ಲಡ್ಡು ವಿವಾದ- ತಿರುಪತಿ ಸನ್ನಿಧಿಗೆ 2 ಟ್ರಕ್ ಕೆಎಂಎಫ್ ನಂದಿನಿ ತುಪ್ಪ ಸರಬರಾಜು

(ನ್ಯೂಸ್ ಕಡಬ) newskadaba.com ಸೆ. 25. ಪ್ರಸಾದ ರೂಪದಲ್ಲಿ ಕೊಡಲಾಗುವ ತಿರುಪತಿಯ ಲಡ್ಡಿನಲ್ಲಿ ಕಲಬೆರಕೆ ವಿವಾದ ಸೃಷ್ಟಿಯಾದ ಬೆನ್ನಲ್ಲೇ ನಂದಿನಿ ತುಪ್ಪಕ್ಕೆ ಬೇಡಿಕೆ ಹೆಚ್ಚಾಗಿದ್ದು, ತಿಮ್ಮಪ್ಪನ ಸನ್ನಿಧಿಗೆ ಎರಡು ಟ್ರಕ್‌ಗಳಲ್ಲಿ ಕೆಎಂಎಫ್ ಶುದ್ಧ ನಂದಿನಿ ತುಪ್ಪ ಸರಬರಾಜಾಗಿದೆ.


ಒಂದು ಟ್ರಕ್ ಯಲಹಂಕ ಮದರ್ ಡೈರಿಯಿಂದ ಮತ್ತು ಮತ್ತೊಂದು ಟ್ರಕ್ ಚನ್ನರಾಯಪಟ್ಟಣದಿಂದ ತುಪ್ಪ ಸರಬರಾಜಾಗಿರುವುದಾಗಿ ತಿಳಿದುಬಂದಿದೆ. ಸುಮಾರು 26 ಟನ್ ತುಪ್ಪ 2 ಟ್ರಕ್‌ಗಳಲ್ಲಿ ಆಗಮಿಸಿದ್ದು, ಲಡ್ಡು ವಿವಾದದ ಮಧ್ಯೆ ಕೆಎಂಎಫ್ ನಂದಿನಿ ತುಪ್ಪ ಸರಬರಾಜಾಗಿದೆ. ಸದ್ಯ ತಿರುಪತಿಗೆ ಆಗಮಿಸಿರುವ ಈ ಟ್ರಕ್‌ಗಳು ತಿರುಮಲಕ್ಕೆ ತಲುಪಲಿವೆ.

error: Content is protected !!

Join the Group

Join WhatsApp Group