ಕೋಲ್ಕತ್ತಾದಲ್ಲಿ ಪ್ರಧಾನಿ ಮೋದಿ ಅವರಿಂದ ಸ್ವದೇಶಿ ನಿರ್ಮಿತ 3 ಪ್ರಮುಖ ಯುದ್ಧನೌಕೆಗಳು ಲೋಕಾರ್ಪಣೆ

(ನ್ಯೂಸ್‌ ಕಡಬ) newskadaba.com,  ಜೂ.22   ಭಾರತೀಯ ನೌಕಾಪಡೆಗೆ ಮತ್ತಷ್ಟು ಸ್ವದೇಶಿ ಬಲ ಬಂದಿದೆ. ಸ್ವದೇಶಿ ನಿರ್ಮಿತ ಐಎನ್‌ಎಸ್ ದುನಗಿರಿ, ಸಂನ್ಶೋಧಕ್, ಅಗ್ರಾಯ್ ಯುದ್ಧನೌಕೆಗಳನ್ನು ಲೋಕಾರ್ಪಣೆ ಮಾಡಲಾಗಿದೆ.

‘ಸ್ಟೆಲ್ತ್ ಫ್ರಿಗೇಟ್ ದುನಗಿರಿ’, ದೊಡ್ಡ ಸಮೀಕ್ಷಾ ಹಡಗು ಸಂಶೋಧಕ ‘ಸನ್ಶೋಧಕ್’ ಹಾಗೂ ಜಲಾಂತರ್ಗಾಮಿ ವಿರೋಧಿ ಅಲ್ಪ ಆಳದ ಯುದ್ಧನೌಕೆಯಾಗಿ ‘ಅಗ್ರಾಯ್’ ರಕ್ಷಣೆಗೆ ನಿಲ್ಲಲಿವೆ…

ಪ್ರಧಾನಿ ನರೇಂದ್ರ ಮೋದಿ ಅವರು ಕೋಲ್ಕತ್ತಾದ ಶ್ಯಾಮಪ್ರಸಾದ್ ಮುಖರ್ಜಿ ಬಂದರಿನಲ್ಲಿ ಸ್ವದೇಶಿ ತಂತ್ರಜ್ಞಾನದಿAದ ನಿರ್ಮಿಸಲಾದ ಈ ನೌಕೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದರು.ಅಗ್ರಾಯ್ ಯುದ್ಧ ನೌಕೆ ಸಮುದ್ರ ಯುದ್ಧ, ಜಲವೈಜ್ಞಾನಿಕ ಸಮೀಕ್ಷೆ ಮತ್ತು ಜಲಾಂತರ್ಗಾಮಿ ವಿರೋಧಿ ಕಾರ್ಯಾಚರಣೆಗಳಲ್ಲಿ ಪ್ರಮುಖ ಕಾರ್ಯಾಚರಣಾ ಸಾಮರ್ಥ್ಯವನ್ನು ಪ್ರತಿನಿಧಿಸುತ್ತವೆ..

Scroll to Top