ಡಿಕೆಶಿಗೆ ಡಿಸಿಎಂ ಸ್ಥಾನ ಕೊಟ್ಟಿರೋದು ನನಗೆ ತೃಪ್ತಿ ಇಲ್ಲ..!➤ ಡಿಕೆ ಸುರೇಶ್



(ನ್ಯೂಸ್ ಕಡಬ)newskadaba.com ನವದೆಹಲಿ,ಮೇ.19 ರಾಜ್ಯದ ಮುಖ್ಯಮಂತ್ರಿ ಪಟ್ಟದ ವಿವಾದ ಕೊನೆಗೂ ಬಗೆಹರಿದಿದೆ. ಸಿದ್ದರಾಮಯ್ಯನವರಿಗೆ ಮುಖ್ಯಮಂತ್ರಿ ಹಾಗೂ ಡಿಕೆ ಶಿವಕುಮಾರ್ ರವರಿಗೆ ಉಪಮುಖ್ಯಮಂತ್ರಿ ಸ್ಥಾನ ದೊರಕಿದೆ. ಆದರೆ ಡಿಕೆಶಿ ಅವರ ಸೋದರ ಡಿಕೆ ಸುರೇಶ್ ‘ಇದು ನನಗೆ ತೃಪ್ತಿ ತಂದಿಲ್ಲ’ ಎಂದಿದ್ದಾರೆ.







ರಾಜ್ಯದ ಹಿತ ದೃಷ್ಟಿಯಿಂದ ಹೈಕಮಾಂಡ್ ನಿರ್ಧಾರವನ್ನು ಒಪ್ಪಿಕೊಳ್ಳಲೇಬೇಕು. ಡಿಕೆಶಿಗೆ ಡಿಸಿಎಂ ಸ್ಥಾನ ಕೊಟ್ಟಿರೋದು ನನಗೆ ತೃಪ್ತಿ ಇಲ್ಲ. ಅವರು ಸಿಎಂ ಆಗಬೇಕೆಂಬುದೇ ನನ್ನ ಆಸೆಯಾಗಿತ್ತು. ಆದರೆ ಆ ಆಸೆ ಈಡೇರಲಿಲ್ಲ ಎಂದು ಡಿಕೆ ಸುರೇಶ ನುಡಿದಿದ್ದಾರೆ.






 

error: Content is protected !!
Scroll to Top