ಚಿರಂಜೀವಿ ಸಹೋದರನ ಮಗಳ ದಾಂಪತ್ಯದಲ್ಲಿ ಬಿರುಕು

(ನ್ಯೂಸ್ ಕಡಬ) newskadaba.com, ಹೈದರಾಬಾದ್,  ಏ.15. ಮೆಗಾಸ್ಟಾರ್ ಚಿರಂಜೀವಿ ಅವರ ಸಹೋದರ ನಾಗೇಂದ್ರ ಬಾಬು ಮಗಳು ನಿಹಾರಿಕಾ ಡಿವೋರ್ಸ್ ಸುದ್ದಿಗೆ ಇದೀಗ ಸಾಕ್ಷಿ ಸಿಕ್ಕಿದ್ದು, ಈಗ ಸೋಶಿಯಲ್ ಮೀಡಿಯಾದಲ್ಲಿ ಈ ಸುದ್ದಿ ಸದ್ದು ಮಾಡುತ್ತಿದೆ.

ನಿಹಾರಿಕಾ ಅವರು ಚೈತನ್ಯ ಅವರನ್ನ 2020ರಲ್ಲಿ ಪ್ರೀತಿಸಿ, ಅದ್ದೂರಿಯಾಗಿ ಮದುವೆಯಾಗಿದ್ದರು. ಈಗ ಮದುವೆಯಾಗಿ ಎರಡೇ ವರ್ಷಕ್ಕೆ ದಾಂಪತ್ಯ ಬದುಕಿಗೆ ಅಂತ್ಯ ಹಾಡಲಿದ್ದಾರೆ. ಇನ್ನು ಡಿವೋರ್ಸ್ ಬಗ್ಗೆ ಮೌನವಾಗಿರುವ ಈ ಜೋಡಿ, ದಾಂಪತ್ಯದಲ್ಲಿ ಬಿರುಕಾಗಿರುವ ಬಗ್ಗೆ ಸುಳಿವು ಸಿಕ್ಕಿದೆ.  ವೆಂಕಟ ಚೈತನ್ಯ ಅವರು ನಿಹಾರಿಕಾರನ್ನು ಅನ್‌ಫಾಲೋ ಮಾಡಿದ್ದು, ಮದುವೆ, ಎಂಗೇಜ್‌ಮೆಂಟ್ ಫೋಟೋಗಳನ್ನು ಡಿಲೀಟ್ ಮಾಡಿದ್ದರು. ಆದರೂ ಕೂಡ ನಿಹಾರಿಕಾ ಅವರು ಸೈಲೆಂಟ್ ಆಗಿದ್ದರು. ಆದರೆ ಈಗ ಅವರು ಕೂಡ ಗಂಡನನ್ನು ಅನ್‌ಫಾಲೋ ಮಾಡಿ, ಫೋಟೋಸ್ ತೆಗೆದುಹಾಕಿರುವುದು ಡಿವೋರ್ಸ್ ಅನುಮಾನಕ್ಕೆ ಸಾಕ್ಷಿ ನೀಡಿದಂತಾಗಿದೆ.

Scroll to Top