ಕಾಸರಗೋಡು: ಪತಿಯನ್ನು ಕತ್ತಿಯಿಂದ ಕಡಿದು ಹತ್ಯೆಗೈದ ಪತ್ನಿ ➤ ಆರೋಪಿ ಪೊಲೀಸ್ ವಶಕ್ಕೆ

crime, arrest, suspected


(ನ್ಯೂಸ್ ಕಡಬ)newskadaba.com ಕಾಸರಗೋಡು, ಏ.08. ಪತ್ನಿ ಯು ಪತಿಯನ್ನು ಕಡಿದು ಕೊಲೆಗೈದ ದಾರುಣ ಘಟನೆ ಪಾಣತ್ತೂರಿ ನಲ್ಲಿ ನಡೆದಿದೆ.







ಪುತ್ತೂರಡ್ಕದ ಬಾಬು(54) ಮೃತ ಪಟ್ಟವರು ಎಂದು ಗುರುತಿಸಲಾಗಿದೆ. ಕೃತ್ಯಕ್ಕೆ ಸಂಬಂಧ ಪಟ್ಟಂತೆ ಪತ್ನಿ ಸೀಮಂತಿನಿ ನನ್ನು ಪೊಲೀಸರು ವಶಕ್ಕೆ ತೆಗೆದು ಕೊಂಡಿದ್ದಾರೆ.






ಕೌಟುಂಬಿಕ ಕಲಹ ಕೃತ್ಯಕ್ಕೆ ಕಾರಣ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ. ದಿನಂಪ್ರತಿ ಪಾನ ಮತ್ತರಾಗಿ ಮನೆಗೆ ಬರುತ್ತಿದ್ದ ಬಾಬು ಮನೆಗೆ ಬಂದ ಬಳಿಕ ಇಬ್ಬರ ಜಗಳ ವಾಗಿದ್ದು, ಈ ಸಂದರ್ಭದಲ್ಲಿ ಕತ್ತಿ ಯಿಂದ ಬಾಬು ಪತ್ನಿಯ ಮೇಲೆ ಹಲ್ಲೆ ನಡೆಸಿದ್ದು, ಬಳಿಕ ಇದೇ ಕತ್ತಿ ಯಿಂದ ಬಾಬು ವನ್ನು ಕಡಿದು ಕೊಲೆ ಗೈದಿದ್ದಾಳೆ.

 

error: Content is protected !!
Scroll to Top