ಮರದ ಎಲೆಗಳನ್ನು ತಿಂದ ಸಿಂಹ – ವಿಡಿಯೋ ವೈರಲ್

(ನ್ಯೂಸ್ ಕಡಬ) newskadaba.com ದೆಹಲಿ, ಜು. 22. ಪ್ರಕೃತಿಯಲ್ಲಿ ವಿಚಿತ್ರಗಳು ಆಗಾಗ ಸಂಭವಿಸುತ್ತಲೇ ಇರುತ್ತವೆ ಎಂಬುವುದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊವೊಂದು ವೈರಲ್ ಆಗಿದ್ದು, ಸಿಂಹವೊಂದು ಮರದ ಎಲೆಯನ್ನು ತಿನ್ನುವುದರ ದೃಶ್ಯ ಎಲ್ಲೆಡೆ ಹರಿದಾಡುತ್ತಿದೆ.


ಅನಾದಿಕಾಲದಿಂದಲೂ ಸಿಂಹ ಮಾಂಸಹಾರಿ ಪ್ರಾಣಿಯಾಗಿದ್ದು, ಅದು ಮಾಂಸವನ್ನು ಸೇವಿಸುತ್ತದೆ ಎಂಬುವು ತಿಳಿದ ವಿಚಾರ. ಆದರೆ ಐಎಫ್ಎಸ್ ಅಧಿಕಾರಿ ಸುಸಾಂತಾ ನಂದಾ ಎಂಬುವವರು ಶೇರ್ ಮಾಡಿರುವ ವಿಡಿಯೋ ನೋಡಿ ಎಲ್ಲರೂ ದಿಗ್ಭ್ರಮೆಗೊಂಡಿದ್ದಾರೆ.

Scroll to Top