9 ತಿಂಗಳ ಮಗುವಿನಲ್ಲಿ ಹಕ್ಕಿ ಜ್ವರ ಪತ್ತೆ



(ನ್ಯೂಸ್ ಕಡಬ) newskadaba.com ರಾಂಚಿ, ಆ.‌ 20. 9 ತಿಂಗಳ ಮಗುವಿನಲ್ಲಿ ಹಕ್ಕಿ ಜ್ವರ ಪತ್ತೆಯಾಗಿರುವ ಕುರಿತು ಜಾರ್ಖಂಡ್ ನಿಂದ ವರದಿಯಾಗಿದೆ.








ಜಾರ್ಖಂಡ್‌ನ ರಾಮಗಢ ಜಿಲ್ಲೆಯೊಂದರ ಒಂಬತ್ತು ತಿಂಗಳ ಮಗುವಿಗೆ ಜ್ವರ, ಕೆಮ್ಮು ಮತ್ತು ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಪರೀಕ್ಷಿಸಿದ ವೈದ್ಯರು ಮಗುವಿನ ಮೂಗಿನ ದ್ರವವನ್ನು ಲ್ಯಾಬ್‌ಗೆ ಕಳುಹಿಸಿದ್ದು, ಈ ವೇಳೆ ಹಕ್ಕಿಜ್ವರ ದೃಢಪಟ್ಟಿದೆ ಎಂದು ಮಕ್ಕಳ ವಿಭಾಗದ ವೈದ್ಯ ಡಾ.ರಾಜೀವ್ ಮಿಶ್ರಾ ತಿಳಿಸಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.






error: Content is protected !!
Scroll to Top