ಪಡ್ಪಿನಂಗಡಿ:ಎಸ್‌ಡಿಪಿಐ ಸಂಸ್ಥಾಪನಾ ದಿನಾಚರಣೆಯ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮ

(ನ್ಯೂಸ್‌ ಕಡಬ) newskadaba.com,  ಜೂ.22   ಪಡ್ಪಿನಂಗಡಿ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ 18 ನೇ ವರ್ಷದ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಎಸ್‌ಡಿಪಿಐ ಮುಚ್ಚಿಲ ಬ್ರಾಂಚ್ ಸಮಿತಿ ವತಿಯಿಂದ ಪಡ್ಪಿನಂಗಡಿಯಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು

ಮುಚ್ಚಿಲ ಬ್ರಾಂಚ್ ಅಧ್ಯಕ್ಷ  ಝುಬೈರ್ ಮುಚ್ಚಿಲ ಧ್ವಜಾರೋಹಣಗೈದರು.ಎಸ್‌ಡಿಪಿಐ ಸುಳ್ಯ ವಿಧಾನಸಭಾ ಕಾರ್ಯದರ್ಶಿ ಶರೀಫ್ ‌ನಿಂತಿಕಲ್ ಸಂದೇಶ ಭಾಷಣ ಮಾಡಿದರು.ಇದೇ ಸಂದರ್ಭದಲ್ಲಿ ಶನಿವಾರ ಸಂಜೆ ಮುರುಳ್ಯದಲ್ಲಿ ಕೆರೆಗೆ ಬಿದ್ದು ಮೃತಪಟ್ಟ ವೆಲ್ಡರ್ ವಸಂತ ರವರ ಮಕ್ಕಳ ಸಂತಾಪ ಸೂಚಕವಾಗಿ ಒಂದು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.

ಎಸ್‌ಡಿಪಿಐ ಬೆಳ್ಳಾರೆ ಬ್ಲಾಕ್ ಅಧ್ಯಕ್ಷರಾದ ಹಮೀದ್ ಮರಕ್ಕಡ ರವರು ಸಂತಾಪ ಸೂಚಕವಾಗಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಎಸ್‌ಡಿಪಿಐ ಬೆಳ್ಳಾರೆ ಬ್ಲಾಕ್ ಕಾರ್ಯದರ್ಶಿ ಬಶೀರ್ ರಾಗಿಪೇಟೆ, ಮುಚ್ಚಿಲ ಬ್ರಾಂಚ್ ಹಾಗೂ ಮುರುಳ್ಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Scroll to Top