News Kadaba Desk

ವಿಟ್ಲ – ಮಂಗಳೂರು ಮಾರ್ಗದಲ್ಲಿ ಹೆಚ್ಚಿದ ಬಸ್ ಸಮಸ್ಯೆ: ಸರ್ಕಾರಿ ವೇಗದೂತ ಬಸ್ ಸಂಚಾರಕ್ಕೆ ಸಾರ್ವಜನಿಕರ ಒತ್ತಾಯ

(ನ್ಯೂಸ್‌ ಕಡಬ) newskadaba.com,  ಜೂ.22  ಪ್ರತಿನಿತ್ಯ ವಿಟ್ಲದಿಂದ ಮಂಗಳೂರಿಗೆ ಸಂಚರಿಸುವ ನೂರಾರು ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳಿಗೆ ಸೂಕ್ತ ಬಸ್ ಸೌಕರ್ಯವಿಲ್ಲದೆ ತೀವ್ರ ತೊಂದರೆಯಾಗುತ್ತಿದ್ದು, ತಕ್ಷಣವೇ ಸರ್ಕಾರಿ ವೇಗದೂತ ಬಸ್‌ಗಳನ್ನು ಆರಂಭಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.ಪ್ರಸ್ತುತ ಚಾಲ್ತಿಯಲ್ಲಿರುವ ಕಪ್ಪು ನಾಮಫಲಕದ ಶಟಲ್ ಬಸ್‌ಗಳು ಹಳೆಯದಾಗಿದ್ದು, ವಿಟ್ಲದಿಂದ ಮಂಗಳೂರು ತಲುಪಲು ಸುಮಾರು ಒಂದೂವರೆಯಿಂದ ಮುಕ್ಕಾಲು ಗಂಟೆ ತೆಗೆದುಕೊಳ್ಳುತ್ತಿವೆ. ಬೆಳಗ್ಗಿನ ಅವಧಿಯಲ್ಲಿ ಬಸ್‌ಗಳು ವಿಟ್ಲದಿಂದ ಹೊರಡುವಾಗಲೇ ಭರ್ತಿಯಾಗುತ್ತಿದ್ದು, ಮಂಗಿಲಪದವು, ಕೆಲಿಂಜ, ವೀರಕಂಬ ತಲುಪುವಾಗ ಕಾಲಿಡಲು ಜಾಗವಿಲ್ಲದಂತಾಗುತ್ತಿವೆ. ಶೇ. 90ರಷ್ಟು ಪ್ರಯಾಣಿಕರು ನೇರವಾಗಿ ಮಂಗಳೂರಿಗೇ […]

ವಿಟ್ಲ – ಮಂಗಳೂರು ಮಾರ್ಗದಲ್ಲಿ ಹೆಚ್ಚಿದ ಬಸ್ ಸಮಸ್ಯೆ: ಸರ್ಕಾರಿ ವೇಗದೂತ ಬಸ್ ಸಂಚಾರಕ್ಕೆ ಸಾರ್ವಜನಿಕರ ಒತ್ತಾಯ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮಂಗಳೂರು ಎಕ್ಕೂರು ರೈಲ್ವೆ ಮೇಲ್ಸೇತುವೆ ಬಳಿ ಅಪಘಾತ: ಎಸಿ ಮೆಕ್ಯಾನಿಕ್ ಸುಧೀಶ್ ನಿಧನ

(ನ್ಯೂಸ್‌ ಕಡಬ) newskadaba.com,  ಜೂ.22  ಮಂಗಳೂರು: ಚಲಿಸುತ್ತಿದ್ದ ಲಾರಿಯ ಹಿಂಭಾಗಕ್ಕೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಯುವಕನೊಬ್ಬ ಮೃತಪಟ್ಟ ಘಟನೆ ಜೂನ್ 21ರ ಭಾನುವಾರ ಬೆಳಿಗ್ಗೆ ಇಲ್ಲಿನ ಎಕ್ಕೂರು ರಾಷ್ಟ್ರೀಯ ಹೆದ್ದಾರಿ 66ರ ರೈಲ್ವೆ ಮೇಲ್ಸೇತುವೆಯ ಮೇಲೆ ಸಂಭವಿಸಿದೆ. ಮೃತರನ್ನು ಮಂಜೇಶ್ವರದ ಪಾತೂರಿನ ನಿವಾಸಿ, ಎಸಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ ಸುಧೀಶ್ ಸಿ.ಕೆ. (26) ಎಂದು ಗುರುತಿಸಲಾಗಿದೆ. ಅವರು ಮನೆಯಿಂದ ಕೆಲಸದ ನಿಮಿತ್ತ ಮಂಗಳೂರು ನಗರಕ್ಕೆ ಬರುತ್ತಿದ್ದಾಗ ಈ ದುರ್ಘಟನೆ ನಡೆದಿದೆ.ಮೇಲ್ಸೇತುವೆಯ ಮೇಲೆ ಚಲಿಸುತ್ತಿದ್ದ ಲಾರಿಗೆ

ಮಂಗಳೂರು ಎಕ್ಕೂರು ರೈಲ್ವೆ ಮೇಲ್ಸೇತುವೆ ಬಳಿ ಅಪಘಾತ: ಎಸಿ ಮೆಕ್ಯಾನಿಕ್ ಸುಧೀಶ್ ನಿಧನ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಆಹಾರವೆಂದು ಪ್ಲಾಸ್ಟಿಕ್ ಕವರ್ ಕಚ್ಚಿದ ನಾಯಿ ಸ್ಥಳದಲ್ಲೇ ಛಿದ್ರ ಛಿದ್ರ; ಬೆಚ್ಚಿಬಿದ್ದ ಗ್ರಾಮಸ್ಥರು

(ನ್ಯೂಸ್‌ ಕಡಬ) newskadaba.com,  ಜೂ.22  ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ನಲ್ಕುದರೆ ಗ್ರಾಮದಲ್ಲಿ ರಸ್ತೆ ಬದಿ ಬಿದ್ದಿದ್ದ ಪ್ಲಾಸ್ಟಿಕ್ ಕವರ್ ಕಚ್ಚಿದ ಸಾಕುನಾಯಿಯೊಂದು ಭೀಕರ ಸ್ಫೋಟಕ್ಕೆ ಬಲಿಯಾಗಿದೆ.ಗ್ರಾಮದ ನಿವಾಸಿ ರುದ್ರೇಶ್ ಅವರು ಜಮೀನಿಗೆ ದನ ಮೇಯಿಸಲು ಹೋಗುತ್ತಿದ್ದಾಗ ಅವರ ಸಾಕುನಾಯಿಯೂ ಜೊತೆಗಿತ್ತು. ಈ ವೇಳೆ ರಸ್ತೆ ಬದಿಯಲ್ಲಿದ್ದ ಪ್ಲಾಸ್ಟಿಕ್ ಕವರ್‌ನಲ್ಲಿ ಆಹಾರ ಇರಬಹುದೆಂದು ಭಾವಿಸಿ ನಾಯಿ ಅದನ್ನು ಕಚ್ಚಿದ ತಕ್ಷಣವೇ ಅದು ಪ್ರಬಲವಾಗಿ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ನಾಯಿಯ ಮುಖ ಛಿದ್ರಗೊಂಡು ಸ್ಥಳದಲ್ಲೇ ಮೃತಪಟ್ಟಿದೆ.ಈ ಸ್ಫೋಟದ ಸದ್ದು

ಆಹಾರವೆಂದು ಪ್ಲಾಸ್ಟಿಕ್ ಕವರ್ ಕಚ್ಚಿದ ನಾಯಿ ಸ್ಥಳದಲ್ಲೇ ಛಿದ್ರ ಛಿದ್ರ; ಬೆಚ್ಚಿಬಿದ್ದ ಗ್ರಾಮಸ್ಥರು Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಪಡ್ಪಿನಂಗಡಿ:ಎಸ್‌ಡಿಪಿಐ ಸಂಸ್ಥಾಪನಾ ದಿನಾಚರಣೆಯ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮ

(ನ್ಯೂಸ್‌ ಕಡಬ) newskadaba.com,  ಜೂ.22   ಪಡ್ಪಿನಂಗಡಿ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ 18 ನೇ ವರ್ಷದ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಎಸ್‌ಡಿಪಿಐ ಮುಚ್ಚಿಲ ಬ್ರಾಂಚ್ ಸಮಿತಿ ವತಿಯಿಂದ ಪಡ್ಪಿನಂಗಡಿಯಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು ಮುಚ್ಚಿಲ ಬ್ರಾಂಚ್ ಅಧ್ಯಕ್ಷ  ಝುಬೈರ್ ಮುಚ್ಚಿಲ ಧ್ವಜಾರೋಹಣಗೈದರು.ಎಸ್‌ಡಿಪಿಐ ಸುಳ್ಯ ವಿಧಾನಸಭಾ ಕಾರ್ಯದರ್ಶಿ ಶರೀಫ್ ‌ನಿಂತಿಕಲ್ ಸಂದೇಶ ಭಾಷಣ ಮಾಡಿದರು.ಇದೇ ಸಂದರ್ಭದಲ್ಲಿ ಶನಿವಾರ ಸಂಜೆ ಮುರುಳ್ಯದಲ್ಲಿ ಕೆರೆಗೆ ಬಿದ್ದು ಮೃತಪಟ್ಟ ವೆಲ್ಡರ್ ವಸಂತ ರವರ ಮಕ್ಕಳ ಸಂತಾಪ ಸೂಚಕವಾಗಿ ಒಂದು ನಿಮಿಷ ಮೌನ

ಪಡ್ಪಿನಂಗಡಿ:ಎಸ್‌ಡಿಪಿಐ ಸಂಸ್ಥಾಪನಾ ದಿನಾಚರಣೆಯ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕೋಲ್ಕತ್ತಾದಲ್ಲಿ ಪ್ರಧಾನಿ ಮೋದಿ ಅವರಿಂದ ಸ್ವದೇಶಿ ನಿರ್ಮಿತ 3 ಪ್ರಮುಖ ಯುದ್ಧನೌಕೆಗಳು ಲೋಕಾರ್ಪಣೆ

(ನ್ಯೂಸ್‌ ಕಡಬ) newskadaba.com,  ಜೂ.22   ಭಾರತೀಯ ನೌಕಾಪಡೆಗೆ ಮತ್ತಷ್ಟು ಸ್ವದೇಶಿ ಬಲ ಬಂದಿದೆ. ಸ್ವದೇಶಿ ನಿರ್ಮಿತ ಐಎನ್‌ಎಸ್ ದುನಗಿರಿ, ಸಂನ್ಶೋಧಕ್, ಅಗ್ರಾಯ್ ಯುದ್ಧನೌಕೆಗಳನ್ನು ಲೋಕಾರ್ಪಣೆ ಮಾಡಲಾಗಿದೆ. ‘ಸ್ಟೆಲ್ತ್ ಫ್ರಿಗೇಟ್ ದುನಗಿರಿ’, ದೊಡ್ಡ ಸಮೀಕ್ಷಾ ಹಡಗು ಸಂಶೋಧಕ ‘ಸನ್ಶೋಧಕ್’ ಹಾಗೂ ಜಲಾಂತರ್ಗಾಮಿ ವಿರೋಧಿ ಅಲ್ಪ ಆಳದ ಯುದ್ಧನೌಕೆಯಾಗಿ ‘ಅಗ್ರಾಯ್’ ರಕ್ಷಣೆಗೆ ನಿಲ್ಲಲಿವೆ… ಪ್ರಧಾನಿ ನರೇಂದ್ರ ಮೋದಿ ಅವರು ಕೋಲ್ಕತ್ತಾದ ಶ್ಯಾಮಪ್ರಸಾದ್ ಮುಖರ್ಜಿ ಬಂದರಿನಲ್ಲಿ ಸ್ವದೇಶಿ ತಂತ್ರಜ್ಞಾನದಿAದ ನಿರ್ಮಿಸಲಾದ ಈ ನೌಕೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದರು.ಅಗ್ರಾಯ್ ಯುದ್ಧ ನೌಕೆ ಸಮುದ್ರ ಯುದ್ಧ,

ಕೋಲ್ಕತ್ತಾದಲ್ಲಿ ಪ್ರಧಾನಿ ಮೋದಿ ಅವರಿಂದ ಸ್ವದೇಶಿ ನಿರ್ಮಿತ 3 ಪ್ರಮುಖ ಯುದ್ಧನೌಕೆಗಳು ಲೋಕಾರ್ಪಣೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಚಿನ್ನದ ದರದಲ್ಲಿ ದಿಢೀರ್ ಏರಿಕೆ ಆಭರಣ ಚಿನ್ನದ ದರವೂ ಕೊಂಚ ಪ್ರಗತಿ

(ನ್ಯೂಸ್‌ ಕಡಬ) newskadaba.com,  ಜೂ.22  ಜೂನ್ 22, 2026ರ ಚಿನ್ನ ಮತ್ತು ಬೆಳ್ಳಿ ದರದ ಪ್ರಮುಖ ಮುಖ್ಯಾಂಶಗಳು ಇಲ್ಲಿವೆ: ಚಿನ್ನದ ದರ ಏರಿಕೆ ಕ್ಯಾರೆಟ್ ಚಿನ್ನ (ಶುದ್ಧ ಚಿನ್ನ): * 1 ಗ್ರಾಂ ಬೆಲೆ: 14,651 ರೂ. (43 ರೂ. ಏರಿಕೆ) ಗ್ರಾಂ ಬೆಲೆ: 1,46,510 ರೂ. (430 ರೂ. ಏರಿಕೆ),22 ಕ್ಯಾರೆಟ್ ಚಿನ್ನ (ಆಭರಣ ಚಿನ್ನ): * 1 ಗ್ರಾಂ ಬೆಲೆ: 13,430 ರೂ. (40 ರೂ. ಏರಿಕೆ) 10 ಗ್ರಾಂ ಬೆಲೆ: 1,34,300 ರೂ.

ಚಿನ್ನದ ದರದಲ್ಲಿ ದಿಢೀರ್ ಏರಿಕೆ ಆಭರಣ ಚಿನ್ನದ ದರವೂ ಕೊಂಚ ಪ್ರಗತಿ Read More »

ಕರಾವಳಿ

ದೇಶಾದ್ಯಂತ ನೀಟ್ ಪರೀಕ್ಷೆಯದ್ದೇ ಸದ್ದು ವಿದ್ಯಾರ್ಥಿಗಳಿಗಾಗಿ 45 ನಿಮಿಷ ಪ್ರಯಾಣ ಮುಂದೂಡಿದ ಪ್ರಧಾನಿ ಕೇಂದ್ರಗಳಲ್ಲಿ ಆಕ್ಷೇಪ-ಆರೋಪಗಳ ಹಾವಳಿ

(ನ್ಯೂಸ್‌ ಕಡಬ) newskadaba.com,  ಜೂ.22 ನರೇಂದ್ರ ಮೋದಿ ಅವರು ರವಿವಾರ ಕೋಲ್ಕತ್ತಾದಿಂದ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಬಳಿಕ ತಕ್ಷಣವೇ ತಮ್ಮ ಮನೆಗೆ ಹೋಗದೇ 45 ನಿಮಿಷ ಏರ್‌ಪೋರ್ಟಲ್ಲೇ ಕಾದ ಪ್ರಸಂಗ ನಡೆದಿದೆ. ಇದಕ್ಕೆ ಕಾರಣ ಮಧ್ಯಾಹ್ನ 2 ಗಂಟೆಗೆ ಆರಂಭವಾಗಬೇಕಿದ್ದ ನೀಟ್‌ ಪರೀಕ್ಷೆ.ಕೋಲ್ಕತಾದಿಂದ ಮಧ್ಯಾಹ್ನ 1:15ರ ಸುಮಾರಿಗೆ ದೆಹಲಿ ವಿಮಾನ ನಿಲ್ದಾಣವನ್ನು ತಲುಪಿದ ಮೋದಿ ತಕ್ಷಣ ಅಲ್ಲಿಂದ ತಮ್ಮ ನಿವಾಸದತ್ತ ಹೊರಡಲಿಲ್ಲ. ಏಕೆಂದರೆ ನೀಟ್ ಪರೀಕ್ಷೆ 2 ಗಂಟೆಗೆ ಆರಂಭವಾಗಬೇಕಿತ್ತು. ನೀಟ್‌ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳು

ದೇಶಾದ್ಯಂತ ನೀಟ್ ಪರೀಕ್ಷೆಯದ್ದೇ ಸದ್ದು ವಿದ್ಯಾರ್ಥಿಗಳಿಗಾಗಿ 45 ನಿಮಿಷ ಪ್ರಯಾಣ ಮುಂದೂಡಿದ ಪ್ರಧಾನಿ ಕೇಂದ್ರಗಳಲ್ಲಿ ಆಕ್ಷೇಪ-ಆರೋಪಗಳ ಹಾವಳಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಪಡುಬಿದ್ರಿಯಲ್ಲಿ ತಂಬಾಕು ನಿಯಂತ್ರಣ ಜಂಟಿ ಕಾರ್ಯಾಚರಣೆ ನಿಯಮ ಮೀರಿದ 44 ಮಂದಿಗೆ ದಂಡದ ಬಿಸಿ!

(ನ್ಯೂಸ್‌ ಕಡಬ) newskadaba.com,  ಜೂ.22 ಉಡುಪಿ: ಸಿಗರೇಟ್ ಮತ್ತು ಇತರೆ ತಂಬಾಕು ಉತ್ಪನ್ನಗಳ ಕಾಯ್ದೆ (ಕೋಟ್ಪಾ) 2003 ಅನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ, ಉಡುಪಿ ತಾಲೂಕು ಆರೋಗ್ಯಾಧಿಕಾರಿಗಳ ನೇತೃತ್ವದ ವಿಶೇಷ ತಂಡವು ಇತ್ತೀಚೆಗೆ ಕಾಪು ತಾಲೂಕಿನಾದ್ಯಂತ ಭರ್ಜರಿ ದಾಳಿ ನಡೆಸಿದೆ. ಅಧಿಕಾರಿಗಳು ಕಾಪು ತಾಲೂಕಿನ ಪಡುಬಿದ್ರಿ ಪಟ್ಟಣ ಮತ್ತು ಬಸ್ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತಂಬಾಕು ಮಾರಾಟ ಮಾಡುವ ಅಂಗಡಿಗಳು, ಹೋಟೆಲ್‌ಗಳು, ಬಾರ್ ಹಾಗೂ ರೆಸ್ಟೋರೆಂಟ್‌ಗಳನ್ನು ಗುರಿಯಾಗಿಸಿಕೊಂಡು ಈ ಕಾರ್ಯಾಚರಣೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ನಿಯಮ ಉಲ್ಲಂಘಿಸಿದವರ

ಪಡುಬಿದ್ರಿಯಲ್ಲಿ ತಂಬಾಕು ನಿಯಂತ್ರಣ ಜಂಟಿ ಕಾರ್ಯಾಚರಣೆ ನಿಯಮ ಮೀರಿದ 44 ಮಂದಿಗೆ ದಂಡದ ಬಿಸಿ! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕಡಬ: ಪತಿ, ಪತ್ನಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ ಪತ್ನಿಯನ್ನು ಕೊಂದು ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ

(ನ್ಯೂಸ್ ಕಡಬ) newskadaba.com ಕಡಬ, ಜೂ.20. ಪತ್ನಿಯನ್ನು ಕೊಂದು ಪತಿ‌ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಶನಿವಾರ ಅಪರಾಹ್ನ ಕಡಬ ಠಾಣಾ ವ್ಯಾಪ್ತಿಯ ಆಲಂಕಾರು ಎಂಬಲ್ಲಿ ನಡೆದಿದೆ. ಆಲಂಕಾರು ಪೇಟೆಯಲ್ಲಿ ಹೋಟೆಲ್ ನಡೆಸುತ್ತಿದ್ದ ಮೂಲತಃ ಕಾರ್ಕಳ ಬಜಗೋಳಿ ನಿವಾಸಿ ದಿನೇಶ್ ಹಾಗೂ ಸಿದ್ದಕಟ್ಟೆಯ ಸಂಗೀತಾ ದಂಪತಿಯು ಆಲಂಕಾರು ಕಜೆ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದು, ಶನಿವಾರದಂದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪತ್ನಿಯನ್ನು ಕೊಂದು ಪತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು,

ಕಡಬ: ಪತಿ, ಪತ್ನಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ ಪತ್ನಿಯನ್ನು ಕೊಂದು ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ Read More »

ಕರಾವಳಿ, ಕ್ರೈಮ್ ನ್ಯೂಸ್

ಆನ್‌ಲೈನ್ ಟ್ರೇಡಿಂಗ್ ದರೋಡೆ ಪ್ರಕರಣ: ಸಿಐಡಿ ಇನ್ಸ್‌ಪೆಕ್ಟರ್ ಸೇರಿ ಮೂವರ ಬಂಧನ!

(ನ್ಯೂಸ್‌ ಕಡಬ) newskadaba.com,ಜೂ.20 ಬೆಂಗಳೂರು: ಆನ್‌ಲೈನ್ ಟ್ರೇಡಿಂಗ್ ಹೆಸರಿನಲ್ಲಿ ಕೇರಳ ಮೂಲದ ಯುವಕರನ್ನು ನಂಬಿಸಿ, ಅವರಿಂದ 20 ಲಕ್ಷಕ್ಕೂ ಅಧಿಕ ಹಣವನ್ನು ದರೋಡೆ ಮಾಡಿದ ಆರೋಪದ ಮೇಲೆ ಸಿಐಡಿ ಇನ್ಸ್‌ಪೆಕ್ಟರ್ ಮಹೇಶ್ ಕನಕಗಿರಿ ಸೇರಿದಂತೆ ಮೂವರನ್ನು ಮಡಿವಾಳ ಪೊಲೀಸರು ಬಂಧಿಸಿದ್ದಾರೆ. ಕುಪೇಂದ್ರ ರೆಡ್ಡಿ ಮತ್ತು ವಸಂತ್ ಕುಮಾರ್ ಬಂಧಿತ ಇತರ ಆರೋಪಿಗಳು. ಆನ್‌ಲೈನ್ ಟ್ರೇಡಿಂಗ್‌ನಲ್ಲಿ 25 ಲಕ್ಷ ರೂ. ಹೂಡಿಕೆ ಮಾಡಿದರೆ 50 ಲಕ್ಷ ರೂ. ನೀಡುವುದಾಗಿ ಕೇರಳದ ಯುವಕರಿಗೆ ಆಮಿಷ ಒಡ್ಡಲಾಗಿತ್ತು.ಇದನ್ನು ನಂಬಿ ಯುವಕರು ಮಡಿವಾಳದ

ಆನ್‌ಲೈನ್ ಟ್ರೇಡಿಂಗ್ ದರೋಡೆ ಪ್ರಕರಣ: ಸಿಐಡಿ ಇನ್ಸ್‌ಪೆಕ್ಟರ್ ಸೇರಿ ಮೂವರ ಬಂಧನ! Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top