ಬ್ರೇಕಿಂಗ್ ನ್ಯೂಸ್

ಕಾಂಗ್ರೆಸ್  ಹಿರಿಯ ಮುಖಂಡ, ಕೇಂದ್ರದ ಮಾಜಿ ಸಚಿವ ರಾಜಶೇಖರ್ ನಿಧನ

ಬೆಂಗಳೂರು, ಎ.13: ಕಾಂಗ್ರೆಸ್  ಹಿರಿಯ ಮುಖಂಡ, ಕೇಂದ್ರದ ಮಾಜಿ ಸಚಿವ ಎಂ.ವಿ. ರಾಜಶೇಖರ್ (92) ಸೋಮವಾರ ಬೆಳಗ್ಗೆ ನಿಧನರಾದರು. ಅವರು ಬಹು ಅಂಗಾಗ ವೈಪಲ್ಯದಿಂದ ಬಳಲುತ್ತಿದ್ದು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಅವರ ಪುತ್ರ ತಿಳಿಸಿದ್ದಾರೆ. ರಾಜಶೇಖರನ್‌ ಅವರು ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ್ದು ಕಾಂಗ್ರೆಸ್‌ ಪಕ್ಷದಲ್ಲಿ ಹಲವು ಹುದ್ದೆಗಳನ್ನು ನಿರ್ವಹಿಸಿದ್ದಾರೆ. 92 ವರ್ಷ ವಯಸ್ಸಿನ ಇವರು ಬೆಂಗಳೂರು ಗ್ರಾಮಾಂತರ ಜಿಲ್ಲೆ ಕನಕಪುರ ತಾಲೂಕಿನ ಮರಳವಾಡಿಯಲ್ಲಿ ಜನಿಸಿದ್ದು ಕರ್ನಾಟಕದ ಉತ್ತಮ ರಾಜಕಾರಣಿಗಳಲ್ಲಿ ಓರ್ವರಾಗಿದ್ದಾರೆ.  

ಕಾಂಗ್ರೆಸ್  ಹಿರಿಯ ಮುಖಂಡ, ಕೇಂದ್ರದ ಮಾಜಿ ಸಚಿವ ರಾಜಶೇಖರ್ ನಿಧನ Read More »

ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಕೊರೋನ ವೈರಸ್ ಗೆ ಭಾರತದಲ್ಲಿ ಮತ್ತೊಬ್ಬ ವೈದ್ಯ ಬಲಿ

ಇಂದೋರ್, ಎ.12: ಭಾರತದಲ್ಲಿ ಕೊರೋನ ವೈರಸ್ ಭೀತಿ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಕೊರೋನ ವೈರಸ್ ಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರೊಬ್ಬರು ಕೊವಿಡ್ 19 ಗೆ ಬಲಿಯಾಗಿದ್ದಾರೆ. ಮಧ್ಯಪ್ರದೇಶದ ಇಂದೋರ್ ನಲ್ಲಿ 65 ವರ್ಷದ ವೈದ್ಯ ಓಂ ಪ್ರಕಾಶ್ ಚೌಹಾಣ್ ಅವರು ಕೊರೊನಾ ವೈರಸ್ ಸೋಂಕಿಗೆ ಬಲಿಯಾಗಿದ್ದಾರೆ. ಆಯುಷ್ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದ ಚೌಹಾಣ್ ಅವರಿಗೆ ಇತ್ತೀಚೆಗೆ ಕೊವಿಡ್ 19 ಸೋಂಕು ದೃಢಪಟ್ಟಿತ್ತು. ಕೊರೊನಾ ವೈರಸ್ ದೃಢಪಟ್ಟ ಹಿನ್ನೆಲೆಯಲ್ಲಿ ಚೌಹಾಣ್ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ

ಕೊರೋನ ವೈರಸ್ ಗೆ ಭಾರತದಲ್ಲಿ ಮತ್ತೊಬ್ಬ ವೈದ್ಯ ಬಲಿ Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಮುಂಬೈ ತಾಜ್ ಮಹಲ್ ಹೊಟೇಲ್ ನ ಆರು ಮಂದಿ ಸಿಬ್ಬಂದಿಗೆ ಕೊರೋನ ಪಾಸಿಟಿವ್

ಮಹಾರಾಷ್ಟ್ರ, ಎ.12: ಮುಂಬೈ ತಾಜ್ ಮಹಲ್ ಹೊಟೇಲ್ ನ ಆರು ಮಂದಿ ಸಿಬ್ಬಂದಿಗೆ ಕೋವಿಡ್-19 ಪಾಸಿಟಿವ್ ವರದಿ ಬಂದಿದೆ ಇಂಡಿಯಾ ಟುಡೇ ವರದಿ ಮಾಡಿದೆ. ಸದ್ಯ ಆರು ಮಂದಿ ತಾಜ್ ಮಹಲ್ ಪ್ಯಾಲೇಸ್ ಹೊಟೇಲ್ ಸಿಬ್ಬಂದಿಯ ಆರೋಗ್ಯ ಸ್ಥಿರವಾಗಿದ್ದು ಬಾಂಬೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಡಾ. ಗೌತಮ್ ಬನ್ಸಾಲಿ ತಿಳಿಸಿದ್ದಾರೆ. ಆದರೆ ತಾಜ್ ಹೊಟೇಲ್ ನ ಎಷ್ಟು ಮಂದಿ ನೌಕರರಿಗೆ ಸೋಂಕು ತಗುಲಿದೆ ಎನ್ನುವುದು ಇನ್ನೂ ಖಚಿತವಾಗಿಲ್ಲ. 6 ಮಂದಿಯಲ್ಲಿ ಪಾಸಿಟಿವ್ ವರದಿ ಬಂದ ತಕ್ಷಣವೇ

ಮುಂಬೈ ತಾಜ್ ಮಹಲ್ ಹೊಟೇಲ್ ನ ಆರು ಮಂದಿ ಸಿಬ್ಬಂದಿಗೆ ಕೊರೋನ ಪಾಸಿಟಿವ್ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ದೇಶದಲ್ಲಿ ಒಂದೇ ದಿನ ಕೊರೋನಗೆ 34 ಮಂದಿ ಸಾವು: 909 ಮಂದಿಗೆ ಸೋಂಕು ದೃಢ

ಹೊಸದಿಲ್ಲಿ, ಎ.12: ಮಹಾಮಾರಿ ಕೊರೋನ ವೈರಸ್​ ಅಟ್ಟಹಾಸ ಮುಂದುವರಿಯುತ್ತಲೇ ಇದೆ. ಭಾರತದಲ್ಲಿ ಸೋಂಕಿತರ ಸಂಖ್ಯೆ 8,356ಕ್ಕೆ ಏರಿಕೆಯಾಗಿದೆ. ಕಳೆದ 24ಗಂಟೆಯಲ್ಲಿ 909 ಮಂದಿಯಲ್ಲಿ ಕೊರೋನ ಸೋಂಕು ಪತ್ತೆಯಾಗಿದ್ದು ಒಟ್ಟು 34 ಜನ ಸಾವನ್ನಪ್ಪಿದ್ದಾರೆ. ಈ ಮೂಲಕ ಭಾರತದಲ್ಲಿ ಒಟ್ಟು ಸಾವಿನಸಂಖ್ಯೆ 273ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಮಾ.24ರ ಮಧ್ಯರಾತ್ರಿಯಿಂದ ಭಾರತ ಲಾಕ್​ಡೌನ್​ ಆಗಿತ್ತು. ಎ.14ರವರೆಗೆ ಅದರ ಅವಧಿ ಇತ್ತು. ಆದರೆ ಸೋಂಕಿನ ಪ್ರಮಾಣ ಹೆಚ್ಚುತ್ತಲೇ ಇರುವುದರಿಂದ ನಿನ್ನೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಎಲ್ಲ

ದೇಶದಲ್ಲಿ ಒಂದೇ ದಿನ ಕೊರೋನಗೆ 34 ಮಂದಿ ಸಾವು: 909 ಮಂದಿಗೆ ಸೋಂಕು ದೃಢ Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕೊರೋನಾ ಪೀಡಿತ 10 ತಿಂಗಳ ಮಗು ಸಂಪೂರ್ಣ ಗುಣಮುಖ ➤ ಆಸ್ಪತ್ರೆಯಿಂದ ಡಿಸ್ಚಾರ್ಜ್

(ನ್ಯೂಸ್ ಕಡಬ) newskadaba.com ಮಂಗಳೂರು, ಎ.11. ಕೊರೊನಾ ಪಾಸಿಟಿವ್‌ ಕಂಡು ಬಂದಿದ್ದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಬಂಟ್ವಾಳ ತಾಲೂಕಿನ ಸಜಿಪನಡು ಗ್ರಾಮದ 10 ತಿಂಗಳ ಮಗು ಸಂಪೂರ್ಣ ಗುಣಮುಖವಾಗಿದ್ದು, ಮಗುವನ್ನು ಶನಿವಾರದಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಹತ್ತು ತಿಂಗಳ ಮಗುವಿಗೆ ಕೊರೋನಾ ಬಾಧಿಸಿದ್ದರಿಂದ ಕರಾವಳಿಯ ಜನತೆ ಆತಂಕಗೊಂಡಿದ್ದರು. ಆದರೆ ಇದೀಗ ಮಗುವಿನ ವೈದ್ಯಕೀಯ ವರದಿ ಬಂದಿದ್ದು, ಕೊರೋನಾ ಸೋಂಕು ಸಂಪೂರ್ಣ ಗುಣಮುಖವಾಗಿದೆ‌. ಜ್ವರ ಹಾಗೂ ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನಲೆಯಲ್ಲಿ ಮಗುವನ್ನು ಮಾರ್ಚ್ 23ರಂದು ಆಸ್ಪತ್ರೆಗೆ

ಕೊರೋನಾ ಪೀಡಿತ 10 ತಿಂಗಳ ಮಗು ಸಂಪೂರ್ಣ ಗುಣಮುಖ ➤ ಆಸ್ಪತ್ರೆಯಿಂದ ಡಿಸ್ಚಾರ್ಜ್ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

?ಲಾಕ್ಡೌನ್ ಉಲ್ಲಂಘನೆ ಪತ್ತೆಗೆ ದಕ್ಷಿಣ ಕನ್ನಡ ಪೊಲೀಸರಿಂದ ಡ್ರೋನ್ ಬಳಕೆ ➤ ಕ್ಯಾಮೆರಾ ಕಂಡು ಎದ್ದೆನೋ – ಬಿದ್ದೆನೋ ಎಂದೋಡಿದ ಆಟಗಾರರು

?? ವೀಡಿಯೋ | Video ?? ?ಲಾಕ್ಡೌನ್ ಉಲ್ಲಂಘನೆ ಪತ್ತೆಗೆ ದಕ್ಷಿಣ ಕನ್ನಡ ಪೊಲೀಸರಿಂದ ಡ್ರೋನ್ ಬಳಕೆ ➤ ಕ್ಯಾಮೆರಾ ಕಂಡು ಎದ್ದೆನೋ – ಬಿದ್ದೆನೋ ಎಂದೋಡಿದ ಆಟಗಾರರು ➤ ಇನ್ಮುಂದೆ ಮನೆಯಿಂದ? ಹೊರಬರುವವರ ಮೇಲೆ ಡ್ರೋನ್ ಕ್ಯಾಮೆರಾ? ಕಣ್ಣು? ವೀಡಿಯೋ ನೋಡಲು??ಕ್ಲಿಕ್‌ ಮಾಡಿ

?ಲಾಕ್ಡೌನ್ ಉಲ್ಲಂಘನೆ ಪತ್ತೆಗೆ ದಕ್ಷಿಣ ಕನ್ನಡ ಪೊಲೀಸರಿಂದ ಡ್ರೋನ್ ಬಳಕೆ ➤ ಕ್ಯಾಮೆರಾ ಕಂಡು ಎದ್ದೆನೋ – ಬಿದ್ದೆನೋ ಎಂದೋಡಿದ ಆಟಗಾರರು Read More »

ಬ್ರೇಕಿಂಗ್ ನ್ಯೂಸ್

ರಾಜ್ಯದಲ್ಲಿ ಎಪ್ರಿಲ್ 30 ರ ವರೆಗೆ ಲಾಕ್ಡೌನ್ ವಿಸ್ತರಣೆ ➤ ಮುಂದಿನ ಲಾಕ್ಡೌನ್ ವಿಭಿನ್ನವಾಗಿರಲಿದೆ: ಸಿಎಂ

(ನ್ಯೂಸ್ ಕಡಬ) newskadaba.com ಬೆಂಗಳೂರು, ಎ.11. ರಾಜ್ಯದಲ್ಲಿ ಲಾಕ್ಡೌನ್ ಎಪ್ರಿಲ್ 30 ರ ವರೆಗೆ ಮುಂದುವರಿಸುವುದು ಅನಿವಾರ್ಯ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸುಳಿವು ನೀಡಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಟಿಯಲ್ಲಿ ತಿಳಿಸಿದ ಅವರು, ಮಾರಣಾಂತಿಕ ಕೊರೋನಾ ವೈರಸ್‌ ಜಗತ್ತಿನಾದ್ಯಂತ ತನ್ನ ಅಟ್ಟಹಾಸವನ್ನು ಮೆರೆಯುತ್ತಿದ್ದು, ಇದರ ನಿಯಂತ್ರಣಕ್ಕಾಗಿ ದೇಶದಾದ್ಯಂತ ಘೋಷಿಸಲಾಗಿದ್ದ ಲಾಕ್‌ ಡೌನ್‌ ಏಪ್ರಿಲ್‌ 14 ರಂದು ಅಂತ್ಯವಾಗುತ್ತಿದ್ದು, ಇದನ್ನು ಏಪ್ರಿಲ್‌ 30 ರವರೆಗೆ ವಿಸ್ತರಣೆ ಮಾಡುವುದು ಅನಿವಾರ್ಯವಾಗಿದೆ. ಮುಂದಿನ ಲಾಕ್ಡೌನ್ ವಿಭಿನ್ನವಾಗಿರಲಿದ್ದು, ಮೀನುಗಾರಿಕೆಗೆ ಅವಕಾಶ ಕಲ್ಪಿಸಲಾಗುವುದು ಎಂದಿದ್ದಾರೆ.

ರಾಜ್ಯದಲ್ಲಿ ಎಪ್ರಿಲ್ 30 ರ ವರೆಗೆ ಲಾಕ್ಡೌನ್ ವಿಸ್ತರಣೆ ➤ ಮುಂದಿನ ಲಾಕ್ಡೌನ್ ವಿಭಿನ್ನವಾಗಿರಲಿದೆ: ಸಿಎಂ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬಡ ವೃದ್ಧೆಗೆ ಸ್ವಂತ ಹಣದಿಂದ ದಿನಸಿ ಸಾಮಾನುಗಳ ಖರೀದಿ ➤ ಕಡಬ ಠಾಣೆಯ ಮಹಿಳಾ ಸಿಬ್ಬಂದಿಗಳ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ

(ನ್ಯೂಸ್ ಕಡಬ) newskadaba.com ಕಡಬ, ಎ.11. ಬಡತನದಿಂದ ದಿನದೂಡುತ್ತಿದ್ದ ವೃದ್ಧೆಯೋರ್ವರಿಗೆ ದಿನಬಳಕೆಯ ಸಾಮಾಗ್ರಿಗಳನ್ನು ಖರೀದಿಸಿಕೊಟ್ಟು ಕಡಬ ಠಾಣೆಯ‌ ಮಹಿಳಾ ಪೊಲೀಸರು ಮಾನವೀಯತೆ ಮೆರೆದಿದ್ದಾರೆ.   ವೃದ್ಧೆಯ ಮನೆಯಲ್ಲಿ ದಿನ ಬಳಕೆಯ ವಸ್ತುಗಳು ಇಲ್ಲದಿರುವ ಬಗ್ಗೆ ಮಾಹಿತಿ ತಿಳಿದ ಮಹಿಳಾ ಸಿಬ್ಬಂದಿಗಳಾದ ಭಾಗ್ಯಮ್ಮ ಮತ್ತು ನಾಗರತ್ನ ತಮ್ಮದೇ ದುಡ್ಡಿನಲ್ಲಿ ಸಾಮಾಗ್ರಿಗಳನ್ನು ಖರೀದಿಸಿ ಆಟೋರಿಕ್ಷಾದ ಮೂಲಕ ವೃದ್ಧೆಯನ್ನು ಕಳುಹಿಸಿಕೊಟ್ಟರು. ಸ್ಥಳೀಯರೋರ್ವರು ಈ ಫೋಟೋ ಕ್ಲಿಕ್ಕಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಶುಕ್ರವಾರ ಕೂಡಾ ಮರ್ಧಾಳದಲ್ಲಿ ಕರ್ತವ್ಯ ನಿರತರಾಗಿದ್ದ ಕಡಬ ಠಾಣೆಯ

ಬಡ ವೃದ್ಧೆಗೆ ಸ್ವಂತ ಹಣದಿಂದ ದಿನಸಿ ಸಾಮಾನುಗಳ ಖರೀದಿ ➤ ಕಡಬ ಠಾಣೆಯ ಮಹಿಳಾ ಸಿಬ್ಬಂದಿಗಳ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ದೇಶದಲ್ಲಿ 24 ಗಂಟೆಗಳಲ್ಲಿ 1,035 ಮಂದಿಯಲ್ಲಿ ಕೊರೋನ ಪಾಸಿಟಿವ್: ಸೋಂಕಿತರ ಸಂಖ್ಯೆ 7,447ಕ್ಕೆ ಏರಿಕೆ

ಹೊಸದಿಲ್ಲಿ, ಎ11: ದೇಶದಲ್ಲಿ ಮಾರಕ ಕೊರೋನ ವೈರಸ್ ಆತಂಕ ತಂದೊಡ್ಡಿದೆ. ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಸೋಂಕು ನಿಯಂತ್ರಣಕ್ಕೆ ಅಗತ್ಯ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ. ಏತನ್ಮಧ್ಯೆ, ದೇಶದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 1,035 ಮಂದಿಯಲ್ಲಿ ಹೊಸದಾಗಿ ಕೊರೊನಾ ಪಾಸಿಟಿವ್ ಬಂದಿದ್ದು, ಸೋಂಕು ಪೀಡಿತರ ಸಂಖ್ಯೆ 7,447ಕ್ಕೆ ಏರಿಕೆಯಾಗಿದೆ. ಈ ಕುರಿತಂತೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ 1035 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 40

ದೇಶದಲ್ಲಿ 24 ಗಂಟೆಗಳಲ್ಲಿ 1,035 ಮಂದಿಯಲ್ಲಿ ಕೊರೋನ ಪಾಸಿಟಿವ್: ಸೋಂಕಿತರ ಸಂಖ್ಯೆ 7,447ಕ್ಕೆ ಏರಿಕೆ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಭಾರತದಲ್ಲಿ ಈವರೆಗೆ ಎಷ್ಟು ಮಂದಿಗೆ ಕೋವಿಡ್-19 ಪರೀಕ್ಷೆ ಮಾಡಲಾಗಿದೆ: ವೈದ್ಯಕೀಯ ಸಂಶೋಧನಾ ಮಂಡಳಿ ಏನು ಹೇಳುತ್ತೆ?

ಹೊಸದಿಲ್ಲಿ, ಎ.11 : ದೇಶದಲ್ಲಿ ಮಾರಕ ಕೊರೋನ ಸೋಂಕು ತಲ್ಲಣ ಸೃಷ್ಟಿಸಿದ್ದು, ದಿನೇ ದಿನೇ ಸೋಂಕು ಪೀಡಿತರ ಸಂಖ್ಯೆ ವ್ಯಾಪಿಸುತ್ತಲೇ ಇದೆ. ಏತನ್ಮಧ್ಯೆ, ದೇಶಾದ್ಯಂತ ಏ.10ರವರೆಗೆ 1,61,330 ಮಂದಿಗೆ ಕೊರೊನಾ ಪರೀಕ್ಷೆ ನಡೆಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಸ್ಪಷ್ಟಪಡಿಸಿದೆ. ಎ.10ರಂದು ರಾತ್ರಿ 9 ಗಂಟೆಯವರೆಗೆ 1, 47,034 ಮಂದಿಯಿಂದ ಸಂಗ್ರಹಿಸಲಾದ 1,61,330 ಮಾದರಿಗಳನ್ನು ಪರೀಕ್ಷೆ ನಡೆಸಲಾಗಿದೆ. ಕೊರೊನಾ ಹಾಟ್ ಸ್ಪಾಟ್ ಪ್ರದೇಶಗಳಲ್ಲಿ ಕೋವಿಡ್-19 ಲಕ್ಷಣವಿರುವ ಎಲ್ಲ ಪ್ರಕರಣಗಳನ್ನು ಪರೀಕ್ಷೆಗೆ ಒಳಪಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ.

ಭಾರತದಲ್ಲಿ ಈವರೆಗೆ ಎಷ್ಟು ಮಂದಿಗೆ ಕೋವಿಡ್-19 ಪರೀಕ್ಷೆ ಮಾಡಲಾಗಿದೆ: ವೈದ್ಯಕೀಯ ಸಂಶೋಧನಾ ಮಂಡಳಿ ಏನು ಹೇಳುತ್ತೆ? Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top