ಆನೆ ದಾಳಿ – ಅಪಾರ ಕೃಷಿ ನಾಶ

(ನ್ಯೂಸ್ ಕಡಬ) newskadaba.com ಸುಳ್ಯ, ಮಾ. 05. ಕೃಷಿ ತೋಟಕ್ಕೆ ನುಗ್ಗಿದ ಕಾಡಾನೆಗಳು ಅಪಾರ ಪ್ರಮಾಣದ ಕೃಷಿ ನಾಶ ಪಡಿಸಿದ ಘಟನೆ ಅರಂತೋಡು ಗ್ರಾಮದ ಅಡ್ತಲೆಯ ನೆಕ್ಕರೆ ಎಂಬಲ್ಲಿಂದ ವರದಿಯಾಗಿದೆ.

 

ಇಲ್ಲಿಯ ದಾಸಪ್ಪ ಎಂಬವರ ತೋಟಕ್ಕೆ ನುಗ್ಗಿದ ಕಾಡಾನೆಗಳು ಬಾಳೆ ಹಾಗೂ ತೆಂಗಿನ ಮರಗಳನ್ನು ನಾಶ ಪಡಿಸಿದೆ ಎಂದು ತಿಳಿದು ಬಂದಿದೆ. ಅಡ್ತಲೆ ಭಾಗದಲ್ಲಿ ಇದು ಕಳೆದ ಅನೇಕ ಸಮಯಗಳಿಂದ ನಿರಂತರವಾಗಿ ಕಾಡಾನೆಗಳು ಕ್ರಷಿ ನಾಶ ಮಾಡಿ ರೈತರ ಜೀವನದ ಜೊತೆ ಚೆಲ್ಲಾಟ ಆಡುತ್ತಿದೆ.

Scroll to Top