ಯೂಟ್ಯೂಬರ್‌ ಮೇಲೆ ಐಟಿ ದಾಳಿ- 24 ಲಕ್ಷ ರೂ. ನಗದು ಪತ್ತೆ

(ನ್ಯೂಸ್ ಕಡಬ) newskadaba.com ನವದೆಹಲಿ, ಜು. 18. ಯೂಟ್ಯೂಬ್‌ ಚಾನೆಲ್‌ಗಳಿಂದ ಜನಪ್ರಿಯ ಯೂಟ್ಯೂಬರ್‌ಗಳು ಕೋಟಿಗಟ್ಟಲೆ ಆದಾಯ ಗಳಿಸುತ್ತಿರುವ ಬೆನ್ನಲ್ಲೇ ಇದೀಗ ಯುಟ್ಯೂಬ್‌ ಚಾನೆಲ್‌ ಮಾಲೀಕರ ಮನೆ ಮೇಲೆ ಐಟಿ ದಾಳಿಗಳೂ ನಡೆಯುತ್ತಿವೆ.

ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಯೂಟ್ಯೂಬ್‌ ಚಾನೆಲ್‌ ಒಂದನ್ನು ನಡೆಸುವ ಉತ್ತರ ಪ್ರದೇಶದ ಯೂಟ್ಯೂಬರ್ ಒಬ್ಬರ ಮನೆಯ ಮೇಲೆ ದಾಳಿ ನಡೆಸಿದ್ದು, ಈ ವೇಳೆ 24 ಲಕ್ಷ ರೂ. ನಗದು ಪತ್ತೆಯಾಗಿದೆ. ತಸ್ಲೀಮ್‌ ಎಂಬ ವ್ಯಕ್ತಿ ಹಲವು ವರ್ಷಗಳಿಂದ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದು, ಸುಮಾರು 1 ಕೋಟಿ ರೂ. ಆದಾಯ ಗಳಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

Scroll to Top