ನಭಕ್ಕೆ‌ ಚಿಮ್ಮಿದ ಗಗನನೌಕೆ ಚಂದ್ರಯಾನ-3 ಉಡಾವಣೆ ಯಶಸ್ವಿ

(ನ್ಯೂಸ್ ಕಡಬ) newskadaba.com ನವದೆಹಲಿ, ಜು. 14. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO)ದಿಂದ ಇಂದುಚಂದ್ರಯಾನ -3 ಉಡಾವಣೆಯು ಯಶಸ್ವಿಯಾಗಿ ನೆರವೇರಿತು.

ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ -3 ಯಶಸ್ವಿಯಾಗಿ ಉಡಾವಣೆಗೊಂಡಿದೆ. ಇದು ಆಗಸ್ಟ್ ತಿಂಗಳಲ್ಲಿ ಚಂದ್ರನ ಅಂಗಳಕ್ಕೆ ತಲುಪಲಿದ್ದು, ಚಂದ್ರಯಾನ -3 ಚಂದ್ರನ ಮೇಲ್ಮೈಯನ್ನು ಅಧ್ಯಯನ ಮಾಡುವ ಮತ್ತು ‘ನಮ್ಮ ಜ್ಞಾನವನ್ನು ಹೆಚ್ಚಿಸುವ’ ಹಲವಾರು ವೈಜ್ಞಾನಿಕ ಉಪಕರಣಗಳನ್ನು ಸಹ ಹೊಂದಿದೆ.

Also Read  ಆನ್‍ಲೈನ್ ಬೆಟ್ಟಿಂಗ್ ದಂಧೆಗೆ ಬಿದ್ದು ಸ್ವಂತ ಮನೆಯಿಂದಲೇ ಚಿನ್ನ ಕದ್ದ ಯುವಕ - ಪೊಲೀಸರ ತನಿಖೆ ವೇಳೆ ಮನೆಯವರಿಗೆ ಕಾದಿತ್ತು ಶಾಕ್

ಚಂದ್ರಯಾನ-3 ಮಿಷನ್‌ ಲ್ಯಾಂಡರ್‌ಗೆ “ವಿಕ್ರಮ್” ಎಂದು ಹೆಸರಿಡಲಾಗಿದೆ. ಚಂದ್ರಯಾನ-3 ಮಿಷನ್ ಜೊತೆಯಲ್ಲಿರುವ ರೋವರ್ ಅನ್ನು ಸೂಕ್ತವಾಗಿ “ಪ್ರಜ್ಞಾನ್” ಎಂದು ಹೆಸರಿಸಲಾಗಿದೆ.

error: Content is protected !!
Scroll to Top