ಮಿತ್ತಕೋಡಿ: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ ► ಮದುವೆಗೆಂದು ಶಾಪಿಂಗ್ ಮುಗಿಸಿ ಪತಿಯೊಂದಿಗೆ ಬರುತ್ತಿದ್ದ ಪತ್ನಿ ಮೃತ್ಯು, ಪತಿ ಗಂಭೀರ
(ನ್ಯೂಸ್ ಕಡಬ) newskadaba.com ಮಂಗಳೂರು, ಅ.26. ಲಾರಿ ಮತ್ತು ದ್ವಿಚಕ್ರ ವಾಹನದ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಮಹಿಳೆಯೋರ್ವರು ಸ್ಥಳದಲ್ಲೇ ಮೃತಪಟ್ಟು, ಆಕೆಯ ಪತಿ ಗಂಭೀರ ಗಾಯಗೊಂಡ ಘಟನೆ ಮುಡಿಪು ಸಮೀಪದ ಮಿತ್ತಕೋಡಿ ಎಂಬಲ್ಲಿ ಶುಕ್ರವಾರ ಸಂಜೆ ಸಂಭವಿಸಿದೆ. ಮೃತ ಮಹಿಳೆಯನ್ನು ಬಂಟ್ವಾಳ ತಾಲೂಕಿನ ಪಾನೇಲ ನಿವಾಸಿ ಇಸ್ಮಾಯಿಲ್ ಎಂಬವರ ಪತ್ನಿ ಝುಬೈದಾ(35) ಮೃತರು ಎಂದು ಗುರುತಿಸಲಾಗಿದೆ. ಮೃತರು ಮುಂದಿನ ಭಾನುವಾರದಂದು ತನ್ನ ಮನೆಯಲ್ಲಿ ಮದುವೆ ಕಾರ್ಯ ನಡೆಯಲಿದ್ದ ಕಾರಣ ಬಟ್ಟೆ ಬರೆಗಳನ್ನು ಖರೀದಿಸಿ ತನ್ನ ಪತಿಯ […]







