ಸ್ಕೂಟರ್ ನಿಂದ ಬಿದ್ದ ವ್ಯಕ್ತಿಯ ಸಹಾಯಕ್ಕೆ ತೆರಳಿದ ರಾಹುಲ್ ಗಾಂಧಿ – ವಿಡಿಯೋ ವೈರಲ್..!



(ನ್ಯೂಸ್ ಕಡಬ)newskadaba.com ನವದೆಹಲಿ, ಆ.10. ಸ್ಕೂಟರ್‌ ನಿಂದ ಬಿದ್ದ ವ್ಯಕ್ತಿಯನ್ನು ಕಂಡು ಕಾರು ನಿಲ್ಲಿಸಿ ರಾಹುಲ್ ಗಾಂಧಿ ಆತನ ನೆರವಿಗೆ ಧಾವಿಸಿ ಸುದ್ದಿಯಾಗಿದ್ದಾರೆ ಎನ್ನಲಾಗಿದೆ.








ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಸಂಸತ್ತಿಗೆ ತೆರಳುತ್ತಿದ್ದಾಗ ರಸ್ತೆಯಲ್ಲಿ ಸ್ಕೂಟರ್‌ ನಿಂದ ಬಿದ್ದ ವ್ಯಕ್ತಿಯನ್ನು ಕಂಡು ಕಾರು ನಿಲ್ಲಿಸಲು ಸೂಚಿಸಿದ್ದಾರೆ. ಕಾರಿನಿಂದ ಇಳಿದು ನೆರವಿಗೆ ಬಂದಿದ್ದಾರೆ. ಬಳಿಕ ಸವಾರನ ಯೋಗ ಕ್ಷೇಮವನ್ನು ವಿಚಾರಿಸಿದ್ದಾರೆ.







ಈ ಘಟನೆಯ ವಿಡಿಯೋವನ್ನು “ಜನನಾಯಕ್ ” ಎಂಬ ಶೀರ್ಷಿಕೆಯೊಂದಿಗೆ ಕಾಂಗ್ರೆಸ್ ತನ್ನ ಅಧಿಕೃತ ಖಾತೆಯಲ್ಲಿ ಹಂಚಿಕೊಂಡಿದ್ದು, ಈ ಕುರಿತ ವಿಡಿಯೋ ಇದೀಗ ವ್ಯಾಪಕವಾಗಿ ವೈರಲ್ ಆಗಿದೆ.

 

error: Content is protected !!
Scroll to Top