ಪ್ರೀತಿಸಿದ ಹುಡುಗಿಯ ಮೇಲೆ ಕುದಿಯುವ ಎಣ್ಣೆ ಸುರಿದ ಯುವಕ..! 

(ನ್ಯೂಸ್ ಕಡಬ)Newskadaba.com ಆಂಧ್ರಪ್ರದೇಶ,ಏ.25 ಇಂಜಿನಿಯರಿಂಗ್ ವಿದ್ಯಾರ್ಥಿನಿ ಮೇಲೆ ಪ್ರೀತಿಸಿದ ಯುವಕ ಕುದಿಯುವ ಎಣ್ಣೆ ಸುರಿದ ಪರಿಣಾಮ ಆಕೆ ಗಂಭೀರವಾಗಿ ಗಾಯಗೊಂಡಿದ್ದಾಳೆ. ಆಂಧ್ರಪ್ರದೇಶದ ಕಾಕಿನಾಡದಲ್ಲಿರುವ ಜವಾಹರಲಾಲ್ ನೆಹರು ತಾಂತ್ರಿಕ ವಿಶ್ವವಿದ್ಯಾಲಯದ (ಜೆಎನ್‌ಟಿಯು) ವಿದ್ಯಾರ್ಥಿನಿಯನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಎಲೂರು ಜಿಲ್ಲೆಯ ತನ್ನ ಮನೆಯ ಕೊಠಡಿಯಲ್ಲಿ ಯುವಕ ಆಕೆಯ ಕೈ ಮತ್ತು ಕಾಲುಗಳ ಮೇಲೆ ಕುದಿಯುವ ಎಣ್ಣೆಯನ್ನು ಸುರಿದಿದ್ದ.ಸಂತ್ರಸ್ತೆ ಮುಂಜಾನೆ ತಪ್ಪಿಸಿಕೊಂಡು ಪೊಲೀಸರಿಗೆ ದೂರು ನೀಡಿದ ಬಳಿಕ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಆಕೆಯನ್ನು ಏಲೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Also Read  ಒಮಿಕ್ರಾನ್ ಪ್ರಕರಣ ಹೆಚ್ಚಳದ ಹಿನ್ನೆಲೆ ➤ ಸಿಎಂಗಳೊಂದಿಗೆ ಪ್ರಧಾನಮಂತ್ರಿ ಮಹತ್ವದ ಸಭೆ..!

 

 

error: Content is protected !!
Scroll to Top