ಸಂಸತ್ತಿನಲ್ಲಿ ಎಲ್ಲರಿಗೂ ವಾಕ್ ಸ್ವಾತಂತ್ರ್ಯ ಇದೆ ➤ ಅಮಿತ್ ಶಾ



(ನ್ಯೂಸ್ ಕಡಬ) newskadaba.com ನವದೆಹಲಿ, ಮಾ. 21. ಸಂಸತ್ತಿನಲ್ಲಿ ಮಾತನಾಡುವುದನ್ನು ತಡೆಯುವುದು ಅಸಾಧ್ಯ. ವಾಕ್ ಸ್ವಾತಂತ್ರ್ಯ ಎಂಬುವುದು ಎಲ್ಲರಿಗೂ ಇದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.







ಅವರು ಸುದ್ದಿಸಂಸ್ಥೆಯೊಂದರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ ಸರ್ಕಾರ ಮಾತುಕತೆಗೆ ಸಿದ್ದವಿದ್ದರೂ, ಪ್ರತಿಪಕ್ಷಗಳು ಬರುತ್ತಿಲ್ಲ. ಸರ್ಕಾರ ಯಾರೊಂದಿಗೆ ಮಾತನಾಡಬೇಕೆಂದಿದೆಯೋ ಅವರು ಮಾಧ್ಯಮಗಳ ಮುಂದೆ ಕುಳಿತು ಮಾತನಾಡುತ್ತಿದ್ದಾರೆ. ಬಳಿಕ ವಾಕ್ ಸ್ವಾತಂತ್ರ್ಯ ಬೇಕೆಂದು ಸಂಸತ್ತಿನಲ್ಲಿ ಘೋಷಣೆ ಕೂಗುತ್ತಾರೆ. ಆದರೆ ಸಂಸತ್ತಿನಲ್ಲಿ ಮಾತನಾಡುವ ಸ್ವಾತಂತ್ರ್ಯ ಎಲ್ಲರಿಗೂ ಇದೆ ಎಂದರು.






error: Content is protected !!
Scroll to Top