(ನ್ಯೂಸ್ ಕಡಬ)Newskadaba.com,ಏ.26 ನಿಶ್ಚಿತಾರ್ಥ ನೆರವೇರಿ ಮದುವೆಗೆ ಇನ್ನು 15 ದಿನ ಬಾಕಿ ಇರುವಾಗಲೇ ಅಪಘಾತದಲ್ಲಿ ನವಜೋಡಿಯೊಂದು ದುರಂತ ಸಾವಿಗೀಡಾಗಿರುವ ಘಟನೆ ಆಂಧ್ರಪ್ರದೇಶದ ರಾಜಮಂಡ್ರಿಯಲ್ಲಿ ನಡೆದಿದೆ.ಮೃತರನ್ನು ಮನೆಪಲ್ಲಿ ರಾಜ್ಕುಮಾರ್ (25) ಮತ್ತು ಮಲಿರೆಡ್ಡಿ ದುರ್ಗಾಭವಾನಿ (18) ಎಂದು ಗುರುತಿಸಲಾಗಿದೆ.
ರಾಜಮಂಡ್ರಿಯ ಕೊವ್ವೂರು ಬಳಿ ಹಿಂದಿನಿಂದ ಬಂದ ಲಾರಿಯೊಂದು ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ನವಜೋಡಿ ದುರಂತ ಸಾವಿಗೀಡಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹಗಳನ್ನು ರಾಜಮಂಡ್ರಿ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.