ಉಡುಪಿ: ಮೆಹಂದಿಯ ದಿನವೇ ವರ ನಾಪತ್ತೆ, ಮದುವೆ ರದ್ದು

(ನ್ಯೂಸ್ ಕಡಬ) newskadaba.com ಉಡುಪಿ, ಆ. 20. ಮದುವೆ ಹಿಂದಿನ ದಿನವೇ ಮದುಮಗ ನಾಪತ್ತೆಯಾದ ಕಾರಣ ಸೋಮವಾರದಂದು (ಆ. 19) ನಡೆಯಬೇಕಿದ್ದ ಮದುವೆ ರದ್ದಾದ ಕುರಿತು ವರದಿಯಾಗಿದೆ.

 

ಅಳಿವೆಕೋಡಿ ಗ್ರಾಮದ ಯುವಕನೊಂದಿಗೆ ಉಪ್ಪುಂದ ಗ್ರಾಮದ ಯುವತಿಯ ಮದುವೆ ಸೋಮವಾರ ನಾಗೂರಿನಲ್ಲಿ ನಡೆಯಬೇಕಿತ್ತು. ಆ. 18 ರಂದು ಹುಡುಗನ ಮನೆಯಲ್ಲಿ ಮೆಹಂದಿ ಕಾರ್ಯಕ್ರಮ ನಡೆಸಲು ಸಿದ್ಧತೆ ನಡೆದಿತ್ತು. ಮದುಮಗ ಆ. 18ರಂದು ಮದುವೆಗೆ ಅಗತ್ಯವಿರುವ ಚಿನ್ನಾಭರಣಗಳನ್ನು ಅಂಗಡಿಯಿಂದ ಪಡೆದು, ಚಿನ್ನಾಭರಣಗಳನ್ನು ಮನೆಯಲ್ಲಿಟ್ಟು ಕೆಲವು ವಸ್ತುಗಳನ್ನು ತರಲು ಬಾಕಿಯಿದೆ ಎಂದು ಮನೆಯವರಲ್ಲಿ ಹೇಳಿ, ಕೈಯಲ್ಲಿದ್ದ ಮೊಬೈಲ್‌ ಹಾಗೂ ಚಿನ್ನದ ಬ್ರಾಸ್‌ಲೇಟ್‌ ಅನ್ನು ಮನೆಯಲ್ಲೇ ಬಿಟ್ಟು ಹೋಗಿದ್ದಾನೆ ಎನ್ನಲಾಗಿದೆ.

Scroll to Top