News Kadaba Desk

ದೀಪಾವಳಿಗೆ ರಾತ್ರಿ 8 ರಿಂದ 10 ರ ವರೆಗೆ ಪಟಾಕಿ ಹಚ್ಚಲು ಅವಕಾಶ ► ಪಟಾಕಿ ತಯಾರಿಕೆ ಹಾಗೂ ಮಾರಾಟದ ಬಗ್ಗೆ ಸುಪ್ರೀಂ ನಿಂದ ಮಹತ್ವದ ತೀರ್ಪು

(ನ್ಯೂಸ್ ಕಡಬ) newskadaba.com ನವದೆಹಲಿ, ಅ.23. ದೇಶದಲ್ಲಿ ಪಟಾಕಿ ತಯಾರಿಕೆ ಹಾಗೂ ಮಾರಾಟದ ವಿಚಾರಕ್ಕೆ ಸಂಬಂಧಿಸಿದಂತೆ ಆಗಸ್ಟ್ 28ರಂದು ವಿಚಾರಣೆ ಪೂರ್ಣಗೊಳಿಸಿದ್ದ ಸುಪ್ರೀಂ ಕೋರ್ಟ್ ಮಂಗಳವಾರದಂದು ಮಹತ್ವದ ತೀರ್ಪು ನೀಡಿದೆ. ಪಟಾಕಿ ತಯಾರಿಕೆ ಹಾಗೂ ಮಾರಾಟಕ್ಕೆ ಸುಪ್ರೀಂ ಕೋರ್ಟ್ ಷರತ್ತುಬದ್ಧ ಅನುಮತಿ ನೀಡಿದ್ದು, ಅಧಿಕೃತ ಪರವಾನಗಿ ಪಡೆದವರು ಮಾತ್ರ ಪಟಾಕಿಯನ್ನು ಮಾರಾಟ ಮಾಡಬಹುದು. ಪಟಾಕಿಯಲ್ಲಿ ಹಾನಿಕಾರಕ ರಾಸಾಯನಿಕಗಳು ಇರಬಾರದು. ಕಡಿಮೆ ಮಾಲಿನ್ಯವನ್ನು ಉಂಟುಮಾಡುವ ಪಟಾಕಿಯನ್ನು ಮಾತ್ರ ಹಚ್ಚಬಹುದಾಗಿದ್ದು, ದೀಪಾವಳಿ ಸಂದರ್ಭದಲ್ಲಿ ಎಂಟು ಗಂಟೆಯಿಂದ 10 ಗಂಟೆಯವರೆಗೆ ಮಾತ್ರ […]

ದೀಪಾವಳಿಗೆ ರಾತ್ರಿ 8 ರಿಂದ 10 ರ ವರೆಗೆ ಪಟಾಕಿ ಹಚ್ಚಲು ಅವಕಾಶ ► ಪಟಾಕಿ ತಯಾರಿಕೆ ಹಾಗೂ ಮಾರಾಟದ ಬಗ್ಗೆ ಸುಪ್ರೀಂ ನಿಂದ ಮಹತ್ವದ ತೀರ್ಪು Read More »

ರಾಷ್ಟ್ರೀಯ ನ್ಯೂಸ್

ಬಿಗ್ ಬಾಸ್ ಆರನೇ ಆವೃತ್ತಿಗೆ ನಿರ್ಣಾಯಕ ಎಂಟ್ರಿ ಕೊಟ್ಟ ಪುತ್ತೂರಿನ ಮುತ್ತು ► ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಈ ಬೆಡಗಿಯ ಬಗ್ಗೆ ಗೊತ್ತೇ..?

(ನ್ಯೂಸ್ ಕಡಬ) newskadaba.com ಪುತ್ತೂರು, ಅ.24. ಕಲರ್ಸ್ ಕನ್ನಡ ಚಾನೆಲ್‌ನಲ್ಲಿ ಪ್ರಸಾರವಾಗುತ್ತಿರುವ ಬಿಗ್‌ಬಾಸ್ ಸೀಸನ್ 6 ರಲ್ಲಿ ಸ್ಪರ್ಧಿಸಲು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಸಾಫ್ಟ್‌ವೇರ್ ಉದ್ಯೋಗಿಯೋರ್ವರು ನಿರ್ಣಾಯಕ ಎಂಟ್ರಿ ಪಡೆದಿದ್ದಾರೆ. ಪುತ್ತೂರಿನ ಇತಿಹಾಸದಲ್ಲೇ ಪ್ರಥಮ ಬಾರಿಗೆ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಲು ಅವಕಾಶ ಪುತ್ತೂರಿನ ಎಪಿಎಂಸಿ ನಿವಾಸಿ ರಿಚರ್ಡ್(ರಾಯಲ್) ಡಾಯಸ್ ಹಾಗೂ ಪಾಟ್ರಕೋಡಿ ಶಾಲೆಯ ಶಿಕ್ಷಕಿ ಲತಾ ಗ್ಲೇಡಿಸ್ ದಂಪತಿಯ ಪುತ್ರಿ ರೀಮಾ ಲರಿಸ್ಸಾ ಡಾಯಸ್ ಆಯ್ಕೆಯಾದ ಬೆಡಗಿ. ಪ್ರಾಥಮಿಕ ಶಿಕ್ಷಣವನ್ನು ಮಾಯಿದೆ ದೇವುಸ್

ಬಿಗ್ ಬಾಸ್ ಆರನೇ ಆವೃತ್ತಿಗೆ ನಿರ್ಣಾಯಕ ಎಂಟ್ರಿ ಕೊಟ್ಟ ಪುತ್ತೂರಿನ ಮುತ್ತು ► ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಈ ಬೆಡಗಿಯ ಬಗ್ಗೆ ಗೊತ್ತೇ..? Read More »

ಕರ್ನಾಟಕ

ಶಬರಿಮಲೆ ದೇವಸ್ಥಾನದ ಪಾವಿತ್ರ್ಯಕ್ಕೆ ಧಕ್ಕೆ ತರುವುದು ಜಿಹಾದಿಗಳ ಷಡ್ಯಂತ್ರ ► ‘ಕಡಬದಲ್ಲಿ ಶಬರಿಮಲೆ ಪಾವಿತ್ರ್ಯ ಉಳಿಸಿ’ ಜನಜಾಗೃತಿ ಸಭೆಯಲ್ಲಿ ವಿದ್ಯಾ ಮಲ್ಯ ಆರೋಪ

(ನ್ಯೂಸ್ ಕಡಬ) newskadaba.com ಕಡಬ, ಅ.22. ಜಾತಿ ಧರ್ಮ, ಮೇಲು ಕೀಲು ಎನ್ನುವ ಭೇಧಭಾವವಿಲ್ಲದೆ ವಿಶ್ವದ ಎಲ್ಲಾ ಜನರನ್ನು ಬೆಸೆಯುವ ಕೋಟ್ಯಾಂತರ ಭಕ್ತರ ಆರಾಧ್ಯ ಮೂರ್ತಿಯಾಗಿರುವ ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಪಾವಿತ್ರ್ಯಕ್ಕೆ ಧಕ್ಕೆ ತರುವುದು ಜಿಹಾದಿಗಳ ಷಡ್ಯಂತರ ಒಂದು ಭಾಗವಾಗಿದೆ ಎಂದು ದುರ್ಗಾವಾಹಿನಿಯ ಮಂಗಳೂರು ವಿಭಾಗದ ಸಂಯೋಜಕಿ ವಿದ್ಯಾ ಮಲ್ಯ ಆರೋಪಿಸಿದರು. ಅವರು ಭಾನುವಾರ ಕಡಬ ಶ್ರೀ ದುರ್ಗಾಂಬಿಕಾ ದೇವಸ್ಥಾನದ ವಠಾರದಲ್ಲಿ ಕಡಬ ತಾಲೂಕು ಅಯ್ಯಪ್ಪ ಭಕ್ತವೃಂದದ ಆಶ್ರಯದಲ್ಲಿ ಶಬರಿಮಲೆ ಕ್ಷೇತ್ರದ ಪಾವಿತ್ರ್ಯ ಉಳಿಸಿ

ಶಬರಿಮಲೆ ದೇವಸ್ಥಾನದ ಪಾವಿತ್ರ್ಯಕ್ಕೆ ಧಕ್ಕೆ ತರುವುದು ಜಿಹಾದಿಗಳ ಷಡ್ಯಂತ್ರ ► ‘ಕಡಬದಲ್ಲಿ ಶಬರಿಮಲೆ ಪಾವಿತ್ರ್ಯ ಉಳಿಸಿ’ ಜನಜಾಗೃತಿ ಸಭೆಯಲ್ಲಿ ವಿದ್ಯಾ ಮಲ್ಯ ಆರೋಪ Read More »

ರಾಷ್ಟ್ರೀಯ ನ್ಯೂಸ್

ಕೇಂದ್ರ ತನಿಖಾ ದಳದ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿ ಕಡಬದ ಆರೋಪಿ ► ಸುಳಿವು ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ ಎನ್‍ಐಎ

(ನ್ಯೂಸ್ ಕಡಬ) newskadaba.com ಕಡಬ, ಅ.21. ಕಡಬ, ಅ.21. ಗೋವಿಂದ್ ಪನ್ಸಾರೆ ಹತ್ಯೆ, ಮಾಲೆಂಗಾವ್ ಸ್ಪೋಟ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಮೋಸ್ಟ್ ವಾಂಟೆಡ್ ಆರೋಪಿಗಳ ಪಟ್ಟಿಯಲ್ಲಿ ಕಡಬದ ವ್ಯಕ್ತಿ ಸೇರಿದಂತೆ ಹಲವರ ಹೆಸರನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯು ಶನಿವಾರದಂದು (ಎನ್‍ಐಎ) ಪ್ರಕಟಿಸಿದೆ. ದೇಶಾದ್ಯಾಂತ ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗಿಸಿಕೊಂಡು ತಲೆಮರಿಸಿಕೊಂಡಿರುವ ಆರೋಪಿಗಳಲ್ಲೊಬ್ಬನಾದ ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಕಟ್ಟತ್ತಡ್ಕ ನಿವಾಸಿ ಸೋಮರಾಜನ್ ಎಂಬವರ ಪುತ್ರ ಜಯಪ್ರಕಾಶ್ ಅಲಿಯಾಸ್ ಅಣ್ಣಾ (47) ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‍ಐಎ) ಮೋಸ್ಟ್

ಕೇಂದ್ರ ತನಿಖಾ ದಳದ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿ ಕಡಬದ ಆರೋಪಿ ► ಸುಳಿವು ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ ಎನ್‍ಐಎ Read More »

ರಾಷ್ಟ್ರೀಯ ನ್ಯೂಸ್

ಶಬರಿಮಲೆ ಕ್ಷೇತ್ರದ ಪಾವಿತ್ರ್ಯ ಉಳಿಸಿ ► ಇಂದು ಕಡಬದಲ್ಲಿ ಬೃಹತ್ ಜನಜಾಗೃತಿ ಸಭೆ – ಮೆರವಣಿಗೆ

(ನ್ಯೂಸ್ ಕಡಬ) newskadaba.com ಕಡಬ, ಅ.21. ಶಬರಿಮಲೆ ಕ್ಷೇತ್ರಕ್ಕೆ 10 ರಿಂದ 50 ವರ್ಷದ ಒಳಗಿನ ಮಹಿಳೆಯರೂ ಪ್ರವೇಶಿಸಬಹುದು ಎಂಬ ಸುಪ್ರೀಂಕೋರ್ಟ್ ತೀರ್ಪನ್ನು ಮರು ಪರಿಶೀಲನೆ ಮಾಡುವಂತೆ ಆಗ್ರಹಿಸಿ “ಶಬರಿಮಲೆ ಕ್ಷೇತ್ರದ ಪಾವಿತ್ರ್ಯ ಉಳಿಸಿ” ಎಂದು ಮೆರವಣಿಗೆಯೊಂದಿಗೆ ಬೃಹತ್ ಜನಜಾಗೃತಿ ಸಭೆಯು ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ವಠಾರದಲ್ಲಿ ಇಂದು ಪೂರ್ವಾಹ್ನ ನಡೆಯಲಿದೆ. ಬೆಳಿಗ್ಗೆ ಕಡಬ ಶ್ರೀಕಂಠಸ್ವಾಮಿ ಶ್ರೀ ಮಹಾಗಣಪತಿ ದೇವಸ್ಥಾನದಿಂದ ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನಕ್ಕೆ ಬೃಹತ್ ಮೆರವಣಿಗೆ ನಡೆಯಲಿದ್ದು ಬಳಿಕ ಅಲ್ಲಿ

ಶಬರಿಮಲೆ ಕ್ಷೇತ್ರದ ಪಾವಿತ್ರ್ಯ ಉಳಿಸಿ ► ಇಂದು ಕಡಬದಲ್ಲಿ ಬೃಹತ್ ಜನಜಾಗೃತಿ ಸಭೆ – ಮೆರವಣಿಗೆ Read More »

ಕರಾವಳಿ

ಕೋಡಿಂಬಾಳ ಪರಿಸರದಲ್ಲಿ ನಿಗೂಢ ಜ್ವರ ಬಾಧೆ ಹಿನ್ನೆಲೆ ► ಜಿಲ್ಲಾ ಆರೋಗ್ಯಾಧಿಕಾರಿ ಡಾ| ರಾಮಕೃಷ್ಣ ರಾವ್ ಸ್ಥಳಕ್ಕೆ ಭೇಟಿ

(ನ್ಯೂಸ್ ಕಡಬ) newskadaba.com ಕಡಬ, ಅ.20. ನಿಗೂಢ ಜ್ವರದ ಬಾಧೆಯಿಂದಾಗಿ ಆತಂಕದಲ್ಲಿರುವ ಕೋಡಿಂಬಾಳ ಗ್ರಾಮದ ಮಜ್ಜಾರು ಪ್ರದೇಶಕ್ಕೆ ಶುಕ್ರವಾರದಂದು ಭೇಟಿ ನೀಡಿದ ಜಿಲ್ಲಾ ಅರೋಗ್ಯಾಧಿಕಾರಿ ಡಾ|ರಾಮಕೃಷ್ಣ ರಾವ್ ಅವರು ಆತಂಕದಲ್ಲಿರುವ ಸ್ಥಳೀಯರಿಗೆ ಧೈರ್ಯ ತುಂಬಿದರು. 22 ದಿನಗಳ ಹಿಂದೆ ಜ್ವರ ಪೀಡಿತರಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಮಜ್ಜಾರು ನಿವಾಸಿ ಹರೀಶ್ ಅವರ ಮನೆಗೆ ಜನಪ್ರತಿನಿಧಿಗಳು ಹಾಗೂ ವೈದ್ಯಾಧಿಕಾರಿಗಳ ಜೊತೆ ಭೇಟಿ ನೀಡಿದ ಡಾ| ರಾಮಕೃಷ್ಣ ರಾವ್ ಅವರು ಪರಿಸರದಲ್ಲಿ ಜ್ವರ ಪೀಡಿತರಾಗಿರುವವರ ವೈದ್ಯಕೀಯ ದಾಖಲೆಗಳು ಹಾಗೂ

ಕೋಡಿಂಬಾಳ ಪರಿಸರದಲ್ಲಿ ನಿಗೂಢ ಜ್ವರ ಬಾಧೆ ಹಿನ್ನೆಲೆ ► ಜಿಲ್ಲಾ ಆರೋಗ್ಯಾಧಿಕಾರಿ ಡಾ| ರಾಮಕೃಷ್ಣ ರಾವ್ ಸ್ಥಳಕ್ಕೆ ಭೇಟಿ Read More »

ಕರ್ನಾಟಕ

ದಿವಂಗತ ರೆ|ಫಾ| ಅಬ್ರಹಾಂ ಕಲಪ್ಪಾಟ್ ಸ್ಮರಣಾರ್ಥ ಎವರ್ರೋಲಿಂಗ್ ಟ್ರೋಫಿ ► ಕೋಡಿಂಬಾಳ ಸೈಂಟ್ ಜಾರ್ಜ್ ಮಲಂಕರ ಕ್ಯಾಥೋಲಿಕ್ ಪ್ರಥಮ

(ನ್ಯೂಸ್ ಕಡಬ) newskadaba.com ಕಡಬ, ಅ.20. ಮಲಂಕರ ಕ್ಯಾಥೋಲಿಕ್ ಧರ್ಮಸಭೆ ಪುತ್ತೂರು ಧರ್ಮಪ್ರಾಂತ್ಯದ ಯೂತ್ ಮೂವ್ ಮೆಂಟ್ ನ ಮಾಜಿ ಡ್ಯೆರೆಕ್ಟರ್ ದಿವಂಗತ ರೆವರೆಂಡ್ ಫಾದರ್ ಅಬ್ರಹಾಂ ಕಲಪ್ಪಾಟ್ ಅವರ ಹೆಸರಿನಲ್ಲಿ ಆರಂಭಿಸಿದ ಅಬ್ರಹಾಂ ಕಲಪ್ಪಾಟ್ ಎವರ್ರೋಲಿಂಗ್ ಟ್ರೋಫಿ ಹಗ್ಗ ಜಗ್ಗಾಟದಲ್ಲಿ ಸಂತ ಜಾರ್ಜ್ ಮಲಂಕರ ಕ್ಯಾಥೋಲಿಕ್ ಕೋಡಿಂಬಾಳ ಯುವಕರ ಘಟಕ ಪ್ರಥಮ ಸ್ಥಾನ ಪಡೆದಿದೆ. ಮಹಿಳೆಯರಿಗಾಗಿ ನಡೆಸಿದ ಹಗ್ಗಜಗ್ಗಾಟದಲ್ಲಿ ಇದೇ ಚರ್ಚ್ ನ ಯುವತಿಯರ ತಂಡವು ದ್ವಿತೀಯ ಸ್ಥಾನವನ್ನು ಪಡೆದಿದೆ. ಸಂತ ಮೇರೀಸ್ ಪ್ರೋ- ಕಥೇಟ್ರಲ್

ದಿವಂಗತ ರೆ|ಫಾ| ಅಬ್ರಹಾಂ ಕಲಪ್ಪಾಟ್ ಸ್ಮರಣಾರ್ಥ ಎವರ್ರೋಲಿಂಗ್ ಟ್ರೋಫಿ ► ಕೋಡಿಂಬಾಳ ಸೈಂಟ್ ಜಾರ್ಜ್ ಮಲಂಕರ ಕ್ಯಾಥೋಲಿಕ್ ಪ್ರಥಮ Read More »

ಕರಾವಳಿ

ಡಿವೈಎಫ್ಐ ಮುಖಂಡನ ಮೇಲೆ ಹಲ್ಲೆ ಪ್ರಕರಣ ► ವೇಣೂರು ಠಾಣಾ ಹೆಡ್ ಕಾನ್ಸ್‌ಟೇಬಲ್ ಅಮಾನತು

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಅ.20. ವಾಹನ ತಪಾಸಣೆಯ ನೆಪದಲ್ಲಿ ಡಿವೈಎಫ್‍ಐ ಮುಖಂಡ ರಿಯಾಝ್ ಮೇಲೆ ಹಲ್ಲೆ ನಡೆಸಿ ಅಮಾನವೀಯವಾಗಿ ವರ್ತಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವೇಣೂರು ಠಾಣೆಯ ಹೆಡ್ ಕಾನ್ಟೇಬಲ್ ತಾರಾನಾಥ್ ಅವರನ್ನು ಕೆಲಸದಿಂದ ಅಮಾನತುಗೊಳಿಸಿ ಆದೇಶಿಸಲಾಗಿದೆ. ಡಿವೈಎಫ್‍ಐ ಸಂಘಟನೆಯ ಮುಖಂಡ ರಿಯಾಝ್ ಅಕ್ಟೋಬರ್ 02 ರಂದು ರಾತ್ರಿ ಮೂಡುಬಿದಿರೆಯಿಂದ ವೇಣೂರು ಮಾರ್ಗವಾಗಿ ತನ್ನ ಸಹೋದರನೊಂದಿಗೆ ಬೆಳ್ತಂಗಡಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ವಾಹನ ತಪಾಸಣೆಯ ನೆಪದಲ್ಲಿ ವೇಣೂರು ಪೊಲೀಸರು ರಿಯಾಝ್ ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ ಠಾಣೆಗೆ ಕರೆದೊಯ್ದು

ಡಿವೈಎಫ್ಐ ಮುಖಂಡನ ಮೇಲೆ ಹಲ್ಲೆ ಪ್ರಕರಣ ► ವೇಣೂರು ಠಾಣಾ ಹೆಡ್ ಕಾನ್ಸ್‌ಟೇಬಲ್ ಅಮಾನತು Read More »

ಕರಾವಳಿ

ಮೈಸೂರು ರಾಜಮಾತೆ ಪ್ರಮೋದಾ ದೇವಿಗೆ ಮಾತೃ ವಿಯೋಗ ► ದಸರಾ ಸಂಭ್ರದಲ್ಲಿರುವ ಮೈಸೂರು ಅರಮನೆಯಲ್ಲಿ ಸೂತಕದ ಛಾಯೆ

(ನ್ಯೂಸ್ ಕಡಬ) newskadaba.com ಮೈಸೂರು, ಅ.19. ಮೈಸೂರು ಅರಮನೆಯ ರಾಜಮಾತೆ ಪ್ರಮೋದಾ ದೇವಿ ಒಡೆಯರ್‌ ಅವರ ತಾಯಿ ಚಿನ್ನಮಣಿ(98) ಶುಕ್ರವಾರದಂದು ವಿಧಿವಶರಾಗಿದ್ದು, ದಸರಾ ಸಂಭ್ರಮದಲ್ಲಿರುವ ಮೈಸೂರಿನಲ್ಲಿ ಸೂತಕದ ಛಾಯೆ ಆವರಿಸಿದೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಚಿನ್ನಮಣಿಯವರು ಶುಕ್ರವಾರದಂದು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ್ದಾರೆ. ಹಿರಿಯ ಜೀವದ ಅಗಲುವಿಕೆಯಿಂದಾಗಿ ದಸರಾ ಸಂಭ್ರಮದಲ್ಲಿರುವ ವಿಶ್ವ ವಿಖ್ಯಾತ ಮೈಸೂರಿನ ಅರಮನೆಯಲ್ಲಿ ಸೂತಕದ ಛಾಯೆ ಕಾಣಿಸಿಕೊಂಡಿದ್ದು, ರಾಜವಂಶಸ್ಥ ಕುಟುಂಬದ ಸಂಭ್ರಮಕ್ಕೆ ತೆರೆಬಿದ್ದಿದೆ.

ಮೈಸೂರು ರಾಜಮಾತೆ ಪ್ರಮೋದಾ ದೇವಿಗೆ ಮಾತೃ ವಿಯೋಗ ► ದಸರಾ ಸಂಭ್ರದಲ್ಲಿರುವ ಮೈಸೂರು ಅರಮನೆಯಲ್ಲಿ ಸೂತಕದ ಛಾಯೆ Read More »

ಕರ್ನಾಟಕ

ಕೊನೆಗೂ ಬಗೆಹರಿದ ಕಡಬದ ಮೀನು ಮಾರುಕಟ್ಟೆ ಹರಾಜು ವಿವಾದ ► ಪಂಚಾಯತ್ ಗೆ 6 ಲಕ್ಷ ನಷ್ಟದೊಂದಿಗೆ ಮೀನು ಮಾರಾಟ ಆರಂಭ

(ನ್ಯೂಸ್ ಕಡಬ) newskadaba.com ಕಡಬ, ಅ.17. ಹಸಿ ಮೀನು ಮಾರುಕಟ್ಟೆಯ ಹರಾಜು ಮೊತ್ತದ ವಿಚಾರದಲ್ಲಿ ಕಡಬ ಗ್ರಾಮ ಪಂಚಾಯತ್ ಮತ್ತು ಹಸಿಮೀನು ಮಾರಾಟಗಾರರ ನಡುವಿನ ಹಗ್ಗ ಜಗ್ಗಾಟಕ್ಕೆ ಕೊನೆಗೂ ತೆರೆಬಿದ್ದಿದೆ. ಹರಾಜಿನ ಆರಂಭಿಕ ಮೊತ್ತವನ್ನು ಕಡಿಮೆಗೊಳಿಸಿ 3ನೇ  ಬಾರಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಕಡಬ ಪೇಟೆಯ 2 ಕಡೆ ಹಸಿಮೀನು ಮಾರಾಟದ ಹಕ್ಕು ಖಾಯಂಗೊಂಡಿದ್ದು, ಅ. 17 ರಿಂದ ಕಡಬ ಪೇಟೆಯಲ್ಲಿ ಹಸಿಮೀನು ಮಾರುಕಟ್ಟೆ ಮತ್ತೆ ತೆರೆದುಕೊಂಡಿದೆ. ಕಡಬ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಸಿ ಮೀನು ಮಾರಾಟ ನಡೆಸುವುದಕ್ಕಾಗಿ

ಕೊನೆಗೂ ಬಗೆಹರಿದ ಕಡಬದ ಮೀನು ಮಾರುಕಟ್ಟೆ ಹರಾಜು ವಿವಾದ ► ಪಂಚಾಯತ್ ಗೆ 6 ಲಕ್ಷ ನಷ್ಟದೊಂದಿಗೆ ಮೀನು ಮಾರಾಟ ಆರಂಭ Read More »

ಕರಾವಳಿ
Scroll to Top