ನೀತಿ ಆಯೋಗದ ನೂತನ ಸಿಇಒ ಆಗಿ ಬಿವಿಆರ್ ಸುಬ್ರಹ್ಮಣ್ಯಂ ನೇಮಕ

(ನ್ಯೂಸ್ ಕಡಬ)newskadaba.com  ನವದೆಹಲಿ, ಫೆ.21. ಎರಡು ವರ್ಷಗಳ ಅವಧಿಗೆ ನೀತಿ ಆಯೋಗದ ಸಿಇಒ ಆಗಿ ನೇಮಕಗೊಂಡಿದ್ದ ಪರಮೇಶ್ವರನ್ ಅಯ್ಯರ್ ಅವರು ಏಳು ತಿಂಗಳ ನಂತರ ಹುದ್ದೆಯಿಂದ ಕೆಳಗಿಳಿದಿದ್ದು, ಇದೀಗ ಸರ್ಕಾರವು ಬಿವಿಆರ್ ಸುಬ್ರಹ್ಮಣ್ಯಂ ಅವರನ್ನು ಮುಂದಿನ ಸಿಇಒ ಆಗಿ ನೇಮಿಸಿದೆ.

1987ರ ಬ್ಯಾಚ್‌ನ ಛತ್ತೀಸ್‌ಗಢ ಕೇಡರ್‌ನ ಐಎಎಸ್ ಅಧಿಕಾರಿಯಾಗಿದ್ದು, ವಾಣಿಜ್ಯ ಕಾರ್ಯದರ್ಶಿಯಾಗಿ ನಿವೃತ್ತರಾದ ಸುಬ್ರಹ್ಮಣ್ಯಂ ಅವರು ಈ ಹಿಂದೆ ಪ್ರಧಾನ ಮಂತ್ರಿ ಕಚೇರಿಯಲ್ಲಿಯೂ ಸೇವೆ ಸಲ್ಲಿಸಿದ್ದಾರೆ.

Scroll to Top