ಮಣಿಪುರದಲ್ಲಿ ಭಾರೀ ಪ್ರಮಾಣದ ಶಸ್ತ್ರಾಸ್ತ್ರ ವಶ

(ನ್ಯೂಸ್ ಕಡಬ)newskadaba.com, . 09 ಮಣಿಪುರ: ಮಣಿಪುರದ ವಿವಿಧ ಭಾಗಗಳಲ್ಲಿ ಕಳೆದ ಮೂರು ದಿನಗಳಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಂಫಾಲ್‌ ಪೂರ್ವ ಜಿಲ್ಲೆಯ ಚಂಪೈ ಬೆಟ್ಟದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು ಎಂ-16 ರೈಫಲ್‌ ಮತ್ತು .22 ರೈಫಲ್‌‍, ಎರಡು ಎಸ್‌‍ಎಲ್‌ಆರ್‌, ಒಂದು ದೇಶ ನಿರ್ಮಿತ ಸ್ಟೆನ್‌ ಗನ್‌‍, ಎರಡು ಕಾರ್ಬೈನ್‌ಗಳು, ಎಂಟು ದೇಶೀಯ ನಿರ್ಮಿತ 9 ಎಂಎಂ ಪಿಸ್ತೂಲ್‌ಗಳು, ಮೂವತ್ತು ವ್ಯಾಗಜೀನ್‌ಗಳನ್ನು ವಶಪಡಿಸಿಕೊಂಡಿವೆ.

 

ಮಂಗಳವಾರ ಇಂಫಾಲ್‌ ಪಶ್ಚಿಮ ಜಿಲ್ಲೆಯ ಖೇಲಾಖೋಂಗ್‌ನಲ್ಲಿ ಇದೇ ರೀತಿಯ ಕಾರ್ಯಾಚರಣೆ ನಡೆಸಲಾಯಿತು. ವಶಪಡಿಸಿಕೊಂಡ ವಸ್ತುಗಳಲ್ಲಿ ಎಸ್‌‍ಎಲ್‌ಆರ್‌ ರೈಫಲ್‌‍, ಮಾರ್ಪಡಿಸಿದ .303 ರೈಫಲ್‌‍, 9 ಎಂಎಂ ಪಿಸ್ತೂಲ್‌‍, 16 ಸಜೀವ ಗುಂಡುಗಳು ಮತ್ತು ಹ್ಯಾಂಡ್‌ ಗ್ರೆನೇಡ್‌ಗಳು ಸೇರಿವೆ ಎಂದು ಪೊಲೀಸರು ತಿಳಿಸಿದ್ದಾರೆ.

error: Content is protected !!

Join WhatsApp Group

WhatsApp Share