ಶ್ರವಣಬೆಳಗೊಳದಲ್ಲಿ 12ನೇ ಶತಮಾನದ ಅಪರೂಪದ ಶಿಲಾ ಶಾಸನ ಪತ್ತೆ: ಇತಿಹಾಸಜ್ಞರಲ್ಲಿ ಕುತೂಹಲ

(ನ್ಯೂಸ್‌ ಕಡಬ) newskadaba.com,  ಜೂ.10: ವಿಂದ್ಯಾಗಿರಿಯ ಬಾಹುಬಲಿ ಬೆಟ್ಟ, ಶ್ರವಣಬೆಳಗೊಳ (ಹಾಸನ ಜಿಲ್ಲೆ).ಕ್ಷೇತ್ರದ ಆಡಳಿತ ಮಂಡಳಿ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯದ ವೇಳೆ, ಬಂಡೆಯೊಂದರ ಹಿಂಭಾಗದಲ್ಲಿ ಗಿಡ-ಗಂಟೆಗಳಿಂದ ಆವೃತವಾಗಿದ್ದ ಈ ಶಿಲಾ ಶಾಸನ ಬೆಳಕಿಗೆ ಬಂದಿದೆ.

12ನೇ ಶತಮಾನಕ್ಕೆ ಸೇರಿದ ಈ ಶಾಸನವು ಕನ್ನಡ ಲಿಪಿಯಲ್ಲಿದ್ದು, ‘ಕಬ್ಬಹಿನ ವೃತ್ತಿ’ಗೆ (ಆ ಕಾಲದ ವೃತ್ತಿ/ಕಾಯಕ) ಬಿಟ್ಟ ದಾನದ ವಿವರಗಳನ್ನು ಒಳಗೊಂಡಿದೆ.ಈ ಹೊಸ ಆವಿಷ್ಕಾರದೊಂದಿಗೆ ಶ್ರವಣಬೆಳಗೊಳ ಕ್ಷೇತ್ರದಲ್ಲಿ ದಾಖಲಾದ ಒಟ್ಟು ಶಾಸನಗಳ ಸಂಖ್ಯೆ 54ಕ್ಕೆ ಏರಿಕೆಯಾಗಿದೆ.

ಇದು ದೇಶದಲ್ಲೇ ಅತಿ ಹೆಚ್ಚು ಶಿಲಾ ಶಾಸನಗಳನ್ನು ಹೊಂದಿರುವ ಐತಿಹಾಸಿಕ ಕ್ಷೇತ್ರ ಎಂಬ ಹೆಗ್ಗಳಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸಿದೆ.

ಕ್ಷೇತ್ರದ ಪೀಠಾಧಿಪತಿಗಳಾದ ಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ರಾಷ್ಟ್ರೀಯ ಪ್ರಾಕೃತ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆಯ ಶಾಸನ ವಿಭಾಗದ ತಜ್ಞರಿಗೆ ಈ ಕುರಿತು ಹೆಚ್ಚಿನ ಸಂಶೋಧನೆ ನಡೆಸಲು ಸೂಚಿಸಿದ್ದಾರೆ.

Scroll to Top