ಅಡುಗೆ ಕೋಣೆಯೊಳಗೆ ನುಗ್ಗಿದ ಚಿರತೆ- ಸೆರೆಹಿಡಿದ ಅರಣ್ಯ ಇಲಾಖೆ

(ನ್ಯೂಸ್ ಕಡಬ) newskadaba.com. 21. ಮನೆಯೊಂದರ ಅಡುಗೆ ಕೋಣೆಯೊಳಗೆ ಏಕಾಏಕಿ ಚಿರತೆಯೊಂದು ನುಗ್ಗಿದ ಘಟನೆ ಮಂಗಳೂರು ಹೊರವಲಯದ ಮೂಲ್ಕಿಯಲ್ಲಿ ನಡೆದಿದೆ.

ಮೂಲ್ಕಿಯ ಅಕ್ಕಸಾಲಿಕರ ಕೇರಿ ಬಳಿಯ ಸದಾನಂದ ಕೋಟ್ಯಾನ್ ಎಂಬವರ ಮನೆಯ ಅಡುಗೆ ಕೋಣೆಯೊಳಗೆ ಒಂದು ವರ್ಷ ಪ್ರಾಯದ ಚಿರತೆ ನುಗ್ಗಿದ್ದು, ಈ ವೇಳೆ ನಾಯಿ ಬೊಗಳಲು ಆರಂಭಿಸಿದೆ. ಮನೆಮಂದಿ ಕಂಗಾಲಾಗಿದ್ದಾರೆ. ಕೂಡಲೇ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಅಡುಗೆ ಮನೆಯ ಬಾಗಿಲಿಗೆ ಬೋನ್ ಅಳವಡಿಸಿ ಸುಮಾರು 5 ಗಂಟೆ ಕಾದ ಬಳಿಕ ಚಿರತೆ ಬೋನಿನೊಳಗೆ ಬಿದ್ದಿದೆ ಎನ್ನಲಾಗಿದೆ.

Scroll to Top