ನಾಳೆಯಿಂದ ಹೆದ್ದಾರಿ ಬದಿಯಲ್ಲಿನ ಬಾರ್ ಬಂದ್

(ನ್ಯೂಸ್ ಕಡಬ) newskadaba.com ಕಡಬ, ಜೂ.30. ಹೆದ್ದಾರಿ ಬದಿಗಳಲ್ಲಿ ಕಾರ್ಯಾಚರಿಸುತ್ತಿದ್ದ ಬಾರ್ ಗಳನ್ನು 220 ಮೀಟರ್ ದೂರಕ್ಕೆ ಸ್ಥಳಾಂತರಿಸಬೇಕೆನ್ನುವ ಸುಪ್ರೀಂ ಕೋರ್ಟ್ ಆದೇಶವು ನಾಳೆಯಿಂದ ಜಾರಿಗೆ ಬರಲಿದೆ‌.

ಮೊದಲು ಹೆದ್ದಾರಿಯಿಂದ 500 ಮೀ. ಅಂತರ ಇರಬೇಕೆಂದು ನೀಡಲಾಗಿದ್ದ ಆದೇಶವನ್ನು ತಿದ್ದುಪಡಿ ಮಾಡಿರುವ ಸುಪ್ರೀಂಕೋರ್ಟ್ 220 ಮೀ. ಅಂತರವನ್ನು ನಿಗದಿಪಡಿಸಿತ್ತು.
ಈ ಆದೇಶದನ್ವಯ ದೇಶದಾದ್ಯಂತ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿ ಬದಿಗಳಲ್ಲಿನ ಬಾರ್ ಗಳಿಗೆ ಕುತ್ತು ಬಂದಿದ್ದು, ನಾಳೆಯಿಂದ ಮುಚ್ಚಬೇಕಾಗಿದೆ.

ಕಡಬದಲ್ಲಿನ ಬಾರ್ ಗಳೂ ಈ ಆದೇಶದ ಹೊರತಾಗಿಲ್ಲ. ಸುಬ್ರಹ್ಮಣ್ಯ – ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ಕಡಬದ ಮುಖ್ಯ ಪೇಟೆಯಲ್ಲಿನ ಎರಡು ಬಾರ್‌ಗಳು, ಆಲಂಕಾರು ಹಾಗೂ ನೆಟ್ಟಣದಲ್ಲಿನ ಬಾರ್‌ಗಳು ನಾಳೆಯಿಂದ ಮುಚ್ಚಲಿವೆ. ಇದರಿಂದಾಗಿ ಮದ್ಯಪ್ರಿಯರಿಗೆ ನೇರವಾದ ಹೊಡೆತವನ್ನು ಸುಪ್ರೀಂ ಕೋರ್ಟ್ ನೀಡಿದೆ. ಆದರೂ ಕಡಬದ ಪಂಜ ರಸ್ತೆಯಲ್ಲಿನ ಸರಕಾರಿ ಪ್ರಾಯೋಜಿತ ಬಾರ್ ಎಂದಿನಂತೆ ಮುಂದುವರಿಯಲಿದೆ‌.

Also Read  ಪ್ರಾಪರ್ಟಿ ಕಾರ್ಡ್ ಗಾಗಿ ಮುಗಿಬಿದ್ದ ಜನರು

error: Content is protected !!
Scroll to Top