➤ ಖ್ಯಾತ ಮಲಯಾಳಂ ನಟಿ, ನಿರೂಪಕಿ ಸುಬಿ ಸುರೇಶ್ ನಿಧನ

(ನ್ಯೂಸ್ ಕಡಬ) newskadaba.com. ಕೊಚ್ಚಿ. ಫೆ.22.  ಖ್ಯಾತ ಮಲಯಾಳಂ ಕಿರುತೆರೆ ನಟಿ ಹಾಗೂ ನಿರೂಪಕಿ ಸುಬಿ ಸುರೇಶ್ ಇಂದು ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾದರು. ಅವರಿಗೆ 42 ವರ್ಷ ವಯಸ್ಸಾಗಿತ್ತು.  ಅವರು ಯಕೃತ್ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು.

ಸುಬಿ ಓರ್ವ ನೃತ್ಯಗಾತಿ ಮತ್ತು ಕಾಮಿಡಿಯನ್ ಆಗಿ ವೃತ್ತಿಜೀವನ ಆರಂಭಿಸಿದ್ದರು. ಮುಂದೆ ಅವರು ಟಿವಿ ಶೋಗಳ ನಿರೂಪಕಿಯಾಗಿ ಅನೇಕ ಯಶಸ್ವಿ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದರು.

Scroll to Top