ಶನ್​ಗೆ ಶಸ್ತ್ರಚಿಕಿತ್ಸೆ ಮಾಡಿಸದೇ ಇದ್ದರೆ ಪಾರ್ಶ್ವವಾಯು ಆಗುತ್ತದೆ ಎಂಬುವುದಾಗಿ ವೈದ್ಯರು ವರದಿ ನೀಡಿದ್ದರು. ಇದೇ ವರದಿ ನೀಡಿ ದರ್ಶನ್ ಅವರು ಮಧ್ಯಂತರ ಜಾಮೀನು ಪಡೆದು ಆಸ್ಪತ್ರೆ ಸೇರಿದ್ದರು. ಒಂದೂವರೆ ತಿಂಗಳು ಕಳೆದರೂ

ಜಾಮೀನು ಸಿಗುತ್ತಿದ್ದಂತೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಟ ದರ್ಶನ್ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಪ್ರಖ್ಯಾತ ತಬಲಾ ವಾದಕ ಜಾಕೀರ್ ಹುಸೇನ್ ನಿಧನ

(ನ್ಯೂಸ್ ಕಡಬ) newskadaba.com ಡಿ. 16 ದೆಹಲಿ: ತಬಲಾ ಮಾಂತ್ರಿಕ ಜಾಕಿರ್ ಹುಸೇನ್ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ಅವರ ಕುಟುಂಬ ಸೋಮವಾರ ತಿಳಿಸಿದೆ. ಅವರಿಗೆ 73 ವರ್ಷ. ಜಾಕಿರ್ ಹುಸೇನ್ ಅವರು ಇಡಿಯೋಪಥಿಕ್ ಪಲ್ಮನರಿ ಫೈಬ್ರೋಸಿಸ್‌ನಿಂದ ಉಂಟಾಗುವ ತೊಂದರೆಗಳಿಂದ ಸಾವನ್ನಪ್ಪಿದ್ದಾರೆ ಎಂದು ಕುಟುಂಬ ಹೇಳಿಕೆಯಲ್ಲಿ ತಿಳಿಸಿದೆ. ಕಳೆದ ಎರಡು ವಾರಗಳಿಂದ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಜಾಕಿರ್ ಹುಸೇನ್​ಗೆ 2009ರಲ್ಲಿ ಗ್ರ್ಯಾಮಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು. 1988 ರಲ್ಲಿ ಪದ್ಮಶ್ರೀ ಮತ್ತು

ಪ್ರಖ್ಯಾತ ತಬಲಾ ವಾದಕ ಜಾಕೀರ್ ಹುಸೇನ್ ನಿಧನ Read More »

ಬ್ರೇಕಿಂಗ್ ನ್ಯೂಸ್

RBI ಪ್ರಧಾನ ಕಛೇರಿಗೆ ರಷ್ಯನ್ ಭಾಷೆಯಲ್ಲಿ ಬಾಂಬ್ ಬೆದರಿಕೆ

(ನ್ಯೂಸ್ ಕಡಬ) newskadaba.com ಡಿ. 13. ಮುಂಬೈ: ಮುಂಬೈನಲ್ಲಿರುವ ಭಾರತೀಯ ರಿಸರ್ವ್ ಬ್ಯಾಂಕ್ ನ ಪ್ರಧಾನ ಕಚೇರಿಯನ್ನು ಸ್ಫೋಟಿಸುವುದಾಗಿ ದುಷ್ಕರ್ಮಿಗಳಿಂದ ಡಿಸೆಂಬರ್ 13 ರಂದು ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದೆ. ಆರ್‌ಬಿಐ ಇಮೇಲ್‌ಗೆ ದುಷ್ಕರ್ಮಿಗಳು ರಷ್ಯನ್ ಭಾಷೆಯಲ್ಲಿ ಬೆದರಿಕೆ ಸಂದೇಶ ಕಳುಹಿಸಿದ್ದು, ಆರ್‌ಬಿಐ ಕಟ್ಟಡದ ಮೇಲೆ ದಾಳಿಯ ಎಚ್ಚರಿಕೆ ನೀಡಲಾಗಿದೆ. ಕಳೆದ ಒಂದು ತಿಂಗಳಲ್ಲಿ ಇದು 2ನೇ ಬೆದರಿಕೆಯಾಗಿದೆ.ಸದ್ಯ ಮುಂಬೈನ ಮಾತಾ ರಮಾಬಾಯಿ ಮಾರ್ಗ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸಂಬಂಧಿತ ಸೆಕ್ಷನ್‌ಗಳ

RBI ಪ್ರಧಾನ ಕಛೇರಿಗೆ ರಷ್ಯನ್ ಭಾಷೆಯಲ್ಲಿ ಬಾಂಬ್ ಬೆದರಿಕೆ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಸೋಡಿಯಂ ಬಳಸಿ ಸ್ಫೋಟ ಪ್ರಕರಣ- ಡ್ರೋನ್ ಪ್ರತಾಪ್ ಅರೆಸ್ಟ್..!

(ನ್ಯೂಸ್ ಕಡಬ) newskadaba.com ಡಿ. 13. ಡ್ರೋನ್ ಮೂಲಕ ವಿವಾದ ಸೃಷ್ಟಿಸಿ ಬಳಿಕ ಕನ್ನಡ ಬಿಗ್‌ಬಾಸ್ ಮೂಲಕ ಭಾರೀ ಜನಪ್ರಿಯತೆ ಪಡೆದುಕೊಂಡಿದ್ದ ಡ್ರೋನ್ ಪ್ರತಾಪ್, ಇದೀಗ ಸೋಡಿಯಂ ಬಳಸಿ ಸ್ಫೋಟ ನಡೆಸಿದ ಪ್ರಕರಣದಲ್ಲಿ ತುಮಕೂರು ಪೊಲೀಸರಿಂದ ಅರೆಸ್ಟ್ ಆಗಿದ್ದಾರೆ. ಭಾರತೀಯ ದಂಡ ಸಂಹಿತೆ ಅಡಿಯ ಸೆಕ್ಷನ್ 288 ಹಾಗೂ ಸ್ಫೋಟಕ ವಸ್ತುಗಳ ಕಾಯ್ದೆಯ ಸೆಕ್ಷನ್ 3ರ ಅಡಿ ಡ್ರೋನ್ ಪ್ರತಾಪ್ ವಿರುದ್ದ ಪ್ರಕರಣ ದಾಖಲಾಗಿದೆ. ಡ್ರೋನ್ ಪ್ರತಾಪ್ ಸೋಶಿಯಲ್ ಮೀಡಿಯಾದಲ್ಲಿನ ವಿಡಿಯೋಗಾಗಿ ಕೃಷಿ ಹೊಂಡದಲ್ಲಿನ ನೀರಿನಲ್ಲಿ ಸೋಡಿಯಂ

ಸೋಡಿಯಂ ಬಳಸಿ ಸ್ಫೋಟ ಪ್ರಕರಣ- ಡ್ರೋನ್ ಪ್ರತಾಪ್ ಅರೆಸ್ಟ್..! Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಹರಿಯಾಣದಲ್ಲಿ ಅಪರಾಧಿಗಳಿಗೆ ಜಾಗವಿಲ್ಲ: ಮುಖ್ಯಮಂತ್ರಿ ನಯಾಬ್ ಸಿಂಗ್

(ನ್ಯೂಸ್ ಕಡಬ) newskadaba.com ಡಿ. 13.ಹರಿಯಾಣ: ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಗುರುವಾರ ಇಲ್ಲಿ ಅಪರಾಧಿಗಳಿಗೆ ಸ್ಥಳವಿಲ್ಲ ಎಂದು ಹೇಳಿದ್ದಾರೆ. ರಾಜ್ಯ ಪೊಲೀಸರು ಈಗಾಗಲೇ ಒಬ್ಬ ಆರೋಪಿಯನ್ನು ಸ್ಥಳದಿಂದ ಬಂಧಿಸಿದ್ದು, ದಾಳಿಗೆ ಕಾರಣರಾದ ಯಾರನ್ನೂ ಬಿಡಲಾಗುವುದಿಲ್ಲ ಎಂದು ಮುಖ್ಯಮಂತ್ರಿ ಹೇಳಿದರು. ಗೋಲ್ಡಿ ಬ್ರಾರ್ ಮತ್ತು ಲಾರೆನ್ಸ್ ಬಿಷ್ಣೋಯ್ ಅವರ ಸಹಚರ ದರೋಡೆಕೋರ ರೋಹಿತ್ ಗೋಡಾರಾ ವಾರದ ಆರಂಭದಲ್ಲಿ ಇಲ್ಲಿನ ಸೆಕ್ಟರ್ 29 ರ ಕ್ಲಬ್‌ನ ಹೊರಗೆ ಕಚ್ಚಾ ಬಾಂಬ್ ಸ್ಫೋಟಿಸಿದ ವಿಚಾರದ ಕುರಿತು ಇವರು ಮಾತನಾಡಿದರು.

ಹರಿಯಾಣದಲ್ಲಿ ಅಪರಾಧಿಗಳಿಗೆ ಜಾಗವಿಲ್ಲ: ಮುಖ್ಯಮಂತ್ರಿ ನಯಾಬ್ ಸಿಂಗ್ Read More »

ಬ್ರೇಕಿಂಗ್ ನ್ಯೂಸ್
Crime

ಶಾಲಾ ಮುಖ್ಯ ಶಿಕ್ಷಕರಿಗೆ ಜೀವ ಬೆದರಿಕೆ- ದೂರು ದಾಖಲು

(ನ್ಯೂಸ್ ಕಡಬ) newskadaba.com ಡಿ. 12. ಹಳೆವಿದ್ಯಾರ್ಥಿಯೋರ್ವ ಶಾಲಾ ವಠಾರಕ್ಕೆ ಬಂದು ಶಾಲಾ ಮುಖ್ಯ ಶಿಕ್ಷಕರಿಗೆ ಬೆದರಿಕೆ ಒಡ್ಡಿದ ಘಟನೆ ಮಂಗಳವಾರ ಎಲಿಮಲೆಯಲ್ಲಿ ನಡೆದಿದೆ. ಎಲಿಮಲೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶತಮಾನೋತ್ಸವ ಸಂಭ್ರಮದಲ್ಲಿದ್ದು ಹಗಲು ರಾತ್ರಿ ನಿರಂತರ ಕೆಲಸ ಕಾರ್ಯಗಳು ನಡೆಯುತ್ತಿದ್ದು, ನಿನ್ನೆಯೂ ಹಿಟಾಚಿ ಯಂತ್ರದ ಮೂಲಕ ಕೆಲಸಗಳು ನಡೆಯುತ್ತಿತ್ತು. ಈ ಕಾಮಗಾರಿಯನ್ನು ವೀಕ್ಷಿಸಲು ಮುಖ್ಯಶಿಕ್ಷಕರು, ಹಳೆ ವಿದ್ಯಾರ್ಥಿಗಳು ಮತ್ತು ಶತಮಾನೋತ್ಸವ ಸಮಿತಿಯವರು ಬಂದಿದ್ದು, ಇದೇ ಸಂದರ್ಭ ಹಳೆ ವಿದ್ಯಾರ್ಥಿಗಳು ಶತಮಾನೋತ್ಸವದ ಲಕ್ಕಿಡಿಪ್ ವಿಚಾರವಾಗಿ ಚರ್ಚಿಸುತ್ತಿದ್ದರೆನ್ನಲಾಗಿದೆ.

ಶಾಲಾ ಮುಖ್ಯ ಶಿಕ್ಷಕರಿಗೆ ಜೀವ ಬೆದರಿಕೆ- ದೂರು ದಾಖಲು Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಜ.21ರಿಂದ ಮಂಗಳೂರು-ಸಿಂಗಾಪುರ ವಿಮಾನ ಹಾರಾಟ ಆರಂಭ

(ನ್ಯೂಸ್ ಕಡಬ) newskadaba.com ಡಿ. 12. ಮಂಗಳೂರು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದಿಂದ 2025ರ ಜ. 21ರಿಂದ ಸಿಂಗಾಪುರಕ್ಕೆ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ನ ನೇರ ವಿಮಾನ ಹಾರಾಟ ಆರಂಭವಾಗಲಿದೆ. ವಾರದಲ್ಲಿ ಎರಡು ದಿನ ಅಂದರೆ ಮಂಗಳವಾರ ಮತ್ತು ಶುಕ್ರವಾರದಂದು ವಿಮಾನದ ಸೇವೆ ಹಾರಾಟ ಇರುತ್ತದೆ. ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಅವರು 2024ರ ಸೆಪ್ಟೆಂಬರ್‌ನಲ್ಲಿ ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಅವರಿಗೆ ಮಂಗಳೂರು ಮತ್ತು ಸಿಂಗಾಪುರ ನೇರ ವಿಮಾನ ಸಂಪರ್ಕ ಸೌಲಭ್ಯಕ್ಕಾಗಿ

ಜ.21ರಿಂದ ಮಂಗಳೂರು-ಸಿಂಗಾಪುರ ವಿಮಾನ ಹಾರಾಟ ಆರಂಭ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಜಮ್ಮು ಕಾಶ್ಮೀರ: ಯೋಧರೋರ್ವರು ಸರ್ವಿಸ್ ರೈಫಲ್ ನಿಂದ ಗುಂಡು ಹಾರಿಸಿ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com  ಡಿ. 12 ಹೊಸದಿಲ್ಲಿ: ಸೇನಾ ಸಿಬ್ಬಂದಿಯೋರ್ವರು  ಜಮ್ಮು- ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ಸರ್ವಿಸ್ ರೈಫಲ್‌ ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ  ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಂಜಕೋಟೆ ಪ್ರದೇಶದ ಅಂಜನವಾಲಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಸೇನಾ ಸಿಬ್ಬಂದಿ ಇಂದೇಶ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡವರು. ಆತ್ಮಹತ್ಯೆಯ ನಿಖರ ಕಾರಣಗಳು ತಿಳಿದು ಬಂದಿಲ್ಲ. ಈ ಕುರಿತು ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಮ್ಮು ಕಾಶ್ಮೀರ: ಯೋಧರೋರ್ವರು ಸರ್ವಿಸ್ ರೈಫಲ್ ನಿಂದ ಗುಂಡು ಹಾರಿಸಿ ಆತ್ಮಹತ್ಯೆ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಬಂಡುಕೋರರ ವಶದಲ್ಲಿರುವ ಸಿರಿಯಾದ 75 ಭಾರತೀಯ ಪ್ರಜೆಗಳನ್ನು ಸ್ಥಳಾಂತರ

(ನ್ಯೂಸ್ ಕಡಬ) newskadaba.com .ಡಿ. 11. ನವದೆಹಲಿ: ಸಿರಿಯಾ ಅಧ್ಯಕ್ಷ ಬಶರ್ ಅಲ್ ಅಸ್ಸಾದ್ ಅವರನ್ನು ಇಸ್ಲಾಮಿಕ್ ಬಂಡುಕೋರರು ಪದಚ್ಯುತಗೊಳಿಸಿದ್ದು, ಈ ಹಿನ್ನೆಲೆಯಲ್ಲಿ ಸಿರಿಯಾದಿಂದ 75 ಮಂದಿ ಭಾರತೀಯರನ್ನು ಸ್ಥಳಾಂತರಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಬುಧವಾರ ಮಾಹಿತಿ ನೀಡಿದೆ. ವಿದೇಶದಲ್ಲಿರುವ ಭಾರತೀಯ ಪ್ರಜೆಗಳ ಸುರಕ್ಷತೆ ಮತ್ತು ಭದ್ರತೆಗೆ ಸರ್ಕಾರವು ಹೆಚ್ಚಿನ ಆದ್ಯತೆಯನ್ನು ನೀಡುತ್ತದೆ ಎಂದು ಸಚಿವಾಲಯ ಒತ್ತಿ ಹೇಳಿದೆ. ಸಿರಿಯಾದಲ್ಲಿ ಇತ್ತೀಚಿನ ಬೆಳವಣಿಗೆಗಳ ನಂತರ ಭಾರತ ಸರ್ಕಾರವು ಇಂದು 75 ಭಾರತೀಯ ಪ್ರಜೆಗಳನ್ನು ಸಿರಿಯಾದಿಂದ ಸ್ಥಳಾಂತರಿಸಿದೆ.

ಬಂಡುಕೋರರ ವಶದಲ್ಲಿರುವ ಸಿರಿಯಾದ 75 ಭಾರತೀಯ ಪ್ರಜೆಗಳನ್ನು ಸ್ಥಳಾಂತರ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top