ವಿಷಕಾರಿ ಹೊಗೆಯಿಂದ ಒಂದೇ ಕುಟುಂಬದ 6 ಮಂದಿ ಉಸಿರುಗಟ್ಟಿ ಮೃತ್ಯು   

(ನ್ಯೂಸ್ ಕಡಬ)newskadaba.com ನವದೆಹಲಿ, ಮಾ.31. ದೆಹಲಿಯ ಶಾಸ್ತ್ರಿ ಪಾರ್ಕ್ ಪ್ರದೇಶದಲ್ಲಿ ಒಂದೇ ಕುಟುಂಬದ ಆರು ಮಂದಿ ಸೊಳ್ಳೆ ಕಾಯಿಲ್‌ನಿಂದ ಬಿಡುಗಡೆಯಾದ ವಿಷಕಾರಿ ಹೊಗೆಯಿಂದ ಉಸಿರುಗಟ್ಟಿ ಮೃತಪಟ್ಟ ಘಟನೆ ನಡೆದಿದೆ. ಸೊಳ್ಳೆ ಕಾಟದಿಂದ ತಪ್ಪಿಸಿಕೊಳ್ಳಲೆಂದು ಇಡೀ ರಾತ್ರಿ ಸೊಳ್ಳೆ ಕಾಯಿಲ್‌ ಹಚ್ಚಿಕೊಂಡಿದ್ದರು ಎನ್ನಲಾಗಿದೆ.

ರಾತ್ರಿ ವೇಳೆ ಸೊಳ್ಳೆ ಕಾಯಿಲ್ ಮನೆಯೊಳಗಿನ ಹಾಸಿಗೆಯ ಮೇಲೆ ಬಿದ್ದಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ವಿಷಕಾರಿ ಹೊಗೆಯು ಬಲಿಪಶುಗಳು ಪ್ರಜ್ಞೆಯನ್ನು ಕಳೆದುಕೊಳ್ಳುವಂತೆ ಮಾಡಿದ್ದು, ಬಳಿಕ ಉಸಿರುಗಟ್ಟಿ ಮೃತಪಟ್ಟಿದ್ದಾರೆ.

 

Scroll to Top