➤ ಅಧ್ಯಯನ ಪ್ರವಾಸಕ್ಕೆಂದು ಇಸ್ರೇಲ್ ಗೆ ತೆರಳಿ ನಾಪತ್ತೆಯಾಗಿದ್ದ ಕೇರಳದ ರೈತ ಭಾರತಕ್ಕೆ ವಾಪಸ್

(ನ್ಯೂಸ್ ಕಡಬ) newskadaba.com. ನವದೆಹಲಿ ಫೆ.27.  ಅಧ್ಯಯನ ಪ್ರವಾಸಕ್ಕೆಂದು ಕೇರಳದಿಂದ ಇಸ್ರೇಲ್ ಗೆ ತೆರಳಿದ್ದ ಕೃಷಿಕರೊಬ್ಬರು ನಾಪತ್ತೆಯಾಗಿದ್ದು, ಕೆಲ ದಿನಗಳ ಬಳಿಕ ಮತ್ತೆ ಭಾರತಕ್ಕೆ ವಾಪಾಸಾಗಿದ್ದಾರೆ.

ಸರ್ಕಾರಿ ಪ್ರಾಯೋಜಿತ ಪ್ರವಾಸದ ಭಾಗವಾಗಿ ಇಸ್ರೇಲ್ ಗೆ ತೆರಳಿದ್ದ ತಂಡದ ಪೈಕಿ ರೈತ ಬಿಜು ಕುರಿಯನ್  ನಾಪತ್ತೆಯಾಗಿದ್ದರು. ಅಧ್ಯಯನ ಪೂರ್ಣಗೊಳಿಸಿ ಫೆ.17 ಕ್ಕೆ ಭಾರತಕ್ಕೆ ಹಿಂದಿರುಗಬೇಕಿತ್ತು. ಆದರೆ ಈ ಮಧ್ಯೆ ಬಿಜು ಕುರಿಯನ್  ನಾಪತ್ತೆಯಾಗಿದ್ದು,  ಇದೀಗ ಸ್ಥಳೀಯರ ನೆರವಿನಿಂದ ಸುರಕ್ಷಿತವಾಗಿ ಭಾರತಕ್ಕೆ ಹಿಂದಿರುಗಿದ್ದಾರೆ.

Scroll to Top