ಸುಳ್ಯ ತಾಲೂಕಿನಲ್ಲಿ ಮುಂದುವರಿದ ಕಾಡಾನೆ ಭೀತಿ: ಅರಣ್ಯ ಇಲಾಖೆಯ ಕ್ರಮಕ್ಕೆ ಒತ್ತಾಯ

(ನ್ಯೂಸ್‌ ಕಡಬ) newskadaba.com,  ಜು.28  ಸುಳ್ಯ: ತಾಲೂಕಿನಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿದ್ದು, ರೈತರ ತೋಟಗಳಿಗೆ ನುಗ್ಗಿ ಬೆಳೆ ನಾಶಪಡಿಸುತ್ತಿರುವುದರಿಂದ ರೈತರು ತೀವ್ರ ಆರ್ಥಿಕ ನಷ್ಟ ಎದುರಿಸುವಂತಾಗಿದೆ.

ಉಬರಡ್ಕ ಮಿತ್ತೂರು ಗ್ರಾಮದಲ್ಲಿ ಇಂದು ಮುಂಜಾನೆ ರೈತರ ತೋಟಗಳಿಗೆ ದಾಳಿ ಇಟ್ಟ ಕಾಡಾನೆಗಳ ಹಿಂಡು, ಅಪಾರ ಪ್ರಮಾಣದ ಬಾಳೆ ಹಾಗೂ ತೆಂಗಿನ ಮರಗಳನ್ನು ಧ್ವಂಸಗೊಳಿಸಿವೆ.

ಈಗಾಗಲೇ ಅಡಿಕೆ ಎಲೆ ಚುಕ್ಕಿ ಮತ್ತು ಹಳದಿ ರೋಗದಿಂದ ಕಂಗೆಟ್ಟಿದ್ದ ತಾಲೂಕಿನ ರೈತರಿಗೆ, ಕಾಡಾನೆಗಳ ಸರಣಿ ಉಪಟಳ ಗಾಯದ ಮೇಲೆ ಬರೆ ಎಳೆದಂತಾಗಿದೆ. ಶೀಘ್ರವೇ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಂಡು ಪರಿಹಾರ ನೀಡಬೇಕೆಂದು ರೈತರು ಆಗ್ರಹಿಸಿದ್ದಾರೆ.

Scroll to Top