ಮಗಳ ಚಿಕಿತ್ಸೆಗೆ ಹಣ ಹೊಂದಿಸಲಾಗದೇ ಆತ್ಮಹತ್ಯೆಗೆ ಶರಣಾದ ತಂದೆ

(ನ್ಯೂಸ್ ಕಡಬ)newskadaba.com ಭೋಪಾಲ್, ಏ.20. ವ್ಯಕ್ತಿಯೊಬ್ಬರು ತೀವ್ರ ಆರ್ಥಿಕ ಮುಗ್ಗಟ್ಟು ಎದುರಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.


ಐದು ವರ್ಷಗಳ ಹಿಂದೆ ಅಪಘಾತಕ್ಕೀಡಾಗಿ ನಡೆದಾಡಲು ಸಾಧ್ಯವಾಗದ ಮಗಳ ಚಿಕಿತ್ಸೆಗೆ ಹಣ ಹೊಂದಿಸಲಾಗದೇ ಅತೃಪ್ತರಾಗಿದ್ದರು ಎಂದು ತಿಳಿದುಬಂದಿದೆ.


ಅನುಷ್ಕಾ ಗುಪ್ತಾ ಚಿಕಿತ್ಸೆಗಾಗಿ ಮತ್ತು ಜೀವನ ಸಾಗಿಸಲು ತಂದೆ ಪ್ರಮೋದ್ ಅವರ ಮನೆ, ಅಂಗಡಿಯನ್ನು ಮಾರಾಟ ಮಾಡಿದ್ದಾರೆ. ಅನುಷ್ಕಾ ರಸ್ತೆ ಅಪಘಾತದಲ್ಲಿ ಬೆನ್ನುಮೂಳೆಗೆ ಪೆಟ್ಟಾಗಿದ್ದು, ಅಂದಿನಿಂದ ಹಾಸಿಗೆ ಹಿಡಿದಿದ್ದಾರೆ.

Scroll to Top