News Kadaba Desk

ಮೀನು ಲಾರಿ ನೀರು ಸೋರಿಕೆಯಿಂದ ಸಂಚಾರಕ್ಕೆ ತೊಂದರೆ

(ನ್ಯೂಸ್ ಕಡಬ) newskadaba.com ಜೂ. 10. ನಗರದಲ್ಲಿ ಸಂಚರಿಸುತ್ತಿರುವ ಮೀನಿನ ಲಾರಿಗಳಿಂದ ನೀರು ಸೋರಿಕೆಯಾಗಿ ದುರ್ವಾಸನೆ ಮತ್ತು ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗುತ್ತಿರುವ ಬಗ್ಗೆ ನಿರಂತರ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಮೀನಿನ ಕಾರ್ಖಾನೆ ಹಾಗೂ ಉದ್ಯಮಿಗಳ ಸಭೆಯನ್ನು ಪೊಲೀಸ್ ಇಲಾಖೆ ನಡೆಸಲಾಗಿದೆ.   ಪ್ರಸ್ತುತ ಕೇರಳದಲ್ಲಿ ರಾಷ್ಟ್ರೀಯ ಹೆದ್ದಾರಿಯ ಅಲ್ಲಲ್ಲಿ ಮೀನಿನ ಲಾರಿಗಳ ನೀರುಗಳನ್ನು ವಿಸರ್ಜಿಸಲು ಸೆಪ್ಟಿಕ್ ಟ್ಯಾಂಕ್‍ಗಳನ್ನು ನಿರ್ಮಿಸಲಾಗಿದೆ. ಇದೇ ರೀತಿ ಜಿಲ್ಲೆಯ ತಲಪಾಡಿ ಮತ್ತು  ಮುಲ್ಕಿಯಲ್ಲಿ ಸೆಪ್ಟಿಕ್ ಟ್ಯಾಂಕ್ ನಿರ್ಮಿಸಿದರೆ ತ್ಯಾಜ್ಯ ನೀರನ್ನು ಅಲ್ಲಿ ವಿಸರ್ಜಿಸಿ […]

ಮೀನು ಲಾರಿ ನೀರು ಸೋರಿಕೆಯಿಂದ ಸಂಚಾರಕ್ಕೆ ತೊಂದರೆ Read More »

ಕರಾವಳಿ

ಜಂಕ್ಷನ್ ಮತ್ತು ವೃತ್ತಗಳಲ್ಲಿ ಸುಗಮ ಸಂಚಾರಕ್ಕೆ ತ್ವರಿತ ಕ್ರಮ – ಜಿಲ್ಲಾಧಿಕಾರಿ ಸೂಚನೆ

(ನ್ಯೂಸ್ ಕಡಬ) newskadaba.com ಜೂ. 10. ಮಂಗಳೂರು ನಗರ ಹಾಗೂ ಜಿಲ್ಲೆಯ ವಿವಿಧ ಕಡೆಗಳಲ್ಲಿ ಜಂಕ್ಷನ್ ಹಾಗೂ ವೃತ್ತಗಳಲ್ಲಿ ಸುಗಮ ಸಂಚಾರಕ್ಕೆ  ಸ್ಥಳೀಯ ನಗರ ಸಂಸ್ಥೆ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಪರಿಶೀಲಿಸಿ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ ಸೂಚಿಸಿದ್ದಾರೆ. ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ  ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯ ಹಲವು ಜಂಕ್ಷನ್, ವೃತ್ತಗಳಲ್ಲಿ ಹಾಗೂ ಮುಖ್ಯ ರಸ್ತೆಗಳಲ್ಲಿ ಪಾರ್ಕಿಂಗ್, ಒತ್ತುವರಿ,  ಬೀದಿ ವ್ಯಾಪಾರದಿಂದ ಸುಗಮ ವಾಹನ

ಜಂಕ್ಷನ್ ಮತ್ತು ವೃತ್ತಗಳಲ್ಲಿ ಸುಗಮ ಸಂಚಾರಕ್ಕೆ ತ್ವರಿತ ಕ್ರಮ – ಜಿಲ್ಲಾಧಿಕಾರಿ ಸೂಚನೆ Read More »

ಕರಾವಳಿ

📢 ಗೃಹಲಕ್ಷ್ಮಿ ಯೋಜನೆ: ಇನ್ಮುಂದೆ ಬಯೋಮೆಟ್ರಿಕ್ ಪರಿಶೀಲನೆ ಕಡ್ಡಾಯ

(ನ್ಯೂಸ್‌ ಕಡಬ) newskadaba.com,  ಜೂ.10  ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯಡಿ ಮಾಸಿಕ ₹2,000 ಪಡೆಯಲು ಇನ್ಮುಂದೆ ಬಯೋಮೆಟ್ರಿಕ್ ಪರಿಶೀಲನೆ ಕಡ್ಡಾಯಗೊಳಿಸಿ ಸರ್ಕಾರ ಆದೇಶಿಸಿದೆ. ಗ್ರಾಮ ಒನ್, ಬೆಂಗಳೂರು ಒನ್ ಮತ್ತು ಕರ್ನಾಟಕ ಒನ್ ಕೇಂದ್ರಗಳಲ್ಲಿ ಆಧಾರ್ ಕಾರ್ಡ್ ಹಾಗೂ ಗೃಹಲಕ್ಷ್ಮಿ ಗುರುತಿನ ಚೀಟಿ ನೀಡಿ ಹೆಬ್ಬೆಟ್ಟು ಅಥವಾ ಮುಖದ ಗುರುತಿನ ಪ್ರಕ್ರಿಯೆ ಮುಗಿಸುವುದು ಕಡ್ಡಾಯವಾಗಿದೆ. ರಾಜ್ಯಾದ್ಯಂತ 6,624 ಮೃತ ಮಹಿಳೆಯರ ಖಾತೆಗಳಿಗೆ ಹಣ ಜಮೆಯಾಗುತ್ತಿತ್ತು ಆದಾಯ ತೆರಿಗೆ ಹಾಗೂ ಜಿಎಸ್‌ಟಿ ಪಾವತಿಸುವ ಕುಟುಂಬದ 4,800 ಅನರ್ಹರು ಸೌಲಭ್ಯ ಪಡೆಯುತ್ತಿದ್ದರು.ಬೆಂಗಳೂರು

📢 ಗೃಹಲಕ್ಷ್ಮಿ ಯೋಜನೆ: ಇನ್ಮುಂದೆ ಬಯೋಮೆಟ್ರಿಕ್ ಪರಿಶೀಲನೆ ಕಡ್ಡಾಯ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಅಡಿಕೆ ಎಲೆ ಚುಕ್ಕಿ, ಹಳದಿ ಎಲೆ ರೋಗ ತುರ್ತು ಸ್ಪಂದಿಸಲು ಕೇಂದ್ರ ಸರ್ಕಾರಕ್ಕೆ ಸಂಸದ ಕ್ಯಾ. ಚೌಟ ಮನವಿ

(ನ್ಯೂಸ್ ಕಡಬ) newskadaba.com ಜೂ. 10. ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಮತ್ತು ಮಲೆನಾಡು ಭಾಗದ ಸಾವಿರಾರು ಅಡಿಕೆ ಬೆಳೆಗಾರರಿಗೆ ತೀವ್ರ ಆತಂಕ ತಂದೊಡ್ಡಿರುವ ‘ಹಳದಿ ಎಲೆ ರೋಗ’ ಮತ್ತು ‘ಎಲೆ ಚುಕ್ಕಿ ರೋಗ’ ಸಮಸ್ಯೆಗೆ ತುರ್ತು ಪರಿಹಾರ ಕ್ರಮ ಕೈಗೊಳ್ಳುವಂತೆ ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್  ಅವರಿಗೆ ಮನವಿ ಸಲ್ಲಿಸಿದ್ದಾರೆ. ರಾಜ್ಯದ ಪ್ರಮುಖ ಅಡಿಕೆ ಬೆಳೆಯುವ ಪ್ರದೇಶಗಳಲ್ಲಿ ಈ ರೋಗಗಳ ವ್ಯಾಪಕ ಹರಡುವಿಕೆಯಿಂದಾಗಿ ರೈತರು

ಅಡಿಕೆ ಎಲೆ ಚುಕ್ಕಿ, ಹಳದಿ ಎಲೆ ರೋಗ ತುರ್ತು ಸ್ಪಂದಿಸಲು ಕೇಂದ್ರ ಸರ್ಕಾರಕ್ಕೆ ಸಂಸದ ಕ್ಯಾ. ಚೌಟ ಮನವಿ Read More »

ಕರಾವಳಿ, ಕರ್ನಾಟಕ

ತೆಂಗಿನಕಾಯಿ ದರದಲ್ಲಿ ಭಾರಿ ಕುಸಿತ ಗ್ರಾಹಕರಿಗೆ ನಿರಾಳ, ಕೆರಾಫೆಡ್‌ನಿಂದ ‘ಕೇರಾ’ ಎಣ್ಣೆ ಬೆಲೆಯೂ ಕಡಿತ

(ನ್ಯೂಸ್‌ ಕಡಬ) newskadaba.com,  ಜೂ.10 : ಭಾರಿ ಬೇಡಿಕೆಯಿಂದಾಗಿ 82 ರೂಪಾಯಿಗೆ ತಲುಪಿದ್ದ ತೆಂಗಿನಕಾಯಿ ಬೆಲೆ ಇದೀಗ 40 ರೂಪಾಯಿಗೆ ಕುಸಿದಿದೆ. ತಮಿಳುನಾಡಿನಲ್ಲಿ ಅತಿ ಹೆಚ್ಚು ಉತ್ಪಾದನೆ, ಪಶ್ಚಿಮ ಏಷ್ಯಾ ಯುದ್ಧದಿಂದಾಗಿ ರಫ್ತು ಕುಸಿತ ಹಾಗೂ ನೆರೆರಾಜ್ಯಗಳ ಹರಿವು ಈ ಇಳಿಕೆಗೆ ಮುಖ್ಯ ಕಾರಣ. ಬೆಲೆ ಕುಸಿತದ ಹಿನ್ನೆಲೆಯಲ್ಲಿ ಸರ್ಕಾರಿ ಸ್ವಾಮ್ಯದ ಕೆರಾಫೆಡ್ ಸಂಸ್ಥೆಯು ಸಾರ್ವಜನಿಕರಿಗಾಗಿ ತನ್ನ ‘ಕೇರಾ’ ಬ್ರ್ಯಾಂಡ್ ತೆಂಗಿನ ಎಣ್ಣೆಯ ದರವನ್ನು ಕಡಿತಗೊಳಿಸಿದೆ: 1 ಲೀಟರ್ ಪ್ಯಾಕ್: 375 ರೂ.ನಿಂದ 332 ರೂ.ಗೆ ಇಳಿಕೆ.

ತೆಂಗಿನಕಾಯಿ ದರದಲ್ಲಿ ಭಾರಿ ಕುಸಿತ ಗ್ರಾಹಕರಿಗೆ ನಿರಾಳ, ಕೆರಾಫೆಡ್‌ನಿಂದ ‘ಕೇರಾ’ ಎಣ್ಣೆ ಬೆಲೆಯೂ ಕಡಿತ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಚಿನ್ನ ಬೆಳ್ಳಿ ಬೆಲೆ ಭಾರಿ ಇಳಿಕೆ

(ನ್ಯೂಸ್‌ ಕಡಬ) newskadaba.com,  ಜೂ.10: ಅಮೆರಿಕ-ಇರಾನ್ ನಡುವಿನ ಉದ್ವಿಗ್ನತೆಯಿಂದ ಕಚ್ಚಾ ತೈಲ ಬೆಲೆ ಶೇ. 1 ರಷ್ಟು ಏರಿಕೆಯಾಗಿದ್ದರೂ, ಹೂಡಿಕೆದಾರರು ಚಿನ್ನದ ಖರೀದಿಯಿಂದ ಹಿಂದೆ ಸರಿದಿರುವುದು ದರ ಇಳಿಕೆಗೆ ಕಾರಣವಾಗಿದೆ. 24 ಕ್ಯಾರೆಟ್ ಚಿನ್ನ: 10 ಗ್ರಾಂಗೆ 4,300 ರೂ. ಇಳಿಕೆಯಾಗಿದ್ದು, ಪ್ರಸ್ತುತ ದರ 1,48,860 ರೂ. ಆಗಿದೆ. 22 ಕ್ಯಾರೆಟ್ ಚಿನ್ನ: 10 ಗ್ರಾಂಗೆ 3,950 ರೂ. ಇಳಿಕೆಯಾಗಿದ್ದು, ಪ್ರಸ್ತುತ ದರ 1,36,450 ರೂ. ದಾಖಲಾಗಿದೆ. ಬೆಳ್ಳಿ ದರ: ಒಂದೇ ದಿನ ಕೇಜಿಗೆ 10,000 ರೂ.

ಚಿನ್ನ ಬೆಳ್ಳಿ ಬೆಲೆ ಭಾರಿ ಇಳಿಕೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ನೆಹರೂ ದಾಖಲೆ ಬ್ರೇಕ್ ಭಾರತದ ಇತಿಹಾಸದಲ್ಲೇ ದೀರ್ಘಕಾಲ ನಿರಂತರ ಆಡಳಿತ ನಡೆಸಿದ ಪ್ರಧಾನಿ ನರೇಂದ್ರ ಮೋದಿ!

(ನ್ಯೂಸ್‌ ಕಡಬ) newskadaba.com,  ಜೂ.10: ಪ್ರಧಾನಿ ನರೇಂದ್ರ ಮೋದಿ ಅವರು ಸತತ 4,399 ದಿನಗಳ ಕಾಲ ಪ್ರಧಾನಿಯಾಗಿ ಸೇವೆ ಸಲ್ಲಿಸುವ ಮೂಲಕ ಭಾರತದ ಇತಿಹಾಸದಲ್ಲೇ ಅತ್ಯಂತ ದೀರ್ಘಾವಧಿಗೆ ‘ನಿರಂತರ’ ಅಧಿಕಾರ ನಡೆಸಿದ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಸತತ 4,398 ದಿನಗಳ (1952-1964) ಆಡಳಿತದ 64 ವರ್ಷಗಳ ಹಳೆಯ ದಾಖಲೆಯನ್ನು ಮೋದಿ ಮುರಿದಿದ್ದಾರೆ. “ಕಳೆದ 12 ವರ್ಷಗಳ ಈ ಪಯಣ ದೇಶದ ಜನರ ನಂಬಿಕೆ, ಅಭಿವೃದ್ಧಿ ಮತ್ತು ಕಲ್ಯಾಣಕ್ಕೆ ಸಮರ್ಪಿತವಾಗಿದೆ”

ನೆಹರೂ ದಾಖಲೆ ಬ್ರೇಕ್ ಭಾರತದ ಇತಿಹಾಸದಲ್ಲೇ ದೀರ್ಘಕಾಲ ನಿರಂತರ ಆಡಳಿತ ನಡೆಸಿದ ಪ್ರಧಾನಿ ನರೇಂದ್ರ ಮೋದಿ! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಶ್ರವಣಬೆಳಗೊಳದಲ್ಲಿ 12ನೇ ಶತಮಾನದ ಅಪರೂಪದ ಶಿಲಾ ಶಾಸನ ಪತ್ತೆ: ಇತಿಹಾಸಜ್ಞರಲ್ಲಿ ಕುತೂಹಲ

(ನ್ಯೂಸ್‌ ಕಡಬ) newskadaba.com,  ಜೂ.10: ವಿಂದ್ಯಾಗಿರಿಯ ಬಾಹುಬಲಿ ಬೆಟ್ಟ, ಶ್ರವಣಬೆಳಗೊಳ (ಹಾಸನ ಜಿಲ್ಲೆ).ಕ್ಷೇತ್ರದ ಆಡಳಿತ ಮಂಡಳಿ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯದ ವೇಳೆ, ಬಂಡೆಯೊಂದರ ಹಿಂಭಾಗದಲ್ಲಿ ಗಿಡ-ಗಂಟೆಗಳಿಂದ ಆವೃತವಾಗಿದ್ದ ಈ ಶಿಲಾ ಶಾಸನ ಬೆಳಕಿಗೆ ಬಂದಿದೆ. 12ನೇ ಶತಮಾನಕ್ಕೆ ಸೇರಿದ ಈ ಶಾಸನವು ಕನ್ನಡ ಲಿಪಿಯಲ್ಲಿದ್ದು, ‘ಕಬ್ಬಹಿನ ವೃತ್ತಿ’ಗೆ (ಆ ಕಾಲದ ವೃತ್ತಿ/ಕಾಯಕ) ಬಿಟ್ಟ ದಾನದ ವಿವರಗಳನ್ನು ಒಳಗೊಂಡಿದೆ.ಈ ಹೊಸ ಆವಿಷ್ಕಾರದೊಂದಿಗೆ ಶ್ರವಣಬೆಳಗೊಳ ಕ್ಷೇತ್ರದಲ್ಲಿ ದಾಖಲಾದ ಒಟ್ಟು ಶಾಸನಗಳ ಸಂಖ್ಯೆ 54ಕ್ಕೆ ಏರಿಕೆಯಾಗಿದೆ. ಇದು ದೇಶದಲ್ಲೇ ಅತಿ ಹೆಚ್ಚು

ಶ್ರವಣಬೆಳಗೊಳದಲ್ಲಿ 12ನೇ ಶತಮಾನದ ಅಪರೂಪದ ಶಿಲಾ ಶಾಸನ ಪತ್ತೆ: ಇತಿಹಾಸಜ್ಞರಲ್ಲಿ ಕುತೂಹಲ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬಸ್ ಪ್ರಯಾಣಕ್ಕೆ ಆಧಾರ್ ಬದಲು ‘ಸ್ಮಾರ್ಟ್ ಕಾರ್ಡ್‌’: ಶಕ್ತಿ ಯೋಜನೆಯಡಿ ಹೊಸ ಕ್ರಮ

(ನ್ಯೂಸ್‌ ಕಡಬ) newskadaba.com, ಜೂ.10 ಶಕ್ತಿ ಯೋಜನೆ: ಮಹಿಳೆಯರಿಗೆ ಶೀಘ್ರದಲ್ಲೇ ‘ಸ್ಮಾರ್ಟ್ ಕಾರ್ಡ್‌’ ಬಸ್ ಪ್ರಯಾಣದ ವೇಳೆ ಭೌತಿಕ ಆಧಾರ್ ಕಾರ್ಡ್ ತೋರಿಸುವ ಗೊಂದಲ ನಿವಾರಿಸಲು ಸರ್ಕಾರದಿಂದ ಸ್ಮಾರ್ಟ್ ಕಾರ್ಡ್ ವ್ಯವಸ್ಥೆ ಜಾರಿ.ರಾಜ್ಯದ 3 ಕೋಟಿಗೂ ಅಧಿಕ ಮಹಿಳಾ ಫಲಾನುಭವಿಗಳಿಗೆ ಈ ಕಾರ್ಡ್‌ಗಳನ್ನು ಸಂಪೂರ್ಣ ಉಚಿತವಾಗಿ ನೀಡಲಾಗುವುದು ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ ಮೆಟ್ರೋ ಕಾರ್ಡ್ ಮಾದರಿಯಲ್ಲಿ ಪುರುಷರೂ ಶುಲ್ಕ ಪಾವತಿಸಿ ಕಾರ್ಡ್ ಪಡೆದು, ರೀಚಾರ್ಜ್ ಮಾಡಿಕೊಳ್ಳಬಹುದು.3 ಕೋಟಿ ಕಾರ್ಡ್‌ಗಳ ಮುದ್ರಣಕ್ಕೆ ಶೀಘ್ರದಲ್ಲೇ ಟೆಂಡರ್

ಬಸ್ ಪ್ರಯಾಣಕ್ಕೆ ಆಧಾರ್ ಬದಲು ‘ಸ್ಮಾರ್ಟ್ ಕಾರ್ಡ್‌’: ಶಕ್ತಿ ಯೋಜನೆಯಡಿ ಹೊಸ ಕ್ರಮ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಶ್ರೀ ಕ್ಷೇತ್ರ ಕುಕ್ಕಾಜೆಯಿಂದ ನೂರಾರು ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ

(ನ್ಯೂಸ್‌ ಕಡಬ) newskadaba.com,  ಜೂ.10 ಬಂಟ್ವಾಳ: ಶ್ರೀ ಕ್ಷೇತ್ರ ಕುಕ್ಕಾಜೆಯಿಂದ ಉಚಿತ ಪುಸ್ತಕ ವಿತರಣೆ ಬಂಟ್ವಾಳ: ಶ್ರೀ ಕ್ಷೇತ್ರ ಕುಕ್ಕಾಜೆಯ ವಾರ್ಷಿಕ ಶೈಕ್ಷಣಿಕ ಸಹಾಯ ಕಾರ್ಯಕ್ರಮದ ಅಂಗವಾಗಿ ಮಂಗಳವಾರ ನೂರಾರು ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕಗಳನ್ನು ವಿತರಿಸಲಾಯಿತು. ಶ್ರೀ ಕೃಷ್ಣ ಗುರೂಜಿಯವರು ಹೊಸ ಶೈಕ್ಷಣಿಕ ವರ್ಷದ ಆರಂಭಕ್ಕೂ ಮುನ್ನ ತಮ್ಮ ದೀರ್ಘಕಾಲದ ಸಂಪ್ರದಾಯದಂತೆ ಈ ಪುಸ್ತಕಗಳನ್ನು ವಿತರಿಸಿದರು. ಕಾರ್ಯಕ್ರಮದಲ್ಲಿ ಕ್ಷೇತ್ರದ ಮೊಕ್ತೇಸರ ಎಂ.ಕೆ. ಶ್ರೀಧರ್ ಬಾಳೆಕಲ್ಲು, ಕಲಿಕಾ ಕಲಾ ಸಂಘದ ಅಧ್ಯಕ್ಷ ನವೀನ್ ತರಿದಾಳ, ಪಶುವೈದ್ಯಾಧಿಕಾರಿ ಡಾ.

ಶ್ರೀ ಕ್ಷೇತ್ರ ಕುಕ್ಕಾಜೆಯಿಂದ ನೂರಾರು ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top