ಜಲಾವೃತಗೊಂಡಿದ್ದ ಸೇತುವೆಯಲ್ಲಿ ಕಾರು ಸಿಲುಕಿ ಇಬ್ಬರು ಮೃತ್ಯು..!



(ನ್ಯೂಸ್ ಕಡಬ) newskadaba.com ಫರೀದಾಬಾದ್, ಸೆ. 14.  ಜಲಾವೃತಗೊಂಡಿದ್ದ ಹಳೆಯ ಫರೀದಾಬಾದ್ ಕೆಳ ಸೇತುವೆಯಲ್ಲಿ ಕಾರೊಂದು ಸಿಲುಕಿಕೊಂಡು ಬ್ಯಾಂಕ್ ಮ್ಯಾನೇಜರ್ ಹಾಗೂ ಕ್ಯಾಶಿಯರ್ ಸೇರಿದಂತೆ ಇಬ್ಬರು ಮೃತಪಟ್ಟಿರುವ ಘಟನೆ ಶುಕ್ರವಾರ ರಾತ್ರಿ 11.30ಕ್ಕೆ ನಡೆದಿದೆ ಎಂದು ವರದಿಯಾಗಿದೆ.







ದಿಲ್ಲಿ-ಎನ್ಸಿಆರ್ ಭಾಗದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಫರೀದಾಬಾದ್ ಕೆಳ ಸೇತುವೆ ಜಲಾವೃತವಾಗಿತ್ತು. ಈ ಸಂದರ್ಭದಲ್ಲಿ HDFC ಬ್ಯಾಂಕಿನ ಗುರುಗ್ರಾಮ ಶಾಖೆಯಲ್ಲಿ ಉದ್ಯೋಗ ಮಾಡುತ್ತಿದ್ದ ಮೃತರು, ಫರೀದಾಬಾದ್ ನತ್ತ ತೆರಳುವಾಗ ಈ ಘಟನೆ ನಡೆದಿದೆ ಎನ್ನಲಾಗಿದೆ.






 

error: Content is protected !!
Scroll to Top