ಮತ್ತೆ ಸೇನಾ ವಾಹನದ ಮೇಲೆ ಉಗ್ರರ ದಾಳಿ..!



(ನ್ಯೂಸ್ ಕಡಬ) newskadaba.com ಶ್ರೀನಗರ, . 13. ಜಮ್ಮು-ಕಾಶ್ಮೀರದ ಪೂಂಛ್ ಪ್ರದೇಶದಲ್ಲಿ ಉಗ್ರಗಾಮಿಗಳು ಸಿಎಒ ಸೇನಾ ವಾಹನದ ಮೇಲೆ ಗುಂಡಿನ ದಾಳಿ ನಡೆಸಿದ್ದು, ಇದಕ್ಕೆ ಪ್ರತಿಯಾಗಿ ಸೇನಾ ಪಡೆಗಳು ಪ್ರತಿದಾಳಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.







ಈ ಕುರಿತು ಸೇನಾಪಡೆ ಟ್ವೀಟ್ ಮಾಡಿರುವ ಮಾಹಿತಿ ಪ್ರಕಾರ, ಪೂಂಛ್ ನ ಕೃಷ್ಣ ಘಾಟಿ ಪ್ರದೇಶದ ಬಳಿ ಇರುವ ಬೆಟ್ಟದ ಮೇಲಿಂದ ಉಗ್ರರು ದಾಳಿ ನಡೆಸಿದ್ದಾರೆ. ಪ್ರತಿಯಾಗಿ ಸೈನಿಕರು ಪ್ರತಿದಾಳಿ ನಡೆಸಿದ್ದಾರೆ. ಇನ್ನು ಪ್ರತಿದಾಳಿ ನಡೆಸಿದ ಸಂದರ್ಭ ಭಯೋತ್ಪಾದಕರು ಕಾಡಿನೊಳಗೆ ಅವಿತು ಕುಳಿತಿರುವ ಶಂಕೆ ಇದೆ ಎನ್ನಲಾಗಿದೆ. ಇನ್ನು ಎಂದಿನಂತೆ ಸೇನೆ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಉಗ್ರರನ್ನು ಸದೆ ಬಡಿಯಲು ಪ್ರದೇಶವನ್ನು ಸುತ್ತುವರಿದಿದ್ದು,, ಜಂಟಿಯಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸದ್ಯ ಘಟನೆಯಲ್ಲಿ ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.






error: Content is protected !!
Scroll to Top