📢 ಗೃಹಲಕ್ಷ್ಮಿ ಯೋಜನೆ: ಇನ್ಮುಂದೆ ಬಯೋಮೆಟ್ರಿಕ್ ಪರಿಶೀಲನೆ ಕಡ್ಡಾಯ



(ನ್ಯೂಸ್‌ ಕಡಬ) newskadaba.com,  ಜೂ.10  ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯಡಿ ಮಾಸಿಕ ₹2,000 ಪಡೆಯಲು ಇನ್ಮುಂದೆ ಬಯೋಮೆಟ್ರಿಕ್ ಪರಿಶೀಲನೆ ಕಡ್ಡಾಯಗೊಳಿಸಿ ಸರ್ಕಾರ ಆದೇಶಿಸಿದೆ. ಗ್ರಾಮ ಒನ್, ಬೆಂಗಳೂರು ಒನ್ ಮತ್ತು ಕರ್ನಾಟಕ ಒನ್ ಕೇಂದ್ರಗಳಲ್ಲಿ ಆಧಾರ್ ಕಾರ್ಡ್ ಹಾಗೂ ಗೃಹಲಕ್ಷ್ಮಿ ಗುರುತಿನ ಚೀಟಿ ನೀಡಿ ಹೆಬ್ಬೆಟ್ಟು ಅಥವಾ ಮುಖದ ಗುರುತಿನ ಪ್ರಕ್ರಿಯೆ ಮುಗಿಸುವುದು ಕಡ್ಡಾಯವಾಗಿದೆ.







ರಾಜ್ಯಾದ್ಯಂತ 6,624 ಮೃತ ಮಹಿಳೆಯರ ಖಾತೆಗಳಿಗೆ ಹಣ ಜಮೆಯಾಗುತ್ತಿತ್ತು ಆದಾಯ ತೆರಿಗೆ ಹಾಗೂ ಜಿಎಸ್‌ಟಿ ಪಾವತಿಸುವ ಕುಟುಂಬದ 4,800 ಅನರ್ಹರು ಸೌಲಭ್ಯ ಪಡೆಯುತ್ತಿದ್ದರು.ಬೆಂಗಳೂರು ದಕ್ಷಿಣ ತಾಲೂಕೊಂದರಲ್ಲೇ 12,790 ನಕಲಿ ಫಲಾನುಭವಿಗಳನ್ನು ಪತ್ತೆಹಚ್ಚಿ ಯೋಜನೆಯಿಂದ ಹೊರದಬ್ಬಲಾಗಿದೆ.






 

 

error: Content is protected !!
Scroll to Top