ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಕೊನೆಗೂ ಬಗೆಹರಿದ ಕಡಬದ ಮೀನು ಮಾರುಕಟ್ಟೆ ಹರಾಜು ವಿವಾದ ► ಪಂಚಾಯತ್ ಗೆ 6 ಲಕ್ಷ ನಷ್ಟದೊಂದಿಗೆ ಮೀನು ಮಾರಾಟ ಆರಂಭ – News Kadaba

ಕೊನೆಗೂ ಬಗೆಹರಿದ ಕಡಬದ ಮೀನು ಮಾರುಕಟ್ಟೆ ಹರಾಜು ವಿವಾದ ► ಪಂಚಾಯತ್ ಗೆ 6 ಲಕ್ಷ ನಷ್ಟದೊಂದಿಗೆ ಮೀನು ಮಾರಾಟ ಆರಂಭ

(ನ್ಯೂಸ್ ಕಡಬ) newskadaba.com ಕಡಬ, ಅ.17. ಹಸಿ ಮೀನು ಮಾರುಕಟ್ಟೆಯ ಹರಾಜು ಮೊತ್ತದ ವಿಚಾರದಲ್ಲಿ ಕಡಬ ಗ್ರಾಮ ಪಂಚಾಯತ್ ಮತ್ತು ಹಸಿಮೀನು ಮಾರಾಟಗಾರರ ನಡುವಿನ ಹಗ್ಗ ಜಗ್ಗಾಟಕ್ಕೆ ಕೊನೆಗೂ ತೆರೆಬಿದ್ದಿದೆ.

ಹರಾಜಿನ ಆರಂಭಿಕ ಮೊತ್ತವನ್ನು ಕಡಿಮೆಗೊಳಿಸಿ 3ನೇ  ಬಾರಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಕಡಬ ಪೇಟೆಯ 2 ಕಡೆ ಹಸಿಮೀನು ಮಾರಾಟದ ಹಕ್ಕು ಖಾಯಂಗೊಂಡಿದ್ದು, ಅ. 17 ರಿಂದ ಕಡಬ ಪೇಟೆಯಲ್ಲಿ ಹಸಿಮೀನು ಮಾರುಕಟ್ಟೆ ಮತ್ತೆ ತೆರೆದುಕೊಂಡಿದೆ. ಕಡಬ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಸಿ ಮೀನು ಮಾರಾಟ ನಡೆಸುವುದಕ್ಕಾಗಿ 1 ವರ್ಷದ ಅವಧಿಗಾಗಿ ನೀಡಲಾಗಿದ್ದ ಹರಾಜು ಹಕ್ಕು ಸೆ. 6 ಕ್ಕೆ ಕೊನೆಯಾಗಿತ್ತು. ಮತ್ತೆ ಮೀನು ಮಾರಾಟದ ಹಕ್ಕನ್ನು ನೀಡುವುದಕ್ಕಾಗಿ ಪಂಚಾಯತ್ ವತಿಯಿಂದ ನಿಗದಿಯಾಗಿದ್ದ ಹರಾಜು ಪ್ರಕ್ರಿಯೆ ಬಿಡ್ಡುದಾರರು ಇಲ್ಲದೇ ಇದ್ದುರಿಂದ 2 ಬಾರಿ ರದ್ದುಗೊಂಡಿತ್ತು. ಹರಾಜಿನ ಆರಂಭಿಕ ಮೊತ್ತವನ್ನು ಇಳಿಸಬೇಕೆಂದು ಆಗ್ರಹಿಸಿ ಮೀನು ಮಾರಾಟಗಾರರು ಹರಾಜಿನಲ್ಲಿ ಭಾಗವಹಿಸಿರಲಿಲ್ಲ. ಅದರಿಂದಾಗಿ ಅ. 7 ರಿಂದ ಕಡಬ ಪಂಚಾಯತ್ ವ್ಯಾಪ್ತಿಯಲ್ಲಿ ಹಸಿ ಮೀನು ಮಾರಾಟ ಸ್ಥಗಿತಗೊಂಡಿತ್ತು.

ಇದೀಗ ಹರಾಜಿನ ಆರಂಭಿಕ ಮೊತ್ತವನ್ನು 4 ಲಕ್ಷ ರೂ. ಗಳಿಗೆ ಇಳಿಸಿ 3ನೇ ಬಾರಿ ನಡೆಸಿದ ಹರಾಜಿನಲ್ಲಿ ಕಡಬದ ಸಂತೆ ಮಾರು ಕಟ್ಟೆಯ ಬಳಿಯ ಹಸಿಮೀನು ಮಾರಾಟದ ಜಾಗದ ಹಕ್ಕು ಉಪ್ಪಿನಂಗಡಿಯ ಯು.ಕೆ.ಯೂಸುಫ್ ಹಾಜಿ ಅವರಿಗೆ 4 ಲಕ್ಷದ 1 ಸಾವಿರ ರೂ. ಗೆ (ಕಳೆದ ಬಾರಿ 8.10 ಲಕ್ಷ ರೂ.) ಹಾಗೂ ಕಡಬದ ರೈತ ಸಂಪರ್ಕ ಕೇಂದ್ರದ ಬಳಿಯ ಜಾಗದ ಹಕ್ಕು ಉಪ್ಪಿನಂಗಡಿಯ ಮುಸ್ತಾಫ ಕೆಂಪಿ ಅವರಿಗೆ 4 ಲಕ್ಷದ 600 ರೂ. ಗಳಿಗೆ (ಕಳೆದ ಬಾರಿ 6.21 ಲಕ್ಷ ರೂ.) ಖಾಯಂ ಆಗಿದೆ. ಕಳೆದ ಬಾರಿ ಮೇಲಿನ ಎರಡೂ ಸ್ಟಾಲ್‍ಗಳು ಒಟ್ಟು 14 ಲಕ್ಷದ 31 ಸಾವಿರ ರೂ. ಗಳಿಗೆ ಹರಾಜಾಗಿದ್ದರೆ ಈ ಬಾರಿ ಕೇವಲ 8 ಲಕ್ಷದ 1 ಸಾವಿರದ 600 ರೂ.ಗಳಿಗೆ ಹರಾಜಾಗಿರುವುದರಿಂದ ಪಂಚಾಯತ್‍ಗೆ ಈ ಬಾರಿ 6 ಲಕ್ಷದ 29 ಸಾವಿರದ 400 ರೂ. ಆದಾಯ ನಷ್ಟವಾಗಿದೆ. ಪಂಚಾಯತ್ ವ್ಯಾಪ್ತಿಯ ಕೋಡಿಂಬಾಳದ ಹಸಿಮೀನು ಮಾರುಕಟ್ಟೆ ಮತ್ತು ಈ ಬಾರಿ ಪಂಜ ರಸ್ತೆಯ ಮಾಲೇಶ್ವರ ಕ್ರಾಸ್ ಬಳಿ ಹೊಸದಾಗಿ ಗುರುತಿಸಲಾಗಿರುವ ಮೀನು ಮಾರಾಟದ ಸ್ಟಾಲ್‍ಗೆ 3ನೇ ಬಾರಿಯೂ ಬಿಡ್ಡುದಾರರು ಬಾರದೇ ಇದ್ದುದರಿಂದ ಹರಾಜು ನಡೆಯಲಿಲ್ಲ.

Scroll to Top