News Kadaba Desk

ಎಸ್.ಐ.ಆರ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 13.72 ಲಕ್ಷ ಫಾರಂ ಡಿಜಿಟೈಸ್

(ನ್ಯೂಸ್ ಕಡಬ) newskadaba.com ಜು. 24. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷ ಸಮಗ್ರ ಪರಿಷ್ಕರಣೆ (SIR)ಯು ಪ್ರಗತಿಯಲ್ಲಿದ್ದು, 18,03,766 ಮತದಾರರ ಪೈಕಿ ಜುಲೈ 22 ರವರೆಗೆ  18,03,766 ಎನ್ಯುಮರೇಶನ್ ಫಾರ್ಮ್ ಹಂಚಿಕೆ ಮಾಡಲಾಗಿದೆ. 13,72,632 ಫಾರ್ಮ್‍ಗಳನ್ನು ಡಿಜಿಟೈಸ್ ಮಾಡಲಾಗಿದೆ ಎಂದು  ಜಿಲ್ಲಾ ಚುನಾವಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ವಿಧಾನಸಭಾ ಕ್ಷೇತ್ರವಾರು ನಮೂನೆ ಡಿಜಿಟೈಸ್ ಮಾಡಿದ ವಿವರ: ಬೆಳ್ತಂಗಡಿ-183809, ಮೂಡಬಿದ್ರೆ-160469, ಮಂಗಳೂರು ನಗರ ಉತ್ತರ-165189, ಮಂಗಳೂರು ನಗರ ದಕ್ಷಿಣ-162326, ಮಂಗಳೂರು-182916, ಬಂಟ್ವಾಳ-169517, ಪುತ್ತೂರು-168382, ಸುಳ್ಯ-180024.

ಎಸ್.ಐ.ಆರ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 13.72 ಲಕ್ಷ ಫಾರಂ ಡಿಜಿಟೈಸ್ Read More »

ಕರಾವಳಿ

ಅಪೂರ್ಣ ರಸ್ತೆ ಕಾಮಗಾರಿಗೆ ಬಲಿಯಾದ ವಾಹನ: ಸೇಡಿಯಾಪು ಕಾಪುವಿನಲ್ಲಿ ಟಾಟಾ ಏಸ್ ಮಗುಚಿ ಅಪಘಾತ

(ನ್ಯೂಸ್‌ ಕಡಬ) newskadaba.com,  ಜು. 24: ಉಪ್ಪಿನಂಗಡಿ ಸಮೀಪದ ಸೇಡಿಯಾಪು ಕಾಪು ಎಂಬಲ್ಲಿ ಜುಲೈ 23ರಂದು ಟಾಟಾ ಏಸ್ ಸರಕು ಸಾಗಣೆ ವಾಹನವೊಂದು ಪಲ್ಟಿಯಾಗಿ 11 ವರ್ಷದ ಬಾಲಕ ಗಾಯಗೊಂಡಿದ್ದಾನೆ. ಕೊಯಿಲಾದ ಸನ್ಯಾಸಿಗುಡ್ಡೆ ನಿವಾಸಿ ಅಬ್ದುಲ್ ಮಜೀದ್ ಅವರು ಉಪ್ಪಿನಂಗಡಿಯಿಂದ ಪುತ್ತೂರು ಕಡೆಗೆ ಚಲಾಯಿಸುತ್ತಿದ್ದ ವಾಹನದ ಚಕ್ರ ರಸ್ತೆಯಂಚಿಗೆ ಇಳಿದು ಈ ಅಪಘಾತ ಸಂಭವಿಸಿದೆ. ಪರಿಣಾಮ ವಾಹನದಲ್ಲಿದ್ದ ಅವರ ಪುತ್ರ ಗಾಯಗೊಂಡಿದ್ದಾರೆ. ಇತ್ತೀಚೆಗೆ ಪೂರ್ಣಗೊಂಡ ಕಾಂಕ್ರೀಟ್ ರಸ್ತೆ ಕಾಮಗಾರಿಯ ಬಳಿಕ ರಸ್ತೆಯಂಚಿಗೆ ಮಣ್ಣು ಹಾಕದ ಕಾರಣ ಆಳವಾದ

ಅಪೂರ್ಣ ರಸ್ತೆ ಕಾಮಗಾರಿಗೆ ಬಲಿಯಾದ ವಾಹನ: ಸೇಡಿಯಾಪು ಕಾಪುವಿನಲ್ಲಿ ಟಾಟಾ ಏಸ್ ಮಗುಚಿ ಅಪಘಾತ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮೊಬೈಲ್ ಕ್ಯಾಂಟೀನ್ ಖರೀದಿಸಲು ಎಸ್.ಸಿ/ಎಸ್.ಟಿ ಗಳಿಂದ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಜು. 24. 2025-26 ನೇ ಸಾಲಿನಲ್ಲಿ ಎಸ್.ಸಿ.ಎಸ್.ಟಿ/ಟಿ.ಎಸ್.ಪಿ ಯೋಜನೆ ಅಡಿಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ ಸಣ್ಣ ಉದ್ಯಮಿದಾರರನ್ನು ಉತ್ತೇಜಿಸಲು ಮೊಬೈಲ್ ಕ್ಯಾಂಟೀನ್ ಖರೀದಿಸಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು  ಆಗಸ್ಟ್ 1 ಕೊನೆಯ ದಿನ. ಆಸಕ್ತ ಅರ್ಜಿದಾರರು ಅರ್ಜಿ ನಮೂನೆಯನ್ನು ಪಡೀಲ್ “ಪ್ರಜಾಸೌಧ” ದಕ್ಷಿಣ ಕನ್ನಡ ಜಿಲ್ಲಾ ಆಡಳಿತ ಕೇಂದ್ರದಲ್ಲಿ 2 ನೇ ಮಹಡಿಯಲ್ಲಿರುವ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರ ಕಛೇರಿಯನ್ನು (0824-2453926/9844535509 ಅಥವಾ ಇಮೇಲ್ adtourismmangalore@gmail.com) ಸಂಪರ್ಕಿಸಿ  ಪಡೆಯಬಹುದು

ಮೊಬೈಲ್ ಕ್ಯಾಂಟೀನ್ ಖರೀದಿಸಲು ಎಸ್.ಸಿ/ಎಸ್.ಟಿ ಗಳಿಂದ ಅರ್ಜಿ ಆಹ್ವಾನ Read More »

ಕರಾವಳಿ

ಅಪಘಾತ ಸಂತ್ರಸ್ತರಿಗೆ ಪಿ.ಎಂ ರಾಹತ್ ಯೋಜನೆ ಆಸರೆ- ಡಿ.ಹೆಚ್.ಒ

(ನ್ಯೂಸ್ ಕಡಬ) newskadaba.com ಜು. 24. ಬದಲಾಗುವ ಆಧುನಿಕ ಜೀವನ ಶೈಲಿಯಲ್ಲಿ ರಸ್ತೆ ಅಪಘಾತಗಳು ದಿನೆದಿನೇ ಹೆಚ್ಚಾಗುತ್ತಿದ್ದು, ವಾಹನಗಳ ಸಂಖ್ಯೆ, ವೇಗದ ವಾಹನ ಚಾಲನೆ, ಯಾಂತ್ರಿಕ ಸರವೇಗದ ಜೀವನದಿಂದಾಗಿ, ಸಾವು ನೋವು ಸರ್ವೆ ಸಾಮಾನ್ಯವಾಗಿದೆ, ಇಂತಹ ಸಂದರ್ಭದಲ್ಲಿ ರಸ್ತೆ ಅಪಘಾತ ಸಂಭವಿಸಿದ ತಕ್ಷಣಕ್ಕೆ ನಗದು ರಹಿತ ಚಿಕಿತ್ಸೆಗಾಗಿ  ರೂ. 1.5 ಲಕ್ಷ ಅನುದಾನ ಪ್ಯಾಕೇಜ್‍ನೊಂದಿಗೆ 24 ಗಂಟೆಯೊಳಗೆ, ಜೀವನ್ಮರಣ ಸ್ಥಿತಿಯಲ್ಲಿ 48 ಗಂಟೆಯೊಳಗೆ ಈ ಯೋಜನೆ ಮೂಲಕ ವಿಳಂಬಕ್ಕೆ ಆಸ್ಪದ ಕೊಡದೆ ಚಿಕಿತ್ಸೆ ನೀಡುವುದಾಗಿದೆ ಎಂದು  ಜಿಲ್ಲಾ

ಅಪಘಾತ ಸಂತ್ರಸ್ತರಿಗೆ ಪಿ.ಎಂ ರಾಹತ್ ಯೋಜನೆ ಆಸರೆ- ಡಿ.ಹೆಚ್.ಒ Read More »

ಕರಾವಳಿ

ಪಡಿತರ ದಾರರ ಗಮನಕ್ಕೆ: ರಾಜ್ಯಾದ್ಯಂತ ಬೆಳಗ್ಗೆ 6 ರಿಂದ ರಾತ್ರಿ 10 ಗಂಟೆಯವರೆಗೆ ಪಡಿತರ ಅಂಗಡಿ ಓಪನ್‌!

(ನ್ಯೂಸ್‌ ಕಡಬ) newskadaba.com,  ಜು. 24: ರಾಜ್ಯಾದ್ಯಂತ ಎಲ್ಲಾ ಸರ್ಕಾರಿ ನ್ಯಾಯಬೆಲೆ (ಪಡಿತರ) ಅಂಗಡಿಗಳು ಪ್ರತಿದಿನ ಬೆಳಿಗ್ಗೆ 6:00 ರಿಂದ ರಾತ್ರಿ 10:00 ಗಂಟೆಯವರೆಗೆ ಕಡ್ಡಾಯವಾಗಿ ತೆರೆದಿರಬೇಕು ಎಂದು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಆದೇಶಿಸಿದೆ. ದಾಸ್ತಾನು ತಲುಪಿದ್ದರೂ ಫಲಾನುಭವಿಗಳಿಗೆ ಪಡಿತರ ಸಿಗಲು ವಿಳಂಬವಾಗುತ್ತಿದೆ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಜುಲೈ ತಿಂಗಳ ಪಡಿತರ ವಿತರಣೆಯನ್ನು ತಿಂಗಳ ಅಂತ್ಯದೊಳಗೆ ಪೂರ್ಣಗೊಳಿಸಲು ಸೂಚಿಸಲಾಗಿದೆ.ಈ ನಿರ್ದೇಶನವನ್ನು ಮಳಿಗೆಗಳ ವಿತರಕರು ಉಲ್ಲಂಘಿಸಿದರೆ ಅಥವಾ ನಿಗದಿತ

ಪಡಿತರ ದಾರರ ಗಮನಕ್ಕೆ: ರಾಜ್ಯಾದ್ಯಂತ ಬೆಳಗ್ಗೆ 6 ರಿಂದ ರಾತ್ರಿ 10 ಗಂಟೆಯವರೆಗೆ ಪಡಿತರ ಅಂಗಡಿ ಓಪನ್‌! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಭಾರೀ ಮಳೆ ಹಿನ್ನೆಲೆ- ಇಂದು (ಜು. 24) ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

(ನ್ಯೂಸ್ ಕಡಬ) newskadaba.com ಜು. 24. ಹವಾಮಾನ ಇಲಾಖೆಯು ಭಾರೀ ಮಳೆಯ ಮುನ್ಸೂಚನೆ ನೀಡಿರುವ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆ ಹಾಗೂ ಪಿಯು ಕಾಲೇಜುಗಳಿಗೆ ಜು. 24ರ ಶುಕ್ರವಾರ ರಜೆ ಘೋಷಿಸಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಭಾರೀ ಮಳೆ ಹಿನ್ನೆಲೆ- ಇಂದು (ಜು. 24) ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ Read More »

ಕರಾವಳಿ

ಪಿಜಕಳ: ಆರೋಗ್ಯ ತಪಾಸಣ ಶಿಬಿರ, ಶಾಲಾ ಕೈತೋಟ ಉದ್ಘಾಟನೆ ಮಕ್ಕಳಿಗೆ ಕೃಷಿ ಸಂಸ್ಕೃತಿಯತ್ತ ಒಲವು ಮೂಡಿಸಬೇಕು: ಬೆಳ್ಳಿಪ್ಪಾಡಿ ರಾಜೇಂದ್ರ ರೈ

(ನ್ಯೂಸ್ ಕಡಬ) newskadaba.com ಜು. 23. ಗ್ರಾಮೀಣ ಪ್ರದೇಶದ ಮಕ್ಕಳು ಕೂಡ ಕೃಷಿಯ ಬಗ್ಗೆ  ಆಸಕ್ತಿ ವಹಿಸದಿರುವುದು ವಿಷಾದದ ಸಂಗತಿಯಾಗಿದೆ. ಶಿಕ್ಷಣದ ಜೊತೆಗೆ ಮಕ್ಕಳಿಗೆ ಕೃಷಿ ಸಂಸ್ಕೃತಿಯತ್ತ ಒಲವು ಮೂಡಿಸುವ ಕಾರ್ಯಕ್ರಮಗಳು ನಡೆಯಬೇಕು ಎಂದು ಬ್ಯಾಂಕ್‌ ಆಫ್‌ ಬರೋಡ ಸಂಯೋಜಿತ ವಿಜಯ ಗ್ರಾಮೀಣ ಅಭಿವೃದ್ಧಿ  ಪ್ರತಿಷ್ಠಾನದ ಕಾರ್ಯದರ್ಶಿ ಬೆಳ್ಳಿಪ್ಪಾಡಿ ರಾಜೇಂದ್ರ ರೈ ಅವರು ಅಭಿಪ್ರಾಯಪಟ್ಟರು.   ಅವರು  ಕಡಬ ತಾಲೂಕಿನ ಪಿಜಕಳ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಬ್ಯಾಂಕ್‌ ಆಫ್‌ ಬರೋಡ ಸಂಯೋಜಿತ ವಿಜಯ ಗ್ರಾಮೀಣ ಅಭಿವೃದ್ಧಿ

ಪಿಜಕಳ: ಆರೋಗ್ಯ ತಪಾಸಣ ಶಿಬಿರ, ಶಾಲಾ ಕೈತೋಟ ಉದ್ಘಾಟನೆ ಮಕ್ಕಳಿಗೆ ಕೃಷಿ ಸಂಸ್ಕೃತಿಯತ್ತ ಒಲವು ಮೂಡಿಸಬೇಕು: ಬೆಳ್ಳಿಪ್ಪಾಡಿ ರಾಜೇಂದ್ರ ರೈ Read More »

ಕರಾವಳಿ

ಅಂತಾರಾಷ್ಟ್ರೀಯ ಗಡಿ ಉಲ್ಲಂಘನೆ: ಶ್ರೀಲಂಕಾ ನೌಕಾಪಡೆಯಿಂದ 9 ಭಾರತೀಯ ಮೀನುಗಾರರ ಬಂಧನ

(ನ್ಯೂಸ್‌ ಕಡಬ) newskadaba.com,  ಜು.23 “ಅಂತಾರಾಷ್ಟ್ರೀಯ ಸಮುದ್ರ ಗಡಿ ರೇಖೆ ಉಲ್ಲಂಘಿಸಿ ಮೀನುಗಾರಿಕೆ ನಡೆಸುತ್ತಿದ್ದ 9 ಭಾರತೀಯ ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಬಂಧಿಸಿದೆ.” “ಬುಧವಾರ ಸಂಜೆ ತಲೈಮನ್ನಾರ್‌ ಉತ್ತರ ಭಾಗದ ಶ್ರೀಲಂಕಾ ಜಲಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿದ ಲಂಕಾ ನೌಕಾಪಡೆ, ಮೀನುಗಾರರೊಂದಿಗೆ ಅವರ ಟ್ರಾಲರ್ ದೋಣಿಯನ್ನೂ ವಶಕ್ಕೆ ಪಡೆದುಕೊಂಡಿದೆ. ಕಾರ್ಯಾಚರಣೆ ವೇಳೆ 50ಕ್ಕೂ ಹೆಚ್ಚು ಭಾರತೀಯ ಬೋಟ್‌ಗಳು ಗಡಿ ದಾಟಿರುವುದು ಪತ್ತೆಯಾಗಿದೆ ಎಂದು ನೌಕಾಪಡೆ ತಿಳಿಸಿದೆ.” “ಬಂಧಿತ ಮೀನುಗಾರರನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಮನ್ನಾರ್ ಮೀನುಗಾರಿಕೆ ಇಲಾಖೆಯ ಅಧಿಕಾರಿಗಳಿಗೆ

ಅಂತಾರಾಷ್ಟ್ರೀಯ ಗಡಿ ಉಲ್ಲಂಘನೆ: ಶ್ರೀಲಂಕಾ ನೌಕಾಪಡೆಯಿಂದ 9 ಭಾರತೀಯ ಮೀನುಗಾರರ ಬಂಧನ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬಂಟ್ವಾಳ: ಬ್ಯಾಂಕ್ ಮೇಲ್ಛಾವಣಿ ಕೊರೆದು ಕಳವಿಗೆ ಯತ್ನಿಸಿದ್ದ ಆರೋಪಿ ಪೋಲಿಸರ ವಶಕ್ಕೆ

(ನ್ಯೂಸ್‌ ಕಡಬ) newskadaba.com,  ಜು.23 ಬಂಟ್ವಾಳ: ಫರಂಗಿಪೇಟೆಯ ಕೆನರಾ ಬ್ಯಾಂಕ್‌ನಲ್ಲಿ ಮೇಲ್ಛಾವಣಿ ಕೊರೆದು ಹಣ ಹಾಗೂ ಚಿನ್ನಾಭರಣ ಕಳವು ಮಾಡಲು ಯತ್ನಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಮಾರಿಪಳ್ಳ ನಿವಾಸಿ ಮೊಹಮ್ಮದ್ ಶಾಖಿರ್ (33) ಎಂದು ಗುರುತಿಸಲಾಗಿದೆ.ಕಳೆದ ಜುಲೈ 13ರಂದು ಕೆನರಾ ಬ್ಯಾಂಕ್ ಕಟ್ಟಡದ ಮೇಲ್ಛಾವಣಿ ಕೊರೆದು ಕಳವಿಗೆ ಯತ್ನಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.ಜುಲೈ 22ರಂದು

ಬಂಟ್ವಾಳ: ಬ್ಯಾಂಕ್ ಮೇಲ್ಛಾವಣಿ ಕೊರೆದು ಕಳವಿಗೆ ಯತ್ನಿಸಿದ್ದ ಆರೋಪಿ ಪೋಲಿಸರ ವಶಕ್ಕೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮಂಗಳೂರು: ಹೆಲಿಕಾಪ್ಟರ್ ಹಾರಾಟ ಕಂಡು ಆತಂಕಗೊಂಡ ಜನ; NSG ಮಾಕ್‌ಡ್ರಿಲ್ ಎಂದು ಅಧಿಕಾರಿಗಳ ಸ್ಪಷ್ಟನೆ

(ನ್ಯೂಸ್‌ ಕಡಬ) newskadaba.com,  ಜು.23: ಮಂಗಳೂರಿನ ವಿವಿಧ ಭಾಗಗಳಲ್ಲಿ, ವಿಶೇಷವಾಗಿ ಬಹುಮಹಡಿ ಕಟ್ಟಡಗಳ ಸಮೀಪ ಹೆಲಿಕಾಪ್ಟರ್ ತೀರ ಕಡಿಮೆ ಎತ್ತರದಲ್ಲಿ ಸಂಚರಿಸಿದ್ದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿತ್ತು. ಇದು ರಾಷ್ಟ್ರೀಯ ಭದ್ರತಾ ಪಡೆ (NSG) ನಡೆಸುತ್ತಿರುವ ಭಯೋತ್ಪಾದನಾ ವಿರೋಧಿ ಅಣಕು ಕಾರ್ಯಾಚರಣೆಯ ಭಾಗವಾಗಿದ್ದು, ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಸಂಜೆ ನಡೆಯಲಿರುವ ಪೂರ್ಣ ಪ್ರಮಾಣದ ಕವಾಯತಿಗೆ ಮುನ್ನ ಸನ್ನದ್ಧತೆ ಹಾಗೂ ಭದ್ರತಾ ಸಂಸ್ಥೆಗಳ ನಡುವಿನ ಸಮನ್ವಯತೆಯನ್ನು ಪರಿಶೀಲಿಸಲು ಈ ಪರೀಕ್ಷಾರ್ಥ ಹಾರಾಟ ನಡೆಸಲಾಗಿದೆ.ತುರ್ತು ಸಂದರ್ಭಗಳನ್ನು ಎದುರಿಸುವ

ಮಂಗಳೂರು: ಹೆಲಿಕಾಪ್ಟರ್ ಹಾರಾಟ ಕಂಡು ಆತಂಕಗೊಂಡ ಜನ; NSG ಮಾಕ್‌ಡ್ರಿಲ್ ಎಂದು ಅಧಿಕಾರಿಗಳ ಸ್ಪಷ್ಟನೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top