ಎಸ್ಸೆಸ್ಸೆಲ್ಸಿ ಉತ್ತೀರ್ಣರಾದವರಿಗೆ JOB OFFER..! ಭಾರತೀಯ ಸೇನೆಯಲ್ಲಿ ವಿವಿದ ಹುದ್ದೆಗಳಿಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ನವದೆಹಲಿ, ಸೆ. 18. ಭಾರತೀಯ ಸೇನೆಯಲ್ಲಿ ಎಂಟಿಎಸ್ ಸೇರಿದಂತೆ ವಿವಿಧ ಹುದ್ದೆಗಳು ಖಾಲಿಯಿದ್ದು, ಇಂದಿನಿಂದ (ಸೆ.18) ಅರ್ಜಿ ಸಲ್ಲಿಕೆ ಪ್ರಾರಂಭವಾಗಲಿದ್ದು, ಅಕ್ಟೋಬರ್ 8ರಂದು ಕೊನೆಯ ದಿನವಾಗಿದೆ. ಅರ್ಜಿಯನ್ನು ಅಧಿಕೃತ ವೆಬ್ಸೈಟ್ www.hqscrecruitment.in ನಲ್ಲಿ ಅರ್ಜಿ ಸಲ್ಲಿಸಬೇಕು.

ಸೇನೆಯ ಸದರ್ನ್ ಕಮಾಂಡ್ ಪ್ರಧಾನ ಕಚೇರಿ ಹೊರಡಿಸಿದ ಅಧಿಸೂಚನೆಯ ಪ್ರಕಾರ, 13 ಎಂಟಿಎಸ್ (ಮೆಸೆಂಜರ್), 3 ಎಂಟಿಎಸ್ (ಕಚೇರಿ), 2 ಕುಕ್ ಹುದ್ದೆಗಳು, 2 ಬಟ್ಟೆ ಒಗೆಯುವವರು, 3 ಕಾರ್ಮಿಕರು ಮತ್ತು 1 ತೋಟಗಾರ ಹುದ್ದೆಗಳು ಖಾಲಿ ಇವೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 18 ರಿಂದ 25 ವರ್ಷದ ವಯೋಮಿತಿಯನ್ನು ನಿಗದಿ ಮಾಡಲಾಗಿದೆ.

Also Read  ಅಜ್ಜಾವರ ಗ್ರಾಮದಲ್ಲಿ ಲಾಭದಾಯಕ ಮೀನು ಕೃಷಿ ತರಬೇತಿ ಕಾರ್ಯಕ್ರಮ

ಎಂಟಿಎಸ್ ಅಂದರೆ ಮಲ್ಟಿ-ಟಾಸ್ಕಿಂಗ್ ಸ್ಟಾಫ್ ಹುದ್ದೆಗೆ ಅಭ್ಯರ್ಥಿಗಳು ಕನಿಷ್ಠ 10 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಅಲ್ಲದೇ, ಸಂಬಂಧಿತ ಕೆಲಸದಲ್ಲಿ ಕನಿಷ್ಠ ಒಂದು ವರ್ಷದ ಅನುಭವ ಇರಬೇಕು. ಎಂಟಿಎಸ್ ಹುದ್ದೆಗೆ ನೇಮಕಾತಿಯ ನಂತರ, ಏಳನೇ ಕೇಂದ್ರ ವೇತನ ಆಯೋಗದ ಪ್ರಕಾರ, ವೇತನ ಶ್ರೇಣಿ ಲೆವೆಲ್ -1, (18000-56900) + ಭತ್ಯೆ ಆಗಿರುತ್ತದೆ. ಎಂಟಿಎಸ್ ನೇಮಕಾತಿಗೆ ಲಿಖಿತ ಪರೀಕ್ಷೆ ಇರುತ್ತದೆ. ಇದರಲ್ಲಿ ಜನರಲ್ ಇಂಟೆಲಿಜೆನ್ಸ್, ಜನರಲ್ ಅವೇರ್ನೆಸ್, ರೀಸನಿಂಗ್ ಮತ್ತು ಇಂಗ್ಲಿಷ್ ಲ್ಯಾಂಗ್ವೇಜ್ ಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಅಲ್ಲದೆ, ಕೌಶಲ್ಯ ಪರೀಕ್ಷೆಯನ್ನು ಸಹ ನಡೆಸಬೇಕಾಗುತ್ತದೆ. ಕೌಶಲ್ಯ ಪರೀಕ್ಷೆಗೆ, ಲಿಖಿತ ಪರೀಕ್ಷೆಯಲ್ಲಿ ಅರ್ಹತಾ ಅಂಕಗಳನ್ನು ಗಳಿಸುವ ಅಭ್ಯರ್ಥಿಗಳನ್ನು ಕರೆಯಲಾಗುತ್ತದೆ.

Also Read  ಮಗಳನ್ನು ಚಾಕುವಿನಿಂದ ಇರಿದು ಕೊಂದ ತಂದೆ.!➤ ಆರೋಪಿ ಅರೆಸ್ಟ್

error: Content is protected !!
Scroll to Top