ವಿಚ್ಚೇದನ ಪಡೆದುಕೊಂಡದ್ದಕ್ಕೆ ಸಂಭ್ರಮಾಚರಣೆ ಮಾಡಿದ ಮಹಿಳೆ…!​

(ನ್ಯೂಸ್ ಕಡಬ)Newskadaba.com ಕೇರಳ,ಮೇ..03 ಇಡೀ ಪ್ರಪಂಚದಲ್ಲೇ ಮದುವೆಗೆ ತನ್ನದೇ ಆದ ವಿಶೇಷ ಮಹತ್ವವಿದೆ. ಆದರೆ ಈ ಆಧುನಿಕ ಯುಗದಲ್ಲಿ ಮದುವೆಯ ಬಳಿಕದ ಸಂಬಂಧವನ್ನು ಉಳಿಸಿಕೊಳ್ಳಲು ಸತಿ-ಪತಿಗಳಿಗೆ ಅಸಾಧ್ಯವೆಂದಾದಾಗ ಅವರು ವಿಚ್ಚೇದನ ಪಡೆದುಕೊಳ್ಳುತ್ತಿರುವುದು ತೀರಾ ಸಾಮಾನ್ಯ ಎನಿಸಿಬಿಟ್ಟಿದೆ. ಈಗ ಇದೇ ರೀತಿಯ ಸಂಭ್ರಮಾಚರಣೆ ಕೇರಳದಲ್ಲೂ ನಡೆದಿದೆ.

ಕಲಾವಿದೆ, ಫ್ಯಾಷನ್‌ ಡಿಸೈನರ್‌ ಆಗಿರುವ ಶಾಲಿನಿ ಎಂಬವರು ತಮ್ಮ ಮದುವೆ ವಿಚ್ಚೇದನವನ್ನೇ ಸಂಭ್ರಮಿಸಿದ್ದಾರೆ. ಅದೂ ಅಂತಿಂಥಾ ಸೆಲೆಬ್ರೇಷನ್‌ ಅಲ್ಲ. ಕೆಂಪು ಗೌನ್‌ ಧರಿಸಿ, ಫೋಟೋಶೂಟ್‌ ಕೂಡಾ ಮಾಡಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಶಾಲಿನಿ ಅವರು ಪೋಸ್ಟ್‌ ಮಾಡಿಕೊಂಡಿರುವ ಫೋಟೋಗಳಿಗೆ ನೆಟ್ಟಿಗರು ಪರ-ವಿರೋಧ ಕಾಮೆಂಟ್‌ಗಳನ್ನೂ ಮಾಡಿದ್ದಾರೆ.

 

Scroll to Top